Asianet Suvarna News Asianet Suvarna News

ಪ್ರಭಾಸ್ ಚಿಕ್ಕಪ್ಪ, ಟಾಲಿವುಡ್ ರೆಬೆಲ್ ಸ್ಟಾರ್ ಕೃಷ್ಣಂ ರಾಜು ನಿಧನ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಚಿಕ್ಕಪ್ಪ, ಟಾಲಿವುಡ್ ರೆಬಲ್ ಸ್ಟಾರ್ ಕೃಷ್ಣಂ ರಾಜು ಇಂದು (ಸೆಪ್ಟಂಬರ್ 11) ಬೆಳಗ್ಗೆ ನಿಧನರಾಗಿದ್ದಾರೆ. 83 ವರ್ಷದ ನಟ ಕೃಷ್ಣಂ ರಾಜು ಇಂದು  ಮುಂಜಾನೆ 3.25ಕ್ಕೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

Prabhas uncle and Rebel Star Krishnam Raju Passes Away sgk
Author
First Published Sep 11, 2022, 9:35 AM IST | Last Updated Sep 11, 2022, 9:37 AM IST

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಚಿಕ್ಕಪ್ಪ, ಟಾಲಿವುಡ್ ರೆಬಲ್ ಸ್ಟಾರ್ ಕೃಷ್ಣಂ ರಾಜು ಇಂದು (ಸೆಪ್ಟಂಬರ್ 11) ಬೆಳಗ್ಗೆ ನಿಧನರಾಗಿದ್ದಾರೆ. 83 ವರ್ಷದ ನಟ ಕೃಷ್ಣಂ ರಾಜು ಇಂದು  ಮುಂಜಾನೆ 3.25ಕ್ಕೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕೃಷ್ಣರಾಜು  ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ.  ಕೃಷ್ಣಂರಾಜು  ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಇಂದು ಸಂಜೆ ಅಂತಿಮ ವಿಧಿವಿದಾನಗಳು ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

ಕೃಷ್ಣಂರಾಜು ನಿಧನಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು, ಆಪ್ತರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕೃಷ್ಣಂ ರಾಜು ಅವರ ಸಿನಿಮಾರಂಗ ಮಾತ್ರವಲ್ಲದೇ ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಮೊದಲ ನಟ ಇವರಾದ್ದಾರೆ.  1940ರಲ್ಲಿ  ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲಟೂರು ಗ್ರಾಮದಲ್ಲಿ ಕೃಷ್ಣಂರಾಜು ಜನಿಸಿದರು. 1966ರಲ್ಲಿ ಕೃಷ್ಣಂ ರಾಜು ತೆಲುಗಿನ ಚಿಲಕ ಗೋರಿಂಕ ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶ ಮಾಡಿದರು. ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ  ಜನಪ್ರಿಯ ನಟನಾಗಿ ಗುರುತಿಸಿಕೊಂಡ ಕೃಷ್ಣಂ ರಾಜು ಸುಮಾರು 190ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಬಲ್ ಸ್ಟಾರ್ ಎನ್ನುವ ಬಿರುದನ್ನು ಪಡೆದಿದ್ದಾರೆ.  ಕೃಷ್ಣಂ ರಾಜು ಅವರ ಕೊನೆಯ ಸಿನಿಮಾ ರಾಧೆ ಶ್ಯಾಮ್. ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿದ್ದರು.  

Radhe Shyam: ಪರಮಹಂಸ ಪಾತ್ರಕ್ಕೆ ಬಣ್ಣ ಹಚ್ಚಿದ ಹಿರಿಯ ನಟ ಕೃಷ್ಣಂ ರಾಜು

 1990ರ ದಶಕದಲ್ಲಿ ಕೃಷ್ಣಂ ರಾಜು ರಾಜಕೀಯದಲ್ಲಿ ಸಕ್ರಿಯರಾದರು. ಬಿಜೆಪಿಗೆ ಸೇರಿದರು. ರಾಜಕೀಯದಲ್ಲೂ ಯಶಸ್ಸು ಕಂಡರು. 1999 ರಿಂದ 2004 ರವರೆಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ ಅವರು 2009 ರಲ್ಲಿ ಚಿರಂಜೀವಿ ಅವರ ಪ್ರಜಾ ರಾಜ್ಯಮ್ ಪಕ್ಷಕ್ಕೆ ಸೇರಿದರು ಮತ್ತು ರಾಜಮಂಡ್ರಿಯಿಂದ ಲೋಕಸಭೆಗೆ ಸ್ಪರ್ಧಿಸಿ ಸೋತರು.

5 ದಶಕಗಳ ಕಾಲ ತಮ್ಮ ನಟನಾ ವೃತ್ತಿಜೀವನದಲ್ಲಿ ಸುಮಾರು 190 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 5 ಫಿಲ್ಮ್‌ಫೇರ್ ಪ್ರಶಸ್ತಿಗಳು, 3 ರಾಜ್ಯ ನಂದಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

ಪ್ರಭಾಸ್ ಮದುವೆ ಯಾವಾಗ? ಜ್ಯೋತಿಷಿಯ ಶಾಕಿಂಗ್ ಭವಿಷ್ಯ!

ಕೃಷ್ಣಂರಾಜು ನಿಧನಕ್ಕೆ ನಟಿ ಅನುಷ್ಕಾ ಶೆಟ್ಟಿ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೃಷ್ಣಂರಾಜು ಜೊತೆ ಇರುವ ಫೋಟೋ ಶೇರ್ ಮಾಡಿ. ಆತ್ಮಕ್ಕೆ ಶಾಂತಿ ಕೋರಿದ್ದಾರೆ. ತಮ್ಮ ಹೃದಯದಲ್ಲಿ ನೀವು ಸದಾ ಜೀವಂತ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios