ಡೆಲಿವರಿ ಬಾಯ್‌ ಕಾಮರಾಜ್‌ ಬೆಂಬಲಕ್ಕೆ ನಿಂತ ನಟಿಯರು | ಜನಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳಿಂದಲೂ ಬೆಂಬಲ

ಇತ್ತೀಚೆಗೆ ವಿವಾದ ಸೃಷ್ಟಿಸಿದ ಫುಡ್‌ ಡೆಲಿವರಿ ಬಾಯ್‌ ಕಾಮರಾಜ್‌ ಅವರ ಬೆಂಬಲಕ್ಕೆ ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ ನಟಿಯರು ನಿಂತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಜಸ್ಟಿಸ್‌ ಫಾರ್‌ ಕಾಮರಾಜ್‌ ಎಂಬ ಹೋರಾಟ ಶುರುವಾಗಿದ್ದು, ಜನಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳೂ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ನಟಿಯರಾದ ಪರಿಣಿತಿ ಚೋಪ್ರಾ, ಪ್ರಣೀತಾ ಸುಭಾಷ್‌, ಸಂಜನಾ ಗಲ್ರಾಣಿ ಕಾಮರಾಜ್‌ಗೆ ಬೆಂಬಲ ಸೂಚಿಸಿ ಪೋಸ್ಟ್‌ ಮಾಡಿದ್ದಾರೆ.

ಮಹಿಳೆ ಮುಖಕ್ಕೆ ಪಂಚ್ ಮಾಡಿದ್ದ ಜೋಮ್ಯಾಟೋ ಕಾಮರಾಜ ಅರೆಸ್ಟ್

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾಡೆಲ್‌ ಹಿತಾಶಾ, ತನ್ನ ಮೇಲೆ ಝೊಮ್ಯಾಟೋ ಡೆಲಿವರಿ ಬಾಯ್‌ ಕಾಮರಾಜ್‌ ಮೂಗಿಗೆ ಗುದ್ದಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಝೊಮ್ಯಾಟೋ ಕಾಮರಾಜ್‌ ಅವರನ್ನು ಕೆಲಸದಿಂದ ಕಿತ್ತು ಹಾಕಿತ್ತು.

ಕಾಮರಾಜ್‌ ಬಂಧನವಾಗಿತ್ತು. ಇದೀಗ ಜಾಮೀನು ಪಡೆದು ಹೊರಬಂದಿರುವ ಕಾಮರಾಜ್‌, ತಾನು ಆಕೆಯ ಮೇಲೆ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿ ಈ ಕಾರಣಕ್ಕೆ ತನ್ನ ಕೆಲಸ ಹೋಗಿದ್ದರ ಕುರಿತು ನೋವು ತೋಡಿಕೊಂಡಿದ್ದರು.

ಆಕೆಯೇ ನನಗೆ ಚಪ್ಪಲಿಯಿಂದ ಹೊಡೆದರು: ಝೋಮ್ಯಾಟೋ ಬಾಯ್‌

ಕಾಮರಾಜ್‌ ಅವರಿಗೆ ಬೆಂಬಲ ಸೂಚಿಸಿರುವ ಪ್ರಣೀತಾ, ‘ನನಗೆ ಡೆಲಿವರಿ ಬಾಯ್‌ ಕಾಮರಾಜ್‌ ಮಾತಿನಲ್ಲಿ ಸತ್ಯವಿದೆ ಎಂದು ಅನಿಸುತ್ತಿದೆ. ಅವರ ಮಾನಹಾನಿ ಮಾಡಿದ್ದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ. ಸಂಜನಾ ಗಲ್ರಾಣಿ, ‘ ಸತ್ಯ ಏನು ಅಂತ ನನಗೆ ಗೊತ್ತಿಲ್ಲ.

ಆದರೂ ಈ ಡೆಲಿವರಿ ಬಾಯ್‌ ನೋಡಿದರೆ ಪಾಪ ಅನಿಸುತ್ತೆ. ಅವರ ಉದ್ಯೋಗ ಹೋಗಿದೆ, ಆತ ಬಡತನದಲ್ಲಿರುವಂತಿದೆ. ಆತ ತಪ್ಪು ಮಾಡಿರಬಹುದು. ಆದರೆ ಕ್ಷಮೆಯನ್ನೂ ಕೇಳಿದ್ದಾರಲ್ಲಾ. ಕ್ಷಮಿಸುವುದು ಉತ್ತಮ’ ಎಂದಿದ್ದಾರೆ. ಜೊತೆಗೆ ಪರಿಣಿತಿ ಚೋಪ್ರಾ ಅವರೂ ಕಾಮರಾಜ್‌ ನೆರವಿಗೆ ನಿಂತಿದ್ದಾರೆ.