ಸಲಾರ್ ಸಿನಿಮಾದಿಂದ ಬಿಗ್ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂದು ಸ್ವಾತಂತ್ರ್ಯ ದಿನಾಚರಣೆಯ ಈ ಸಂಭ್ರದ ದಿನ ಸಿನಿಮಾದ ಬಗ್ಗೆ ಬಿಗ್ ಅಪ್ ಡೇಟ್ ನೀಡುವುದಾಗಿ ಸಿನಿಮಾತಂಡ ಬಹಿರಂಗ ಪಡಿಸಿತ್ತು. ಅದರಂತೆ ಇಂದು ಸಲಾರ್ ಸಿನಿಮಾದಿಂದ ಬಿಗ್ ಅಪ್ ಡೇಟ್ ಹೊರಬಿದ್ದಿದೆ. ಈ ಮೂಲಕ ಪ್ರಭಾಸ್ ಸಲಾರ್ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.

ಟಾಲಿವುಡ್ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಾಶಾಂತ್ ನೀಲ್ ಕಾಂಬಿನೇಷನ್ ಸಲಾರ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಕೆಜಿಎಫ್-2 ಸಿನಿಮಾ ಬಳಿಕ ಅಭಿಮಾನಿಗಳ ಚಿತ್ತ ಸಲಾರ್ ನತ್ತ ಇದೆ. ಸಲಾರ್ ಸಿನಿಮಾದಿಂದ ಬಿಗ್ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂದು ಸ್ವಾತಂತ್ರ್ಯ ದಿನಾಚರಣೆಯ ಈ ಸಂಭ್ರದ ದಿನ ಸಿನಿಮಾದ ಬಗ್ಗೆ ಬಿಗ್ ಅಪ್ ಡೇಟ್ ನೀಡುವುದಾಗಿ ಸಿನಿಮಾತಂಡ ಬಹಿರಂಗ ಪಡಿಸಿತ್ತು. ಅದರಂತೆ ಇಂದು ಸಲಾರ್ ಸಿನಿಮಾದಿಂದ ಬಿಗ್ ಅಪ್ ಡೇಟ್ ಹೊರಬಿದ್ದಿದೆ. ಈ ಮೂಲಕ ಪ್ರಭಾಸ್ ಸಲಾರ್ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಕೆಜಿಎಫ್ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಬರ್ತಿರುವ ಸಲಾರ್ ಸಿನಿಮಾ ಮುಂದಿನ ವರ್ಷ ಸೆಪ್ಟಂಬರ್ ನಲ್ಲಿ ತೆರೆಗೆ ಬರುತ್ತಿದೆ ಎಂದು ಬಹಿರಂಗ ಪಡಿಸಿದರು. 

ಸಲಾರ್ ಸಿನಿಮಾ ಪೋಸ್ಟರ್ ಬಿಟ್ಟರೆ ಯಾವುದೇ ಮಾಹಿತಿ ಅಥವಾ ಅಪ್ ಡೇಟ್ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಸಲಾರ್ ಟೀಸರ್ ರಿಲೀಸ್ ಮಾಡುವಂತೆ ಅಭಿಮಾನಿಗಳು ಸಲಾರ್ ಸಿನಿಮಾತಂಡದ ಹಿಂದೆ ಬಿದ್ದಿದ್ದರು. ಯಾವುದೇ ಪೋಸ್ಟ್ ಅಥವಾ ಯಾವುದೇ ಮಾಹಿತಿ ಹಂಚಿಕೊಂಡರೂ ಅಭಿಮಾನಿಗಳು ಸಲಾರ್ ಅಪ್ ಡೇಟ್ ಎಂದು ಕೇಳುತ್ತಿದ್ದರು. ಇಂದು ಟ್ರೈಲರ್ ರಿಲೀಸ್ ಡೇಟ್ ಸಹ ಬಹಿರಂಗ ವಾಗಬಹುದೇನೋ ಅಂತ ಕಾತರದಿಂದ ಕಾಯುತ್ತಿದ್ದರು. ಆದರೆ ರಿಲೀಸ್ ಡೇಟ್ ಅನೌನ್ಸ್ ಆಗಿದೆ. 

ಪ್ರಭಾಸ್ 'ಸಲಾರ್‌'ನಲ್ಲಿ ಪೃಥ್ವಿರಾಜ್; ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮಲಯಾಳಂ ಸ್ಟಾರ್

ಅಂದಹಾಗೆ ಬಹುನಿರೀಕ್ಷೆಯ ಸಲಾರ್ ಸಿನಿಮಾ ಮುಂದಿನ ವರ್ಷ 2023 ಸೆಪ್ಟಂಬರ್ 28ರಂದು ರಿಲೀಸ್ ಆಗುತ್ತಿದೆ. ಇಂದು ರಿಲೀಸ್ ಡೇಟ್ ಅನೌನ್ಸ್ ಮಾಡುವ ಜೊತೆಗೆ ಪೋಸ್ಟರ್ ಕೂಡ ಹಂಚಿಕೊಂಡಿದೆ ಸಿನಿಮಾತಂಡ. ಮಾಸ್ ಲುಕ್ ನಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಲಾಂಗ್ ಮತ್ತು ಕಬ್ಬಿಣಗ ಸರಳು ಹಿಡಿದು ಒಂದಷ್ಟು ಜನರನ್ನು ಸಾಯಿಸಿ ಅವರ ಮೇಲೆಯೆ ನಿಂತಿರುವ ಪೋಸ್ಟರ್ ಸಲಾರ್ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಹಾಗೂ ಸಿಕ್ಕಾಪಟ್ಟೆ ಮಾಸ್ ಆಗಿರಲಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. 

ಸಲಾರ್ ಸಿನಿಮಾದಲ್ಲಿ ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ಮಿಂಚಿದ್ದಾರೆ. ಇನ್ನು ಖಳನಟನ ಪಾತ್ರದಲ್ಲಿ ಜಗಪತಿಬಾಬು ಬಾಬು ಅಬ್ಬರಿಸಲಿದ್ದಾರೆ. ಇನ್ನು ಉಳಿದಂತೆ ಈಶ್ವರಿ ರಾವ್ ಹಾಗೂ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Scroll to load tweet…


ತಲೆಗೆ ಕ್ಯಾಪ್ ಹಾಕಿ ಓಡುತ್ತಿರುವ ಪ್ರಭಾಸ್; ಏನಿದು ಸಲಾರ್ ಸ್ಟಾರ್‌ನ ಟೋಪಿ ರಹಸ್ಯ?

ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದಿಪುರುಷ್, ನಾಗ್ ಅಶ್ವಿನ್ ಜೊತೆ ಹೊಸ ಸಿನಿಮಾ ಜೊತೆಗೆ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಾಗ್ ಅಶ್ವಿನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅಮಿತಾಬ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಸದ್ಯ ಅಭಿಮಾನಿಗಳು ಸಲಾರ್ ಅಪ್‌ಡೇಟ್ ಎಂಜಾಯ್ ಮಾಡುತ್ತಿದ್ದಾರೆ.