'ಪ್ಯಾನ್ ಇಂಡಿಯಾ ಸ್ಟಾರ್‌' ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್ ಅ್ಯಂಡ್ ಔಟ್ ಲವ್ ಕಮ್ ರೊಮ್ಯಾಂಟಿಕ್ 'ರಾಧೆ ಶ್ಯಾಮ್' ಮಾರ್ಚ್‌ 11ರಂದು ರಿಲೀಸ್ ಆಗ್ತಿದೆ. ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, ರಾಧೆ ಶ್ಯಾಮ್, ಮೆಟಾವರ್ಸ್‌ನಲ್ಲಿ ಟ್ರೇಲರ್ ಬಿಡುಗಡೆ ಮಾಡಿದ ವಿಶ್ವದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

'ಪ್ಯಾನ್ ಇಂಡಿಯಾ ಸ್ಟಾರ್‌' ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್ ಅ್ಯಂಡ್ ಔಟ್ ಲವ್ ಕಮ್ ರೊಮ್ಯಾಂಟಿಕ್ 'ರಾಧೆ ಶ್ಯಾಮ್' (Radhe Shyam) ಚಿತ್ರವು ಈಗಾಗಲೇ ಹಲವು ಕಾರಣಗಳಿಂದ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಪೋಸ್ಟರ್, ಟೀಸರ್ ಮೊದಲಾದವುಗಳು ಈಗಾಗಲೇ ಕುತೂಹಲ ಹೆಚ್ಚಿಸಿದ್ದು, ಹಾಡುಗಳು ಕೂಡ ಅಭಿಮಾನಿಗಳ ಮನಗೆದ್ದಿದೆ. ಸದ್ಯ 'ರಾಧೆ ಶ್ಯಾಮ್' ಚಿತ್ರವು ಬಿಡುಗಡೆಗೆ ಸಜ್ಜಾಗುತ್ತಿದ್ದು, ಮಾರ್ಚ್ 11ರಂದು ಚಿತ್ರ ಬಿಡುಗಡೆಯಾಗಲಿದೆ.

ಬಿಡುಗಡೆಗೂ ಮೊದಲೇ 'ರಾಧೆ ಶ್ಯಾಮ್' ಚಿತ್ರ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈಗಾಗ್ಲೇ ಪ್ರಭಾಸ್‌- ಪೂಜಾ ಹೆಗ್ಡೆ ನಟನೆಯ 'ರಾಧೆ ಶ್ಯಾಮ್' ಚಿತ್ರ ಬಿಡುಗಡೆಯ ಡಿಜಿಟಲ್‌ ಹಕ್ಕುಗಳು 250 ಕೋಟಿ ರೂ. ಗೆ ಮಾರಾಟವಾಗಿದೆ. ದಕ್ಷಿಣ ಭಾರತದ ಭಾಷೆಗಳಾದ- ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಚಿತ್ರವು ಜೀ-5 ವೇದಿಕೆಯಲ್ಲಿ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. 

Radhe Shyam: ರಾಧೇ ಶ್ಯಾಮ್‌ಗಾಗಿ ಸಂಭಾವನೆ ಮೊತ್ತ 100 ಕೋಟಿಯಿಂದ ಇಳಿಸಿಕೊಂಡ ಪ್ರಭಾಸ್!

ಸಾಮಾಜಿಕ ಜಾಲತಾಣ ಮತ್ತು ಗೇಮಿಂಗ್ ನಂತರ ಸಿನಿಮಾಗಳೂ ಈಗ ಮೆಟಾವರ್ಸ್ ತಲುಪಿವೆ. ನಟರಾದ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್, ಮೆಟಾವರ್ಸ್‌ನಲ್ಲಿ ತನ್ನ ಟ್ರೇಲರ್ ಬಿಡುಗಡೆ ಮಾಡಿದ. ಇದು ಮೆಟಾವರ್ಸ್‌ನ ಟ್ರೇಲರ್ ರಿಲೀಸ್ ಮಾಡಿದ ಮೊದಲ ಚಲನಚಿತ್ರ ಎಂದು ಹೇಳಿಕೊಂಡಿದೆ. ಇಂಟರ್‌ನೆಟ್‌ನ ವಿಕಾಸದ ಮುಂದಿನ ಹಂತವೆಂದು ಸಾಮಾನ್ಯವಾಗಿ ಪರಿಗಣಿಸಲಾಗುವ ಮೆಟಾವರ್ಸ್, ಸಾಮಾಜಿಕ ಸಂವಹನಕ್ಕೆ ಮೀಸಲಾಗಿರುವ ಮೂರು ಆಯಾಮದ ವರ್ಚುವಲ್ ಜಾಲತಾಣವಾಗಿದೆ. ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೆಟಾವರ್ಸ್‌ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ರಾಧೆ ಶ್ಯಾಮ್‌ ಚಿತ್ರ ಇತಿಹಾಸ ನಿರ್ಮಿಸಿದೆ.

Scroll to load tweet…

‘ರಾಧೆ ಶ್ಯಾಮ್’ ಬಹುದೊಡ್ಡ ನಿರ್ಮಾಣ ಸಂಸ್ಥೆಯಾಗಿರುವ ಯುವಿ ಕ್ರಿಯೇಷನ್ ಸಂಸ್ಥೆಯ 12ನೇ ಸಿನಿಮಾ. ಅಂದಹಾಗೆ 'ರಾಧೆ ಶ್ಯಾಮ್' ಚಿತ್ರವನ್ನು ಅಮಿತಾಭ್ ನಿರೂಪಿಸಲಿದ್ದಾರೆ. ಈ ಕುರಿತು ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಬಿಗ್‌ಬಿ ಧ್ವನಿ ನೀಡಿರುವುದು ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. ಕನ್ನಡ ವರ್ಷನ್ ನಿರೂಪಣೆಗೆ ಶಿವರಾಜ್‌ ಕುಮಾರ್ ಅವರು ಹಿನ್ನೆಲೆ ಧ್ವನಿ ನೀಡಿದ್ದು, ಅದೇ ರೀತಿ ತೆಲುಗಿನಲ್ಲಿ ರಾಜಮೌಳಿ (Rajamouli) ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ನಿರೂಪಿಸಿದ್ದಾರೆ. ಆ ಮೂಲಕ ಈ ಘಟಾನುಘಟಿಗಳು ಸ್ಟಾರ್‌ಗಳು 'ರಾಧೆ ಶ್ಯಾಮ್' ತಂಡದ ಭಾಗವಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿಸಿದ್ದಾರೆ.

Radhe Shyam Review Out: ಪ್ರಭಾಸ್, ಪೂಜಾ ಹೆಗ್ಡೆ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ

'ನಿಮ್ಮ ಧ್ವನಿಯಿಂದಾಗಿ ಈ ರೊಮ್ಯಾಂಟಿಕ್ ಕಥೆಯನ್ನು ಇನ್ನಷ್ಟು ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು' ಎಂದು ಶಿವರಾಜ್ ಕುಮಾರ್, ರಾಜಮೌಳಿ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರಿಗೆ 'ರಾಧೆ ಶ್ಯಾಮ್' ನಿರ್ಮಾಣ ಸಂಸ್ಥೆಯಾದ 'ಯುವಿ ಕ್ರಿಯೇಷನ್ಸ್' ಟ್ವೀಟ್ ಮೂಲಕ ಧನ್ಯವಾದ ತಿಳಿಸಿದೆ. 

ಹಸ್ತ ಸಾಮುದ್ರಿಕ ಪಂಡಿತನ ಸುತ್ತ ನಡೆಯುವ ಅಪೂರ್ವ ಪ್ರೇಮಕತೆ ಇದು. ಆದರೆ, ಟ್ರೇಲರ್‌ನಲ್ಲಿ ಬಿಟ್ಟಿರುವ ಡೈಲಾಗ್‌ಗಳು ಅಭೂತಪೂರ್ವ ಪ್ರೇಮಕತೆಯೊಂದನ್ನು ತೆರೆದಿಡಲಿದೆ ಎನ್ನಬಹುದು. ‘ನಿನ್ನ ಪ್ರೀತಿ ನನಗೆ ಒಂದು ವರ, ಅದನ್ನ ಪಡೆಯಕ್ಕೆ ಯುದ್ಧಾನೇ ಮಾಡಬೇಕು’, ‘ನೀನು ರೋಮಿಯೋ ಅಲ್ಲದೆ ಇರಬಹುದು. ಆದ್ರೆ, ನಾನು ಜೂಲಿಯೇಟ್. ನನ್ ಪ್ರೀತಿಯಲ್ಲಿ ಬಿದ್ದರೆ ಸತ್ತೋಗ್ತಿಯಾ’ ಎನ್ನುವಂತಹ ಡೈಲಾಗ್‌ಗಳು ಪ್ರೇಮ ಯುದ್ಧದ ಕತೆ ಹೇಳುವಂತಿದೆ.

ಟ್ರೈಲರ್ ಅನ್ನು ರಾಧೆ ಶ್ಯಾಮ್ ವರ್ಲ್ಡ್‌ನಲ್ಲಿ ಸ್ಪಾಟಿಯಲ್ IO ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾರಂಭಿಸಲಾಯಿತು. 90,000 ಕ್ಕೂ ಹೆಚ್ಚು ಜನರು ಈವೆಂಟ್‌ನಲ್ಲಿ ಆನ್‌ಲೈನ್‌ನಲ್ಲಿ ಭಾಗವಹಿಸಿದ್ದರು. ರಾಧೆ ಶ್ಯಾಮ್ ಸಿನಿಮಾ ಮಾರ್ಚ್ 11ರಂದು ವಿಶ್ವದಾದ್ಯಂತ 10,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ.

ಭಾರತೀಯ ಪಾಪ್ ಸಂಸ್ಕೃತಿಯು ಮೆಟಾವರ್ಸ್‌ಗೆ ಪ್ರವೇಶಿಸಿದ್ದು ಇದೇ ಮೊದಲಲ್ಲ. ಖ್ಯಾತ ಪಂಜಾಬಿ ಪಾಪ್ ಗಾಯಕ ದಲೇರ್ ಮೆಹಂದಿ ಈ ವರ್ಷ ಜನವರಿ 26 ರಂದು ಭಾರತದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೆಟಾವರ್ಸ್‌ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಕಲಾವಿದರಾಗಿದ್ದಾರೆ. ಮೆಹೆಂದಿ ಅವರು ಪಾರ್ಟಿನೈಟ್ ಮೆಟಾವರ್ಸ್‌ನಲ್ಲಿ 14 ನಿಮಿಷಗಳ ಕಾಲ ವೇದಿಕೆಯನ್ನು ಪಡೆದರು, ಅದು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಟ್ರೀಮ್ ಮಾಡಲಾಗಿತ್ತು.