ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ನಟನೆಯ ವರ್ಷಂ ಸಿನಿಮಾ ರೀ ರಿಲೀಸ್ ಆಗಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ನಟನೆಯ ವರ್ಷಂ ಸಿನಿಮಾ ರೀ ರಿಲೀಸ್ ಆಗಿದೆ. ಬರೋಬ್ಬರಿ 18 ವರ್ಷದ ಹಿಂದೆ ತೆರೆಗೆ ಬಂದಿದ್ದ ಈ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲಾಗಿದೆ. ಮತ್ತೆ ತೆರೆ ಮೇಲೆ ತ್ರಿಷಾ ಮತ್ತು ಪ್ರಭಾಸ್ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಅನೇಕ ವರ್ಷಗಳ ಬಳಿಕ ರೀ ರಿಲೀಸ್ ಆದರೂ ಅಭಿಮಾನಿಗಳ ತೋರಿಸಿದ ಪ್ರೀತಿಗೆ ತ್ರಿಷಾ ಫುಲ್ ಖುಷ್ ಆಗಿದ್ದಾರೆ. ವಿಶೇಷ ಸಿನಿಮಾವನ್ನು ಅಭಿಮಾನಿಗಳ ಒತ್ತಾದ ಮೇರೆಗೆ ಮತ್ತೆ ರಿಲೀಸ್ ಮಾಡಲಾಗಿದೆ. 18 ವರ್ಷಗಳ ಬಳಿಕ ಬಂದ ಈ ಸಿನಿಮಾಗೆ ಅಭಿಮಾನಿಗಳಿಂದ ಸಿಕ್ಕಿದ ಭರ್ಜರಿ ಪ್ರತಿಕ್ರಿಯೆಗೆ ಸಿನಿಮಾತಂಡ ಫುಲ್ ಖುಷ್ ಆಗಿದೆ. ಅಭಿಮಾನಿಗಳ ಪ್ರೀತಿಗೆ ನಟಿ ತ್ರಿಷಾ ಫುಲ್ ಖುಷ್ ಆಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'18 ವರ್ಷಗಳ ನಂತರ...ಮರು ಬಿಡುಗಡೆ...ನನ್ನ ಮೊದಲ ತೆಲುಗು ಚಿತ್ರ...ಇನ್ನೂ ನನಗೆ ನಿನ್ನೆಯಂತೆ ಭಾಸವಾಗುತ್ತಿದೆ... ಸಿನಿಮಾ ಎಂದೆಂದಿಗೂ ಎನ್ನುವುದನ್ನು ಸಾಬೀತುಪಡಿಸುತ್ತಿದೆ. ನಾನು 9456743 ಬಾರಿ ಪುನರಾವರ್ತಿಸುತ್ತೇನೆ. ನಿಮ್ಮೆಲ್ಲಿಗಾಗಿ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ತೋರಿಸಿದ ಪ್ರೀತಿಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ವರ್ಷಂ ನೋಡಿ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.
Ponniyin Selvan: ಸಾರಿಯಲ್ಲಿ ಸಖತ್ತಾಗಿ ಮಿಂಚಿದ ಸೌತ್ ಬೆಡಗಿ ತ್ರಿಶಾ ಕೃಷ್ಣನ್
ವರ್ಷಂ ಸಿನಿಮಾಗೆ ಶೋಬನ್ ಅಕ್ಷನ್ ಕಟ್ ಹೇಳಿದ್ದರು. ರೊಮ್ಯಾಂಟಿಕ್ ಸಿನಿಮಾ ಇದಾಗಿದೆ. 2004ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಶ್ರೀ ದೇವಿಶ್ರೀ ಪ್ರಸಾದ್ ಅವರ ಸಂಗೀತ ಈ ಚಿತ್ರಕ್ಕಿದೆ. ಸೂಪರ್ ಹಿಟ್ ಸಿನಿಮಾ ತಮಿಳು ಮತ್ತು ಹಿಂದಿಗೂ ರಿಮೇಕ್ ಆಗಿದೆ. ತಮಿಳಿನಲ್ಲಿ ‘ಮಝೈ'(2005) ಹಾಗೂ ಹಿಂದಿಯಲ್ಲಿ ‘ಬಾಘಿ'(2016) ರಲ್ಲಿ ರಿಮೇಕ್ ಆಗಿ ರಿಲೀಸ್ ಆಗಿದೆ.
ಅಂದಹಾಗೆ ವರ್ಷಂ ತ್ರಿಷಾ ನಟನೆಯ ಮೊದಲ ತೆಲುಗು ಸಿನಿಮಾವಾಗಿದೆ. ಮೊದಲ ಸಿನಿಮಾದಲ್ಲೇ ತ್ರಿಷಾ ತೆಲುಗು ಅಭಿಮಾನಿಗಳ ಹೃದಯ ಗೆದ್ದಿದ್ದರು. ಸದ್ಯ ತ್ರಿಷಾ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿತ್ತು. ಚಿಯಾನ್ ವಿಕ್ರಮ್, ಕಾರ್ತಿ, ಐಶ್ವರ್ಯಾ ರೈ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದರು.
ಪೊನ್ನಿಯಿನ್ ಸೆಲ್ವನ್: ಪಾತ್ರಕ್ಕೆ ನ್ಯಾಯ ಒದಗಿಸಲು ಒರಿಜನಲ್ ಆಭರಣಗಳನ್ನು ಧರಿಸಿದ್ದ ತ್ರಿಶಾ
ಇನ್ನು ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ತನ್ನ ಮಾರುಕಟ್ಟೆಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಿಕೊಂಡರು. ಸದ್ಯ ಪ್ರಭಾಸ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದಿಪುರುಷ್ ಸಿನಿಮಾದ ಶೂಟಿಂಗ್ ಮುಗಿಸಿರುವ ಪ್ರಭಾಸ್ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾ ಜೊತೆಗೆ ಪ್ರಭಾಸ್ ಇನ್ನು ಹೆಸರಿಡದ ನಿರ್ದೇಶಕ ನಾಗ್ ಅಶ್ವಿನ್ ಅವರ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
