ಪ್ರಭಾಸ್ ಮತ್ತು ಕೃತಿ ಸನೊನ್ ನಟನೆಯ ಆದಿಪುರುಷ್ ಸಿನಿಮಾ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ ವೈರಲ್ ಆಗಿವೆ.  

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷೆಯ ಸಿನಿಮಾ ಆದಿಪುರುಷ್ ಅದ್ದೂರಿಯಾಗಿ ತೆರೆಗೆ ಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಆದಿಪುರುಷ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಭಾಸ್ ನಟನೆಗೆ ಸೂಪರ್ ಎಂದಿರುವ ಫ್ಯಾನ್ಸ್ ನಿರ್ದೇಶನ ಹಾಗೂ ವಿಎಕ್ಸ್‌ಎಫ್‌ಗೆ ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಸಿನಿಮಾ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಇದೊಂದು ಕಾರ್ಟೂನ್, ವಿಡಿಯೋ ಗೇಮ್ ಎಂದು ಕಾಲೆಳೆಯುತ್ತಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸಿನಿಮಾದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, 600 ಕೋಟಿಯಲ್ಲಿ ಆದಿಪುರುಷ್ ಸಿನಿಮಾ ತಯಾರಾಗಿದೆ. ಭಾರತದ ಜನಸಂಖ್ಯೆಯೇ 150 ಕೋಟಿ. ಭಾರತದಲ್ಲಿರುವ ಜನರಿಗೆ 3 ಕೋಟಿ ಕೊಟ್ಟಿದ್ದರೆ ದೇಶದಲ್ಲಿ ಬಡತನ ನಿವಾರಣೆ ಆಗುತ್ತಿತ್ತು. ಇನ್ನೂ 150 ಕೋಟಿ ಉಳಿಯುತ್ತೆ. ಅದರಲ್ಲಿ ಬೇಕಾದರೇ ಆದಿಪುರುಷ್ ಸಿನಿಮಾ ಮಾಡಬಹುದಿತ್ತು' ಎಂದು ಹೇಳಿದ್ದಾರೆ.

Scroll to load tweet…

ನೆಟ್ಟಿಗರು ಆದಿಪುರುಷ್ ಮೀಮ್ಸ್‌ಗಳನ್ನು ಶೇರ್ ಮಾಡಿ ಸಿನಿಮಾತಂಡದ ಕಾಲೆಳೆಯುತ್ತಿದ್ದಾರೆ. ಸಿನಿಮಾ ನೋಡಿ ಹೊರಬಂದ ಅಭಿಮಾನಿಯೊಬ್ಬ ನೆಗೆಟಿವ್ ಕಾಮೆಂಟ್ ಮಾಡಿದ ಕಾರಣ ಸರಿಯಾಗಿ ಥಳಿಸಿದ್ದರು. ಬಳಿಕ ಪ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಲು ಪ್ರಾರಂಭಿಸಿದರು. ಮೀಮ್ಸ್‌ಗಳನ್ನು ಮಾಡಿ ಹರಿಬಿಡುತ್ತಿದ್ದಾರೆ.

Scroll to load tweet…
Scroll to load tweet…

ಆದಿಪುರುಷ್ ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಪ್ರಭಾಸ್, ಕೃತಿ ಸನೋನ್, ದೇವದತ್ತ ನಾಗೆ, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರಭಾಸ್ ರಾಮನಾಗಿ ಕಾಣಿಸಿಕೊಂಡರೆ ಕೃತಿ ಸನೊನ್ ಸೀತೆಯಾಗಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 

ಭಾರಿ ನಿರೀಕ್ಷೆಯೊಂದಿಗೆ ಬಂದ ಆದಿಪುರುಷ್ ಮೊದಲ ದಿನ 80 ರಿಂದ 85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. 150 ಕೋಟಿ ರೂಪಾಯಿ ವರೆಗೂ ನಿರೀಕ್ಷೆ ಮಾಡಲಾಗಿತ್ತು. ಆದರೀಗ ಸಿನಿಮಾ ನಿರಾಸೆ ಮೂಡಿಸಿದೆ. ಇದು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ.