ಕೆಲಸ ಇರ್ಲಿಲ್ಲ ಅಂತ ಕಾಂಟ್ರೋವರ್ಸಿ ಮಾಡುತ್ತಿದ್ದೆ; ಸತ್ಯ ಒಪ್ಪಿಕೊಂಡ ಪೂನಂ ಪಾಂಡೆ ?
ಕಂಗನಾ ರಣಾವತ್ ಲಾಕಪ್ ರಿಯಾಲಿಟಿ ಶೋ ಒಪ್ಪಿಕೊಂಡ ಪೂನಂ ಪಾಂಡೆ, ಇದೀಗ ತಮ್ಮ ಜೀವನದ ಕೆಲವೊಂದು ಸತ್ಯಗಳನ್ನ ರಿವೀಲ್ ಮಾಡಿದ್ದಾರೆ.
ಇಡೀ ಭಾರತವೇ ತಿರುಗಿ ನೋಡುವಂತೆ ಕಾಂಟ್ರೋವರ್ಸಿ ಮಾಡುವ ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಇದೀಗ ಲಾಕ್ ಅಪ್ ಎನ್ನುವ ರಿಯಾಲಿಟಿ ಶೋ ಒಪ್ಪಿಕೊಂಡಿದ್ದಾರೆ. ಎಮ್‌ಎಸ್ ಪ್ಲೇಯರ್‌ನಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದ ಮೂಲಕ ನಾನು ಯಾರು, ನನ್ನ ಜೀವನ ಹೇಗಿದೆ, ಮದುವೆಯಾಗಿ ಅನುಭವಿಸಿದ ಕಷ್ಟಗಳು ಏನು, ಯಾಕೆ ಪದೇ ಪದೇ ತಮ್ಮ ಬಗ್ಗೆ ಕಾಂಟ್ರೋವರ್ಸಿ ಮಾಡುತ್ತೆ ಮಾಧ್ಯಮ ಎಂದು ಜನರಿಗೆ ತಿಳಿಸಲು ಈ ಶೋ ಒಪ್ಪಿಕೊಂಡಿದ್ದಾರಂತೆ.
ಪೂನಂ ಕಾಂಟ್ರೋವರ್ಸಿ:
'ಜನರು ನನ್ನನ್ನು ಬರಿ ಬೋಲ್ಡ್ ಮಾಡೆಲ್ ಮತ್ತು ಎರಡು ನಿಮಿಷದಲ್ಲಿ ಹೆಡ್‌ಲೈನ್ ಮಾಡುವ ಹುಡುಗಿ ಅಂದುಕೊಂಡಿದ್ದಾರೆ. ನನ್ನ ಲೈಫ್‌ನಲ್ಲಿ ಏನು ನಡೆಯುತ್ತಿದೆ, ನಾನು ಎಲ್ಲಿಂದ ಬಂದಿರುವೆ ಎಂದು ತಿಳಿದುಕೊಳ್ಳದೇ ಮಾತನಾಡುತ್ತಾರೆ. ನಾನು ಜೀವನದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದ್ದೀನಿ. ಈಗ ಪಶ್ಚಾತಾಪವಾಗುತ್ತಿದೆ. ನಾನು ದೌರ್ಜನ್ಯಕ್ಕೆ ಒಳಗಾಗಿದ್ದೆ. ಆಗ ಟ್ಟಿಟರ್‌ನಲ್ಲಿ ನಾನು ಟ್ರೆಂಡ್ ಆಗುತ್ತಿದೆ. ಒಂದು ಮಾಧ್ಯಮದಲ್ಲಿ ನೋಡಿದೆ ನನ್ನ ಜೀವನದ ಬಗ್ಗೆ ಚರ್ಚೆ ಮಾಡುವುದಕ್ಕೆ ಇಬ್ಬರು ಕುಳಿತಿದ್ದರು. ಅವಳು ಈ ತೀತಿ ಬಟ್ಟೆ ಹಾಕುವುದಕ್ಕೆ ಇವೆಲ್ಲಾ ಆಗುತ್ತಿರುವುದು. ಅವಳ ಜೊತೆ ಇರುವವರು ಕೂಡ ಹಾಗೆ ಇದ್ದಾರೆ, ಅಂದರು. ಹಾಗೇ ಅವರಿಗೆ ಯಾರೂ ಇಲ್ಲ, ಅದಿಕ್ಕೆ ಇವೆಲ್ಲಾ ಮಾಡುತ್ತಿದ್ದಾರೆ, ಎನ್ನುತ್ತಿದ್ದರು. ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳದೇ ಯಾಕೆ ಅವರು ಹೀಗೆ ಕಾಮೆಂಟ್ ಮಾಡುತ್ತೀರಾ? ನಾನು ಮಿಡಲ್ ಕ್ಲಾಸ್‌ನಿಂದ ಬಂದಿರುವ ಹುಡುಗಿ. ಜೀವನದಲ್ಲಿ ನಾನು ತುಂಬಾನೇ ಕಲಿತಿರುವೆ. ನನ್ನನ್ನು ನಾನು ಪಾಲಿಶ್ ಮಾಡಿಕೊಂಡಿರುವೆ. ಕೆಲಸಕ್ಕೆ ತಕ್ಕಂತೆ ಬದಲಾಗಿರುವೆ,' ಎಂದು ಇ-ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಪೂನಂ ಮಾತನಾಡಿದ್ದಾರೆ.
ಕಾಂಟ್ರೋವರ್ಸಿ ಬೇಡವೇ ಬೇಡ:
'ಆದಷ್ಟು ಕಾಂಟ್ರೋವರ್ಸಿಯಿಂದ ದೂರ ಇರಲು ಇಷ್ಟ ಪಡುವೆ. ಆದರೆ ಏನಾದರೂ ಒಂದು ಬಂದು ನನ್ನ ಸುತ್ತಿಕೊಳ್ಳುತ್ತದೆ. ನಾನು ಅಲ್ಲಿಗೆ ಜೀವನ ನಿಲ್ಲಿಸುವುದಿಲ್ಲ. ಪದೇ ಪದೇ ಸಾಧನೆ ಮಾಡಲು ಪ್ರಯತ್ನ ಮಾಡುತ್ತೇನೆ. ಈ ಶೋ ಮೂಲಕ ಜನರಿಗೆ ನಾನೂ ಮನುಷ್ಯೆ ಎಂಬುದನ್ನು ತೋರಿಸಿಕೊಡಬೇಕಾಗಿದೆ. ನಾನು ಜೀವನದಲ್ಲಿ ತಪ್ಪು ಮಾಡಿದ್ದೀನಿ. ಇದರಿಂದ ನನಗೆ ನೋವಾಗಿದೆ. ಆದರೆ ತೀರ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡಿದರೆ ಬೇಸರವಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ನನ್ನ ಜೀವನ ಹೇಗಿದೆ ಎಂದು ನನಗೇ ಮಾತ್ರ ಗೊತ್ತು. ನಾನು ಧ್ವನಿ ಎತ್ತಲು ನನಗೊಂದು ಅವಕಾಶ ಸಿಗುತ್ತಿರುವುದಕ್ಕೆ ಖುಷಿ ಇದೆ. ಈ ರೀತಿ ಬಟ್ಟೆ ಹಾಕಿಕೊಳ್ಳುವುದಕ್ಕೆ ನನಗೆ ಇಷ್ಟ. ನಾನು ಜೀವನ ಇರುವುದು ಹೀಗೆ. ನಾನು ಎಲ್ಲರಂತೆ ನಾರ್ಮಲ್,' ಎಂದು ಪೂನಂ ಹೇಳಿದ್ದಾರೆ.
'ನನ್ನ ವೈಯಕ್ತಿಕ ಜೀವನ ಕೆಳಗೆ ಬೀಳುತ್ತಿರುವಾಗ, ಯಾರೂ ನನ್ನನ್ನು ನಂಬಲಿಲ್ಲ. ನನ್ನ ಪರವಾಗಿರಲಿಲ್ಲ. ನಾನು ದೊಡ್ಡ ಕಾಂಟ್ರೋವರ್ಸಿ ಮಾಡಲು ಕಾರಣ ನನಗೆ ಕೆಲಸ ಸಿಗುತ್ತಿರಲಿಲ್ಲ. ನಾನು ಹೊರ ಬಂದು ಕೆಲಸ ಮಾಡಬೇಕು ಎನ್ನುವ ಆಸೆ ನನಗಿದೆ. ನಾನು ತುಂಬಾನೇ ಚಿಕ್ಕ ವಯಸ್ಸಿಗೇ ವೃತ್ತಿ ಜೀವನ ಆರಂಭಿಸಿದೆ. ಯಾರೇ ಬಂದು, ಹೀಗೆ ಮಾಡು ಹಾಗೆ ಮಾಡು ಅಂತ ಹೇಳಿದ್ದರೆ ಕಣ್ಣು ಮುಚ್ಚಿಕೊಂಡು ನಂಬುತ್ತಿದ್ದೆ. ಜೀವನದಲ್ಲಿ ಸಾಧನೆ ಮಾಡಬೇಕು ಅಂದ್ರೆ ಹೀಗೆಲ್ಲಾ ಮಾಡಬಾರದು ಎಂದು ಆಮೇಲೆ ತಿಳಿಯಿತು. ಈ 15 ನಿಮಿಷ ಪಬ್ಲಿಸಿಟಿ ಮುಖ್ಯವಲ್ಲ, ಎಂದು ಆಗ ನನಗೆ ಅರಿವಾಯಿತು,' ಎಂದಿದ್ದಾರೆ ಪೂನಂ.
ಸಂಬಂಧ, ಮದುವೆ?
'ನನ್ನ ಜೀವನ ಪ್ರತಿಯೊಂದೂ ಘಟನೆಯ ಬಗ್ಗೆಯೂ ನಾನು ಲಾಕ್ ಅಪ್‌ನಲ್ಲಿ ಹಂಚಿಕೊಳ್ಳುವೆ. ಯಾವುದೇ ಫಿಲ್ಟರ್ ಇರುವುದಿಲ್ಲ. ರಿಲೇಶನ್‌ಶಿಪ್‌ನಲ್ಲಿ ನಾನು ಮಾಡಿದ ದೊಡ್ಡ ತಪ್ಪು. ಅದರಿಂದ ಆದ ಏಳು ಬೀಳು. ಹೊಸ ಅವತಾರದ ಪೂನಂ ನೋಡುತ್ತೀರಿ. ಆದರೆ ಮತ್ತೆ ಪ್ರೀತಿಯಲ್ಲಿ ಬೀಳುವುದಕ್ಕೆ ನನಯ ಭಯವಿದೆ. ಪ್ರೀತಿಸಲು ನನಗೆ ಇಷ್ಟವಿಲ್ಲ. ನನ್ನ ಪತಿಯಿಂದ ಆದ ದೌರ್ಜನ್ಯದಿಂದ ಹೊರ ಬರಲು ಸಮಯ ತೆಗೆದುಕೊಂಡೆ. ಜನರ ಕಾಮೆಂಟ್ ಮತ್ತು ಟ್ರೋಲ್ ನನ್ನನ್ನು ಕುಗ್ಗಿಸಿತ್ತು. ಈಗ ಅದಕ್ಕೆಲ್ಲಾ ಬ್ರೇಕ್ ಹಾಕಲು ಸಿದ್ಧಳಾಗಿರುವೆ,' ಎಂದು ಪೂನಂ ಮಾತನಾಡಿದ್ದಾರೆ.