Asianet Suvarna News Asianet Suvarna News

72 HOOREN: ಮುಂಬೈ ಸ್ಯೂಸೈಡ್​ ಬಾಂಬರ್ಸ್​ಗೆ ಸಿಕ್ಕರಾ ಆ 72 ಕನ್ಯೆಯರು?

ಜನರನ್ನು ಕೊಂದರೆ ಸ್ವರ್ಗದಲ್ಲಿ 72 ಕನ್ಯೆಯರು ಸಿಗುತ್ತಾರೆ ಎಂದು ಮದರಾಸಾದಲ್ಲಿ ಹೇಳಿಕೊಡುವ ಸಿನಿಮಾ '72 ಹೂರೆನ್' ಟ್ರೇಲರ್​ ಬಿಡುಗಡೆಯಾಗಿದೆ.
 

Powerful trailer of ashok pandit film 72 hoorain suc
Author
First Published Jun 29, 2023, 2:35 PM IST

ಬಹು ನಿರೀಕ್ಷಿತ ಚಿತ್ರ '72 ಹೂರೇನ್​' ಟ್ರೈಲರ್ (Trailer) ಬಿಡುಗಡೆಯಾಗಿದೆ. ಈ ಟ್ರೇಲರ್ ನೋಡಿದರೆ ಭಯೋತ್ಪಾದನೆಯ ಕರಾಳ ಜಗತ್ತಿನ ಸತ್ಯವನ್ನು ಈ ಚಿತ್ರದಲ್ಲಿ ತೋರಿಸಲಿದ್ದಾರೆ ಎನ್ನುವುದು ತಿಳಿಯುತ್ತದೆ. ಈ ಟ್ರೇಲರ್‌ನಲ್ಲಿ ಭಯೋತ್ಪಾದಕರು ಮೊದಲು ಜನರ ಬ್ರೈನ್‌ವಾಶ್ ಮಾಡುತ್ತಿದ್ದಾರೆ. ಇದರ ನಂತರ, ಅವರು ಜನರನ್ನು ಕೊಲ್ಲಲು ಒತ್ತಾಯಿಸುತ್ತಿದ್ದಾರೆ. ಈಗ ಈ ಅಬ್ಬರದ ಟ್ರೇಲರ್ ನೋಡಿದ ಜನರು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಜಿಹಾದ್ ಹೆಸರಿನಲ್ಲಿ ಜನರನ್ನು ಕೊಂದರೆ ನಿಮಗೆ ಜನ್ನತ್‌ನಲ್ಲಿ 72 ಹೂರೇನ್​ (ಸುಂದರ ಕನ್ಯೆಯರು) ಸಿಗುತ್ತಾರೆ ಎಂದು ಮೌಲ್ವಿಯೊಬ್ಬ ಮದರಾಸಾದಲ್ಲಿ  ಜನರಿಗೆ ಹೇಳುವುದರೊಂದಿಗೆ '72 ಹೂರೇನ್​' ಟ್ರೈಲರ್ ಪ್ರಾರಂಭವಾಗುತ್ತದೆ. ಈ ಚಿತ್ರದ ಒಳಗೆ, ಮುಂಬೈ ದಾಳಿಯ ಬಗ್ಗೆ ತೋರಿಸಲಾಗಿದೆ, ಇದರಲ್ಲಿ ಇಬ್ಬರು ಮುಂಬೈನಲ್ಲಿ ದಾಳಿ ಮಾಡಲು ಯೋಜಿಸಿದ್ದಾರೆ ಮತ್ತು ನಂತರ ಅನೇಕ ಕುಟುಂಬಗಳು ನಾಶವಾಗುತ್ತವೆ. ಈ ದಾಳಿಯಲ್ಲಿ ಭಯೋತ್ಪಾದಕರು ಕೊಲ್ಲಲ್ಪಟ್ಟರು, ಅವರು ಸಾವಿನ ನಂತರ '72 ಹುರಾನ್‌ಗಳನ್ನು' ಹುಡುಕುತ್ತಾರೆ. ಈಗ ಅದೃಷ್ಟ ಖುಲಾಯಿಸುತ್ತದೋ ಇಲ್ಲವೋ ಎಂಬುದು ಚಿತ್ರ ನೋಡಿದ ನಂತರವೇ ಗೊತ್ತಾಗಲಿದೆ.
 
ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಈ ಚಿತ್ರದ ಟ್ರೇಲರ್ (Trailer) ಅನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ ಮತ್ತು ಈ ಟ್ರೈಲರ್ ಅನ್ನು ರಾಷ್ಟ್ರ ಪ್ರಶಸ್ತಿ (Natinal Award) ವಿಜೇತ ಸಂಜಯ್ ಪುರನ್ ಸಿಂಗ್ ಚೌಹಾಣ್ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದರೊಂದಿಗೆ ಈ ವರ್ಷ ಜುಲೈ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡಿದೆ. ಅದೇ ಸಮಯದಲ್ಲಿ, ಸೆನ್ಸಾರ್ ಮಂಡಳಿಯು (Senosr Board) ಅನೇಕ ವಿಷಯಗಳ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿತ್ತು ಮತ್ತು ಈ ಟ್ರೇಲರ್‌ಗೆ ಗ್ರೀನ್ ಸಿಗ್ನಲ್ ನೀಡಲು ನಿರಾಕರಿಸಿತು. ಆದರೆ, ಇದರ ಹೊರತಾಗಿಯೂ ಟ್ರೇಲರ್ ಬಿಡುಗಡೆಯಾಗಿದೆ.

ನನ್ನ ಗಂಡ ಐಸಿಸ್​ ಅಲ್ಲ, ಮಕ್ಕಳೇನು ಜಿಹಾದಿಗಳಾಗಲ್ಲ... ನಟಿ ಪ್ರಿಯಾಮಣಿ ಗರಂ ಗರಂ

ದಿ ಕಾಶ್ಮೀರ್​ ಫೈಲ್ಸ್​, ದಿ ಕೇರಳ ಸ್ಟೋರಿ (The Kerala Story) ಬಿಡುಗಡೆಯಾದಾಗಿನಿಂದಲೂ ಬಹಳ ವಿವಾದ ಸೃಷ್ಟಿಸುತ್ತಲೇ ಬಂದಿದೆ. ಅದರಲ್ಲಿಯೂ ಮುಸ್ಲಿಂ ಧರ್ಮಕ್ಕೆ (Muslim Religion) ಹಿಂದೂ ಯುವತಿಯರನ್ನು ಹೇಗೆ ಮತಾಂತರಗೊಳಿಸಿ ಐಸಿಸ್​ಗೆ ಸೇರ್ಪಡೆ ಮಾಡಲಾಗುತ್ತಿದೆ ಎಂಬ ಕರಾಳ ಕಥೆಯುಳ್ಳ ದಿ ಕೇರಳ ಸ್ಟೋರಿಯನ್ನು ಕಾಂಗ್ರೆಸ್ಸಿಗರು ಸೇರಿದಂತೆ ಒಂದು ಗುಂಪು ಇಂದಿಗೂ ವಿರೋಧಿಸುತ್ತಲೇ ಇದೆ. ಈ ಚಿತ್ರ ಬಿಡುಗಡೆಗೊಂಡ ನಂತರ ಹಲವು ಹಿಂದೂ ಯುವತಿಯರು ಧೈರ್ಯದಿಂದ ಮುಂದೆ ಬಂದು ತಾವು ಮತಾಂತರಗೊಂಡು ಅನುಭವಿಸಿದ್ದ ನೋವಿನ ಕರಾಳ ಸರಮಾಲೆಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಇದರ ಮೂಲಕ ಈ ಸಿನಿಮಾ ಕಾಲ್ಪನಿಕ ಅಲ್ಲ, ಬದಲಿಗೆ ನಿಜವಾದದ್ದು ಎಂದು ಹೇಳಿದ್ದಾರೆ. ದಿ ಕೇರಳ ಸ್ಟೋರಿ ಬಹುತೇಕ  ಬಾಲಿವುಡ್​ ದಾಖಲೆಗಳನ್ನು (Bollywood Records) ಉಡೀಸ್​ ಮಾಡಿ ಈ ಚಿತ್ರ ಮುನ್ನುಗ್ಗುತ್ತಲೇ ಇದೆ. ಇದಾಗಲೇ 250 ಕೋಟಿ ರೂಪಾಯಿಗಳನ್ನು ದಾಟಿಸಿ ಬಾಕ್ಸ್​ ಆಫೀಸ್​ (Box Office) ಕೊಳ್ಳೆ ಹೊಡೆದಿದೆ. ಇದೀಗ ಇದೇ ಚಿತ್ರದ ಸಾಲಿಗೆ ಸೇರ್ಪಡೆಯಾಗುತ್ತಿರುವ ಇನ್ನೊಂದು ಚಿತ್ರವ 72 ಹೂರೇನ್​.

ಹೌದು. ಭಯೋತ್ಪಾದನೆಯ ಹಾಗೂ ಭಯೋತ್ಪಾದಕರ ಅದರಲ್ಲಿಯೂ ಸ್ಯೂಸೈಡ್​ ಬಾಂಬರ್​ಗಳನ್ನು (Suicide Bomber) ಸೃಷ್ಟಿಮಾಡುವ ಕರಾಳ, ಘನಘೋರ ಕಥಾ ಹಂದವನ್ನು ಹೊಂದಿದೆ 72 ಹೂರೇನ್​. ಹೂರೇನ್​ ಎನ್ನುವುದು ಅರೇಬಿಕ್​ ಭಾಷೆಯಾಗಿದ್ದು, ಇದರ ಅರ್ಥ ಸ್ವರ್ಗದಲ್ಲಿರುವ ಕನ್ಯೆಯರು ಇನ್ನೊಂದರ್ಥದಲ್ಲಿ ಹೇಳುವುದಾದರೆ ಸ್ವರ್ಗದಲ್ಲಿರುವ ಅಪ್ಸರೆಯರು. ಸಂಜಯ್ ಪುರಣ್ ಸಿಂಗ್ ಚೌಹಾಣ್ ನಿರ್ದೇಶನದ '72 ಹೂರೇನ್' ಚಿತ್ರದ ಮೊದಲ ಟೀಸರ್ (Teaser) ನಿನ್ನೆ ಅಂದರೆ ಜೂನ್ 4 ರಂದು ಬಿಡುಗಡೆಯಾಗಿದೆ. ಇದರಲ್ಲಿ ಪವನ್ ಮಲ್ಹೋತ್ರಾ ಮತ್ತು ಅಮೀರ್ ಬಶೀರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಭಯೋತ್ಪಾದನೆಯ ಕಾರಣವನ್ನು ಚಿತ್ರದ ಟೀಸರ್ ಮೂಲಕ ಹೇಳಲಾಗಿದೆ. ಕೆಲವು ಮೂಲಭೂತವಾದಿಗಳು ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನರನ್ನು ಹೇಗೆ ಭಯೋತ್ಪಾದಕರನ್ನಾಗಿ ಮಾಡುತ್ತಾರೆ ಎನ್ನುವುದನ್ನು ಈ ಚಿತ್ರ ತೋರಿಸುತ್ತದೆ. ಚಿತ್ರವು ಭಯೋತ್ಪಾದನೆಯ ಮನಸ್ಥಿತಿಯನ್ನು ಅನಾವರಣಗೊಳಿಸಿರುವುದು  ಚಿತ್ರದ ಟೀಸರ್‌ನಿಂದ ಸ್ಪಷ್ಟವಾಗಿದೆ.

Viral Video: ಸಂದರ್ಶನದ ನೇರಪ್ರಸಾರದಲ್ಲಿಯೇ ಆ್ಯಂಕರ್ ಎದ್ರು ಶರ್ಟ್​ ಬಿಚ್ಚೋದಾ ಈ ನಟ?

 

Follow Us:
Download App:
  • android
  • ios