'ಸಲಾರ್' ಬಿಗ್ ಅಪ್‌ಡೇಟ್; ಪ್ರಶಾಂತ್ ನೀಲ್ ಜೊತೆ ಫೋಟೋ ಹಂಚಿಕೊಂಡು ಶ್ರುತಿ ಹಾಸನ್ ಹೇಳಿದ್ದೇನು?
ನಟಿ ಶ್ರುತಿ ಹಾಸನ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಫೋಟೋ ಶೇರ್ ಮಾಡಿ ಬಿಗ್ ಅಪ್ ಡೇಟ್ ನೀಡಿದ್ದಾರೆ.
ದಕ್ಷಿಣ ಭಾರತದ ಬಹು ನಿರೀಕ್ಷೆಯ ಸಲಾರ್ ಸಿನಿಮಾದ ಬಗ್ಗೆ ನಟಿ ಶ್ರುತಿ ಹಾಸನ್ ಬಿಗ್ ಅಪ್ ಡೇಟ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಇಂಟ್ರೆಸ್ಟಿಂಗ್ ಮಾಹಿತಿ ನೀಡಿದ್ದಾರೆ. ಕಾಲಿವುಡ್ ಸ್ಟಾರ್ ಶ್ರುತಿ, ಸಲಾರ್ ಸಿನಿಮಾದ ಚಿತ್ರೀಕರಣ ಮುಗಿಸಿರುವುದಾಗಿ ಹೇಳಿದ್ದಾರೆ. ಸಲಾರ್ ಸಿನಿಮಾ ಸೆಟ್ಟೇರಿದಾಗಿನಿಂದ ಕುತೂಹಲ ದುಪ್ಪಟಾಗಿತ್ತು. ಸಿನಿಮಾದ ಬಗ್ಗೆ ಅಪ್‌ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲೇ ಹೋದರು, ಯಾವುದೇ ಕಾರ್ಯಕ್ರಮದಲ್ಲೂ ಸಲಾರ್ ಅಪ್ ಡೇಟ್ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದೀಗ ಶ್ರುತಿ ಹಾಸನ್ ತನ್ನ ಭಾಗದ ಚಿತ್ರೀಕರಣ ಮುಗಿದಿರುವುದಾಗಿ ಹೇಳಿದ್ದಾರೆ.
ಸಲಾರ್ ಸಿನಿಮಾದ ತನ್ನ ಭಾಗದ ಮುಕ್ತಾಯವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ನಿರ್ದೇಶಕ ಪ್ರಸಾಂತ್ ನೀಲ್ ಮತ್ತು ಭುವನ್ ಗೌಡ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾರೆ. ಅಂದಹಾಗೆ ಶ್ರುತಿ ಸಲಾರ್ ಸಿನಿಮಾದಲ್ಲಿ ಆದ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಲಾರ್ ನನ್ನ ಪಾತ್ರ ಮುಕ್ತಾಯವಾಗಿದೆ. ನಿಮ್ಮ ಆದ್ಯಾ ಮಾಡಿದ್ದಕ್ಕೆ ಪ್ರಶಾಂತ್ ನೀಲ್ ತುಂಬಾ ಧನ್ಯವಾದಗಳು. ನೀವು ಅಸಾಧಾರಣ. ಅದ್ಭುತ ಡಾರ್ಲಿಂಗ್ ಪ್ರಭಾಸ್ ಅವರಿಗೂ ಧನ್ಯವಾದಗಳು. ಭುವನ್ ಗೌಡ ಹಾಗೂ ಹೊಂಬಾಳೆ ಫಿಲ್ಮ್ಸ್ ಮತ್ತು ಎಲ್ಲಾ ತಂಡದೊಂದಿಗೆ ಈ ವಿಶೇಷ ಸಿನಿಮಾದಲ್ಲಿ ಕೆಲಸ ಮಾಡಿರುವುದು ತುಂಬಾ ಅದ್ಭುತವಾಗಿತ್ತು. ಸಕಾರಾತ್ಮಕತೆಯಿಂದ ತುಂಬಿತ್ತು. ನಿಜಕ್ಕೂ ಒಂದು ಕುಟುಂಬದಂತೆ ಇತ್ತು' ಎಂದು ಹೇಳಿದ್ದಾರೆ.
ಶ್ರುತಿ ಹಾಸನ್ ಪಾತ್ರ ಮುಕ್ತಾಯವಾಗುವ ಮೂಲಕ ಸದ್ಯದಲ್ಲೇ ಸಲಾರ್ ಸಿನಿಮಾ ಚಿತ್ರೀಕರಣ ಕೂಡ ಮುಕ್ತಾಯವಾಗಲಿದೆ. ಸದ್ಯ ಸಲಾರ್ ಸಿನಿಮಾದಿಂದ ಪ್ರಭಾಸ್ ಫೋಟೋ ಬಿಟ್ಟರೇ ಬೇರೆ ಯಾವುದೇ ಅಪ್ ಡೇಟ್ ನೀಡಿಲ್ಲ ನೀಡಿಲ್ಲ ಸಿನಿಮಾತಂಡ. ಚಿತ್ರೀಕರಣ ವೇಳೆ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಲೀಕ್ ಆಗಿ ವೈರಲ್ ಆಗಿತ್ತು. ಚಿತ್ರೀಕರಣ ವೇಳೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೆಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿತ್ತು. ಸಿನಿಮಾ ತಂಡ ಯಾವುದೇ ಮಾಹಿತಿ ಬಹಿರಂಗ ಪಡಿಸದೆ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಸಿನಿಮಾ ಪ್ರಮೋಷನ್‌ಗೆ ಚಕ್ಕರ್; ಬಾಯ್‌ಫ್ರೆಂಡ್ ಜೊತೆ ಶ್ರುತಿ ಹಾಸನ್ ಮಸ್ತಿ, ಫೋಟೋ ವೈರಲ್
ಪ್ರಭಾಸ್ ಕೈಯಲ್ಲಿರುವ ಸಿನಿಮಾಗಳಲ್ಲೇ ಸಲಾರ್ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಕೆಜಿಎಫ್ 2 ಸಿನಿಮಾ ಬಳಿಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಬರ್ತಿರುವ ಸಿನಿಮಾ ಇದಾಗಿದೆ. ಹಾಗಾಗಿ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಿಂದನೇ ಹೊರ ನಡೆದಿದ್ದಾರೆ. ಪ್ರಶಾಂತ್ ನೀಲ್ ಹೊರ ನಡೆದಿರುವುದು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಪ್ರಶಾಂತ್ ನೀಲ್ ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾಗಳನ್ನು ನಾಡುತ್ತಿದ್ದಾರೆ, ಪರಭಾಷೆಗೆ ಫಿಕ್ಸ್ ಆದರೂ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಟ್ರೋಲ್ ಗಳ ಬೆನ್ನಲ್ಲೇ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಿಂದ ಹೊರ ನಡೆದರು.
'ಮಾನಸಿಕ ಸಮಸ್ಯೆ' ಎಂದವರ ವಿರುದ್ಧ ನಟಿ ಶುತ್ರಿ ಹಾಸನ್ ಗರಂ
ಸಲಾರ್ ಸಿನಿಮಾ ಹೊಂಬಾಳೆ ಫಿಲ್ಮ್ಸ್ ನಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ಸಲಾರ್ ಮೂಲಕ ಮತ್ತೊಂದು ಹಿಟ್‌ಗೆ ಎದುರು ನೋಡುತ್ತಿದೆ. ಅಂದಹಾಗೆ ಬಹುನಿರೀಕ್ಷೆಯ ಸಲಾರ್ ಸಿನಿಮಾ ಇದೇ ವರ್ಷ ಸೆಪ್ಟಂಬರ್ 28ರಂದು ರಿಲೀಸ್ ಆಗುತ್ತಿದೆ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನೊಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.