Prabhas ಹುಟ್ಟುಹಬ್ಬಕ್ಕೆ ಥಿಯೇಟರಲ್ಲಿ ಪಟಾಕಿ: ಸೀಟುಗಳ ಸುಟ್ಟು ಭಸ್ಮ
ಸ್ಟಾರ್ ನಟನ ಬರ್ತಡೇ ದಿನ ಥಿಯೇಟರ್ ಮಾಲೀಕರಿಗೆ ನಷ್ಟ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಟಾಲಿವುಡ್ ಸ್ಟಾರ್ ನಟ, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಅಕ್ಟೋಬರ್ 23ರಂದು 42ನೇ ವಸಂತಕ್ಕೆ ಕಾಲಿಟ್ಟಿರು. ಸಿನಿ ಗಣ್ಯರು ಮತ್ತು ಅಭಿಮಾನಿಗಳು ಪ್ರಭಾಸ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಪ್ರಭಾಸ್ ಬರ್ತಡೇ ಮತ್ತಷ್ಟು ಸ್ಪೆಷಲ್ ಮಾಡಲು ಆದಿಪುರುಷ್ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ತುಂಬಾನೇ ಬೇಸರದಲ್ಲಿದ್ದ ನಟ ಮುಖದಲ್ಲಿ ಸಂತೋಷ ತರಬೇಕೆಂದು ಗಲ್ಲಿ ಗಲ್ಲಿಗಳಲ್ಲೂ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.
ಅಮರಾವತಿ: ನಟ ಪ್ರಭಾಸ್ ಹುಟ್ಟುಹಬ್ಬವೆಂದು ಅಭಿಮಾನಿಗಳು ಚಿತ್ರಮಂದಿರದೊಳಗೆ ಪಟಾಕಿ ಹಚ್ಚಿ, ಅದರಿಂದ ಚಿತ್ರಮಂದಿರಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಆಂಧ್ರದ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಂನಲ್ಲಿ ನಡೆದಿದೆ. ನಟನ ಹುಟ್ಟುಹಬ್ಬದ ನಿಮಿತ್ತ ಜಿಲ್ಲೆಯ ವೆಂಕಟರಮಣ ಚಿತ್ರಮಂದಿರದಲ್ಲಿ 2009ರಲ್ಲಿ ತೆರೆಕಂಡಿದ್ದ ‘ಬಿಲ್ಲಾ’ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು.
5ಈ ಸಂದರ್ಭ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಆಗ ಅಲ್ಲಿನ ಸೀಟುಗಳುಗೆ ಬೆಂಕಿ ತಗುಲಿ ಕ್ರಮೇಣ ಆವರಿಸಿಕೊಂಡಿದೆ. ಬೆಚ್ಚಿದ ಜನ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೆಲ ಜನರ ಸಹಾಯದೊಂದಿಗೆ ಚಿತ್ರಮಂದಿರ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪ್ರಭಾಸ್ ಮೇಲೆ 1400 ಕೋಟಿ ಹೂಡಿಕೆ:
500 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ ಆದಿ ಪುರುಷ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಪಾತ್ರಕ್ಕಾಗಿ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಚಿತ್ರದಲ್ಲಿ ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದಾರೆ.ನಿರ್ದೇಶಕ ಓಂ ರಾವುತ್ ಅವರ ಚಿತ್ರ ಆದಿಪುರುಷ 12 ಜನವರಿ 2023 ರಂದು ಬಿಡುಗಡೆಯಾಗಲಿದೆ. ಆದರೆ, ಈ ಚಿತ್ರದ ಟೀಸರ್ ಮತ್ತು ಅದರಲ್ಲಿ ತೋರಿಸಿರುವ ಪ್ರಚಂಡ ವಿಎಫ್‌ಎಕ್ಸ್ ನೋಡಿ ಜನರು ಬಹಿಷ್ಕಾರ ಹಾಕಲು ಆರಂಭಿಸಿದ್ದಾರೆ.ನಿರ್ದೇಶಕಿ ಅಶ್ವಿನಿ ನಾಗ್ ಅವರ ಪ್ರಾಜೆಕ್ಟ್ ಕೆ ಚಿತ್ರದಲ್ಲೂ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಜೆಟ್ ಕೂಡ ಸುಮಾರು 500 ಕೋಟಿ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ, ಪ್ರಭಾಸ್ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಾಲಾರ್ ಚಿತ್ರದಲ್ಲೂ ಪ್ರಭಾಸ್ ಕೆಲಸ ಮಾಡುತ್ತಿದ್ದಾರೆ. 300 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ.
‘ಆದಿಪುರುಷ’ ರಾಮನ ಪಾತ್ರಕ್ಕೆ ಪ್ರಭಾಸ್ ಸಂಭಾವನೆ ಎಷ್ಟು?
2ನೇ ಬಾರಿ ಕಾಂತಾರ ವೀಕ್ಷಿಸಿ ಪ್ರಭಾಸ್:
2ನೇ ಬಾರಿ ಕಾಂತಾರ ವೀಕ್ಷಿಸಿದ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ ಪ್ರಭಾಸ್ ಮೊದಲು ಕನ್ನಡದಲ್ಲೇ ಸಿನಿಮಾ ನೋಡಿದ್ದರು. ಇದೀಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿದ್ದಂತೆ ಕಾಂತಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ರಿಲೀಸ್ ಆಗಿದೆ. ಇದೀಗ ತೆಲುಗಿನಲ್ಲಿ ರಿಲೀಸ್ ಆಗಿರುವ ಕಾಂತಾರ ಸಿನಿಮಾವನ್ನು ಪ್ರಭಾಸ್ ಮತ್ತೊಮ್ಮೆ ವೀಕ್ಷಿಸಿ ಅದ್ಭುತವಾದ ಅನುಭವ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಭಾಸ್, 'ಕಾಂತಾರ ಎರಡನೇ ಬಾರಿ ವೀಕ್ಷಿಸಿದೆ. ಎಂತಹ ಅಸಾಧಾರಣ ಅನುಭವ. ಅದ್ಭುತವಾದ ಕಾನ್ಸೆಪ್ಟ್ ಮತ್ತು ಕ್ಲೈಮ್ಯಾಕ್ಸ್ ಥ್ರಿಲ್ಲಿಂಗ್ ಆಗಿದೆ. ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡಲೇ ಬೇಕಾದ ಸಿನಿಮಾವಾಗಿದೆ' ಎಂದು ಹೇಳಿದ್ದಾರೆ.
ಈ ಮೊದಲು ಕಾಂತಾರ ವೀಕ್ಷಿಸಿದ್ದ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಿದ್ದರು. 'ಕಾಂತಾರ ಸಿನಿಮಾವನ್ನ ನಾನು ತುಂಬಾ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅದ್ಭುತ. ಇಡೀ ತಂಡಕ್ಕೆ ನನ್ನ ಅಭಿನಂದನೆ, ಒಳ್ಳೆಯದಾಗಲಿ' ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ.