Adipurush Trailer: ರಾಮನಾಗಿ ಎಂಟ್ರಿ ಕೊಟ್ಟ ಟಾಲಿವುಡ್ ಸ್ಟಾರ್ ಪ್ರಭಾಸ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾದ ಟ್ರೈಲರ್ ಕೊನೆಗೂ ತೆರೆಗೆ ಬಂದಿದೆ. ಈ ದಿನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಆದಿಪುರುಷ್ ತಂಡ ಖುಷಿ ನೀಡಿದೆ. ಈ ಮೊದಲು ತೆರೆಗೆ ಬಂದಿದ್ದ ಟೀಸರ್ ನೋಡಿ ಅಭಿಮಾನಿಗಳು ಭಾರಿ ನಿರಾಸೆ ಅನುಭವಿಸಿದ್ದರು. ಸಿನಿಮಾತಂಡದ ವಿರುದ್ಧ ಪ್ರಭಾಸ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು, ಟೀಸರ್ ಹಿಗ್ಗಾಮುಗ್ಗಾ ಟ್ರೋಲ್ ಆಗಿತ್ತು. ಆದರೀಗ ಟ್ರೈಲರ್ ನೋಡಿ ಫುಲ್ ಖುಷ್ ಆಗಿದ್ದಾರೆ. ರಾಮನ ಅವತಾರದಲ್ಲಿ ಪ್ರಭಾಸ್ ನೋಡಿ ಸಂತಸ ಪಟ್ಟಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಪ್ರಭಾಸ್ ಅಬ್ಬರಿಸಿದ್ದಾರೆ. 

ನಿರ್ದೇಶಕ ಓಂ ರಾವತ್​ ಸಾರಥ್ಯದಲ್ಲಿ ಆದಿಪುರುಷ್ ಮೂಡಿಬಂದಿದೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡ್ರೆ​ ಸೀತೆಯಾಗಿ ಕೃತಿ ಸನೋನ್ ಮಿಂಚಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​, ಆಂಜನೇಯನಾಗಿ ದೇವದತ್ತ​, ಲಕ್ಷ್ಮಣನಾಗಿ ಸನ್ನಿ ಸಿಂಗ್​ ನಟಿಸಿದ್ದಾರೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಸದ್ಯ ಬಿಡುಗಡೆ ಆಗಿರುವ ಟ್ರೇಲರ್​ ಸಿಕ್ಕಾಪಟ್ಟೆ ರಿಚ್ ಆಗಿ ಮೂಡಿಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ಟ್ರೈಲರ್ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿದೆ. 

ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ನಿಭಾಯಿಸಿರುವ ರಾವಣನ ಪಾತ್ರ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆದರೆ ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ರಾವಣನ ಲುಕ್ ರಿವೀಲ್ ಮಾಡಿಲ್ಲ. ಸೀತೆಯನ್ನು ಅಪಹರಿಸಲು ಬಂದ ಒಂದು ದೃಶ್ಯ ಮಾತ್ರ ಟ್ರೈನಲ್ಲಿ ನೋಡಬಹುದು. ಹಾಗಾಗಿ ಸದ್ಯ ಟ್ರೈಲರ್‌ನಲ್ಲಿ ರಾವಣನ ಅವತಾರ ದರ್ಶನ ಆಗಿಲ್ಲ. ಇಂದು ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಆದಿಪುರುಷ್ ಟ್ರೈಲರ್ ರಿಲೀಸ್ ಆಗಿದೆ. ಬಹು ನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಜೂನ್ 16ಕ್ಕೆ ರಿಲೀಸ್ ಆಗುತ್ತಿದೆ. 

ರಿಲೀಸ್‌ಗೂ ಮುನ್ನ ಪ್ರಭಾಸ್ 'ಆದಿಪುರುಷ್' ಟ್ರೈಲರ್ ಲೀಕ್; ಚಿತ್ರತಂಡಕ್ಕೆ ಹೆಚ್ಚಿದ ತಲೆನೋವು

ದೊಡ್ಡ ಪರದೆಯಲ್ಲಿ ‘ಆದಿಪುರುಷ್​’ ಚಿತ್ರವನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ವಿಶೇಷ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಸಿನಿಮಾಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

YouTube video player

ವಿವಾದ, ಟ್ರೋಲ್‌ಗಳ ಬೆನ್ನಲ್ಲೇ 'ಆದಿಪುರುಷ್' ಪ್ರಮೋಷನ್‌‌ಗೆ ಸೈಫ್ ಅಲಿ ಖಾನ್ ಗೈರು; ಕಾರಣವೇನು?

ರಿಲೀಸ್‌ಗೂ ಮೊದಲೇ ಟ್ರೈಲರ್ ಲೀಕ್ 

ಹೈದರಾಬಾದ್‌ನ ಕೆಲವು ಚಿತ್ರಮಂದಿರಗಳಲ್ಲಿ ನಿನ್ನೆಯೇ ಅಂದರೆ ಮೇ 8ರಂದು ಟ್ರೈಲರ್ ಪ್ರದರ್ಶಿಸಲಾಗಿತ್ತು. ಇಡೀ ಸಿನಿಮಾತಂಡ ಹೈದಬಾದ್‌ಗೆ ಎಂಟ್ರಿ ಕೊಟ್ಟಿದ್ದು ಟ್ರೈಲರ್ ಅನ್ನು ದೊಡ್ಡ ಪರದೆ ಮೇಲೆ ಆನಂದಿಸಿದೆ. ಆದರೆ ಅಧಿಕೃತವಾಗಿ ಯೂಟ್ಯೂಬ್‌ನಲ್ಲಿ ಟ್ರೈಲರ್ ರಿಲೀಸ್ ಆಗುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಸಿನಿಮಾತಂಡದ ಬೇಸರಕ್ಕೆ ಕಾರಣವಾಗಿದೆ. ಮೇ 8ರಂದು ಹೈದರಾಬಾದ್‌ನ ಕೆಲವು ಚಿತ್ರಮಂದಿರಗಳಲ್ಲಿ ಟ್ರೈಲರ್ ಪ್ರದರ್ಶನ ಏರ್ಪಡಿಸಲಾಗಿತ್ತು. ಈವೆಂಟ್ ನಲ್ಲಿ ಪ್ರಭಾಸ್ ಕೂಡ ಭಾಗಿಯಾಗಿದ್ದರು. ಅಭಿಮಾನಿಗಳಿಗಾಗಿ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಟ್ರೈಲರ್ ಈಗ ಲೀಕ್ ಆಗಿ ವೈರಲ್ ಆಗಿತ್ತು. ಬಳಿಕ ಅನೇಕ ಲಿಂಕ್‌ಗಳನ್ನು ಬ್ಲಾಕ್ ಮಾಡಿಸಿದ್ದರೂ ಸಹ ವೈರಲ್ ಆಗಿತ್ತು.