'ಆದಿಪುರುಷ್' ಟ್ರೈಲರ್ ರಿಲೀಸ್ ಆಗುವ ಮುಂಚೆಯೇ ಟ್ರೈಲರ್ ಲೀಕ್ ಆಗಿದೆ. ಇದರಿಂದ ಚಿತ್ರತಂಡಕ್ಕೆ ತಲೆನೋವು ಹೆಚ್ಚಾಗಿದೆ. 

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಟ್ರೈಲರ್ ರಿಲೀಸ್‌ಗೆ ಕ್ಷಣಗಣನೇ ಪ್ರಾರಂಭವಾಗಿದೆ. ಬಹುನಿರೀಕ್ಷೆಯ ಸಿನಿಮಾದ ಟ್ರೈಲರ್ ಮೇ 9ರಂದು ರಿಲೀಸ್ ಆಗುತ್ತಿದೆ ಎಂದು ಸಿನಿಮಾತಂಡ ಬಹಿರಂಗ ಪಡಿಸಿತ್ತು. ಅಭಿಮಾನಿಗಳು ಸಹ ಟ್ರೈಲರ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಟ್ರೈಲರ್ ರಿಲೀಸ್‌ಗೂ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ಇದು ಸಿನಿಮಾತಂಡಕ್ಕೆ ದೊಡ್ಡ ತಲೆನೋವಾಗಿದೆ. 

ಆದಿಪುರುಷ್ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಹೈದರಾಬಾದ್‌ನ ಕೆಲವು ಚಿತ್ರಮಂದಿರಗಳಲ್ಲಿ ಟ್ರೈಲರ್ ರಿಲೀಸ್ ಮಾಡಲಾಗಿದೆ. ಸಿನಿಮಾತಂಡ ಹೈದಬಾದ್‌ಗೆ ಎಂಟ್ರಿ ಕೊಟ್ಟಿದ್ದು ಟ್ರೈಲರ್ ಅನ್ನು ದೊಡ್ಡ ಪರದೆ ಮೇಲೆ ಆನಂದಿಸಿದೆ. ಆದರೆ ಅಧಿಕೃತವಾಗಿ ಯೂಟ್ಯೂಬ್‌ನಲ್ಲಿ ಟ್ರೈಲರ್ ರಿಲೀಸ್ ಆಗುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಸಿನಿಮಾತಂಡದ ಬೇಸರಕ್ಕೆ ಕಾರಣವಾಗಿದೆ. ಮೇ 8ರಂದು ಹೈದರಾಬಾದ್‌ನ ಕೆಲವು ಚಿತ್ರಮಂದಿರಗಳಲ್ಲಿ ಟ್ರೈಲರ್ ಪ್ರದರ್ಶನ ಏರ್ಪಡಿಸಲಾಗಿತ್ತು. ಈವೆಂಟ್ ನಲ್ಲಿ ಪ್ರಭಾಸ್ ಕೂಡ ಭಾಗಿಯಾಗಿದ್ದರು. ಅಭಿಮಾನಿಗಳಿಗಾಗಿ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಟ್ರೈಲರ್ ಈಗ ಲೀಕ್ ಆಗಿ ವೈರಲ್ ಆಗಿದೆ. 

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೈಲರ್ ತೆಗೆದು ಹಾಕುವಂತೆ ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸೋರಿಕೆಯಾದ ಟ್ರೇಲರ್ ಪೋಸ್ಟ್ ಮಾಡಿದ ಕೆಲವು ಖಾತೆಗಳು ಟ್ವಿಟರ್‌ನಿಂದ ಕ್ರಮವನ್ನು ಎದುರಿಸುತ್ತಿವೆ. ಲೀಕ್ ಆಗಿರುವ ಟ್ರೈಲರ್ ನೋಡಿದ ಅಭಿಮಾನಿಗಳು ಹೈ ಕ್ವಾಲಿಟಿ ಟ್ರೈಲರ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇಂದು ಮಧ್ಯಾಹ್ನಕ್ಕೆ ಟ್ರೈಲರ್ ರಿಲೀಸ್ ಆಗುತ್ತಿದೆ.

Scroll to load tweet…

ಆದಿಪುರುಷ್ ಓಂ ರಾವುತ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾವಾಗಿದೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ರಾವಣನಾಗಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಸೀತೆ ಪಾತ್ರಕ್ಕೆ ಕೃತಿ ಸನೊನ್ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಜೂನ್ 16ಕ್ಕೆ ರಿಲೀಸ್ ಆಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗಿರುವ ಆದಿಪುರುಷ್ ಚಿತ್ರಮಂದಿರಗಳಲ್ಲಿ ಭರ್ಜರಿ ಕಮಾಯಿ ಮಾಡುತ್ತಾ ಕಾದು ನೋಡಬೇಕಿದೆ.

Scroll to load tweet…

ಆದಿಪುರುಷ್ ಸಿನಿಮಾದ ಪೋಸ್ಟರ್ ಅಥವಾ ಟೀಸರ್ ರಿಲೀಸ್ ಆದಾಗಿನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಸೈಫ್ ಅಲಿ ಖಾನ್ ರಾವಣನ ಪಾತ್ರ, ಗ್ರಾಫಿಕ್ಸ್ ವಿಚಾರಕ್ಕೆ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗಿತ್ತು. ಸೈಫ್ ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ರಾವಣ ಸೈಫ್ ಅಲಿ ಖಾನ್ ಲುಕ್ ಸರಿ ಇಲ್ಲ ಎಂದು ಅನೇಕರು ಟೀಕಿಸಿದ್ದರು. ಕಳಪೆ ಗ್ರಾಫಿಕ್ಸ್ ಎಂದು ಜರಿದಿದ್ದರು. ಬಳಿಕ ಒಂದಿಷ್ಟು ಬದಲಾವಣೆಯೊಂದಿಗೆ ಆದಿಪುರುಷ್ ಸಿದ್ಧವಾಗಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ನಿರತವಾಗಿದೆ.