Asianet Suvarna News Asianet Suvarna News

ಕನ್ನಡ ಸಿನಿಮಾದಲ್ಲೂ ನಟಿಸಿದ್ರು ಪೂನಂ, ಈಗ ಆ ಹೀರೋನೂ ಇಲ್ಲ, ಪೂನಂ ಸಹ ಇಲ್ಲ!

ಅಸಹಜ ಸಾವಿನ ಕಾರಣಕ್ಕೆ ಸುದ್ದಿಯಲ್ಲಿರುವ ಪೂನಂ ಕನ್ನಡ ಸಿನಿಮಾದಲ್ಲೂ ನಟಿಸಿದ್ರು. ರಿಲೀಸೇ ಆಗದ ಆ ಸಿನಿಮಾದ ಹೀರೋ ಹಿಂದೆಯೇ ಸಾವನ್ನಪ್ಪಿದ್ರೆ ಪೂನಂ ಈಗ ಕೊನೆಯುಸಿರೆಳೆದಿದ್ದಾರೆ.

 

poonam pandey acted in kannada movie
Author
First Published Feb 3, 2024, 10:41 AM IST

ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಕನ್ನಡದಲ್ಲಿ ಒಂದು ಸಿನಿಮಾ ಸುದ್ದಿಯಲ್ಲಿತ್ತು. ಆ ಸಿನಿಮಾ ಹೆಸರು 'ಲವ್‌ ಈಸ್ ಪಾಯಿಸನ್‌' ಅಂತ. ಇಂಗ್ಲೀಷ್ ಹೆಸರಿನ ಈ ಕನ್ನಡದ ಸಿನಿಮಾದಲ್ಲಿ ನಟಿಸಿದ್ದು ಜಂಗಲ್ ಜಾಕಿ ರಾಜೇಶ್. ಈ ಜಂಗಲ್ ಜಾಕಿ ರಾಜೇಶ್ ಹೆಸ್ರು ಎಲ್ಲೋ ಕೇಳಿದಂಗಿದೆಯಲ್ಲ ಅಂತ ಅನಿಸಬಹುದು. ಹೌದು, ಆಗ ಸಖತ್ ಸದ್ದು ಮಾಡಿದ್ದ ರಿಯಾಲಿಟಿ ಶೋ ಒಂದರ ವಿನ್ನರ್ ಈ ರಾಜೇಶ್. ತನ್ನ ಹಳ್ಳಿಯಲ್ಲಿ ತನ್ನ ಪಾಡಿಗೆ ತಾನಿದ್ದ ಯುವಕ ರಾತ್ರೋ ರಾತ್ರಿ ಕನ್ನಡ ನಾಡಿನ ಮನೆಮಾತಾಗಿದ್ದ. ಇದಕ್ಕೆ ಕಾರಣ ರಿಯಾಲಿಟಿ ಶೋ. ಹೌದು, ಇದು ರಾಜೇಶ್ ಅನ್ನೋ ಹಳ್ಳಿಯ ತೀರಾ ಸಾಮಾನ್ಯ ಹುಡುಗನಿಗೆ ಸಖತ್ ಪಾಪ್ಯುಲಾರಿಟಿ ತಂದುಕೊಟ್ಟಿತು. ಈ ಥರ ಸಡನ್ನಾಗಿ ಬಂದ ಪಾಪ್ಯುಲಾರಿಟಿ ಒಂದು ಭ್ರಮೆ ಹುಟ್ಟುಹಾಕೋದಂತೂ ನಿಜ. ಇಂಥಾ ಸಡನ್ ಜನಪ್ರಿಯತೆ ಜಾಸ್ತಿ ದಿನ ಇರೋದಿಲ್ಲ ಅನ್ನೋದೂ ನಿಜವೇ. ರಾಜೇಶ್ ವಿಷಯದಲ್ಲೂ ಹೀಗೇ ಆಯ್ತು. ಜಂಗಲ್ ಜಾಕಿಗೆ ಬಂದ ಫೇಮ್ ಜಾಸ್ತಿ ದಿನ ಹಾಗೇ ಉಳಿಯಲಿಲ್ಲ.

ಈ ನಡುವೆ ರಾಜೇಶ್‌ ಸದ್ದು ಮಾಡಿದ್ದು ಲವ್‌ ಈಸ್ ಪಾಯಿಸನ್ ಸಿನಿಮಾ ಮೂಲಕ. ಇಲ್ಲಿ ಅವರ ಮತ್ತೆ ಮುನ್ನೆಲೆಗೆ ಬರಲು ಕಾರಣ ಪೂನಂ ಪಾಂಡೆ. ಮಾಡೆಲಿಂಗ್ ಹಾಗೂ ನಟನೆಯಲ್ಲಿ ಹೆಸರು ಮಾಡಿದ್ದಕ್ಕಿಂತಾ, ಗಾಸಿಪ್ಪುಗಳ ಮೂಲಕ ಹೆಚ್ಚು ಗುಲ್ಲೆಬ್ಬಿಸಿದ್ದ ಪೂನಂ ಪಾಂಡೆ ಕನ್ನಡದ ಲವ್ ಇಸ್ ಪಾಯಿಸನ್ ಸಿನಿಮಾದಲ್ಲಿ ಕೂಡ ನಟಿಸಿದ್ದರು. ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಸರಿಯಾಗಿ ಹತ್ತು ವರ್ಷಗಳ ಹಿಂದೆ, ಪೂನಂ ಪಾಂಡೆ ಕನ್ನಡಕ್ಕೆ ಬರ್ತಾರೆ, ರಿಯಾಲಿಟಿ ಶೋ ಗೆದ್ದಿದ್ದ ಜಂಗಲ್ ಜಾಕಿ ರಾಜೇಶ್ ಎದುರು ಪೂನಂ ಪಾಂಡೆ ಹೆಜ್ಜೆ ಹಾಕ್ತಾರೆ ಅಂದಾಗ ಯಾರೆಂದರೆ ಯಾರು ನಂಬಿರಲಿಲ್ಲ. ಆದರೆ ಎಲ್ಲ ಲೆಕ್ಕಾಚಾರವನ್ನ ತಲೆ ಕೆಳಗಾಗಿಸಿ ಪೂನಂ ಪಾಂಡೆ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದಿದ್ದರು. ತಮ್ಮ ವಯ್ಯಾರದ ಮೂಲಕ ಚಿತ್ರದಲ್ಲಿ ಪಡ್ಡೆಗಳ ಹೃದಯವನ್ನೂ ಕದ್ದಿದ್ದರು.

ಪೂನಂ ಪಾಂಡೆ ಸಾವಿನ ಸುತ್ತ ಅನುಮಾನ, ಜೀವಂತ ಸುದ್ದಿ ನಡುವೆ ಡ್ರಗ್ ಓವರ್ ಡೋಸ್ ಶಾಕ್!

ಪೂನಂ ಪಾಂಡೆ ಕನ್ನಡಕ್ಕೆ ಬಂದಿದ್ದರ ಹಿಂದೆ ಒಂದು ಕಾರಣ ಇತ್ತು. ಆಗಷ್ಟೇ ನಶಾ ಸಿನಿಮಾ ಮೂಲಕ ಜನಪ್ರಿಯತೆಯನ್ನ (popularity) ಗಳಿಸಿದ್ದ ಪೂನಂ ಪಾಂಡೆ, ಲವ್ ಇಸ್ ಪಾಯ್ಸನ್ ಚಿತ್ರಕ್ಕಾಗಿ ಬಂದಾಗ ಕನ್ನಡದ ನಟಿಯರು ನಿಮಗೆ ಕಾಣಿಸಲಿಲ್ಲವಾ ಎಂಬ ಪ್ರಶ್ನೆ ಆ ಚಿತ್ರದ ನಿರ್ಮಾಪಕರ ಮುಂದೆ ಬಂದಿತ್ತು. ಯಾಕೆಂದರೆ ಈ ಹಾಡಿಗಾಗಿಯೇ ಅರ್ಧ ಕೋಟಿ ಹಣ ನಿರ್ಮಾಪಕರು ಸುರಿದಿದ್ದರು. ಆಗ ಪೂನಂ ಪಾಂಡೆ ಅವರನ್ನ ಕನ್ನಡಕ್ಕೆ ಕರೆ ತಂದಿದ್ದು ಯಾಕೆ ಅನ್ನುವುದರ ಕುರಿತು ಮಾಹಿತಿಯನ್ನ ನಿರ್ಮಾಪಕರು (producer) ಹಂಚಿಕೊಂಡಿದ್ದರು. ಕನ್ನಡದ ಅನೇಕ ನಟಿಯರ ಬಳಿ, ಐಟಂ ಸಾಂಗ್ (item song) ನ ಪ್ರಸ್ತಾವನೆ ತಗೊಂಡು ಹೋದರೂ ಯಾರೊಬ್ಬರೂ ಕ್ಯಾರೆ ಎನ್ನಲಿಲ್ಲ.

'ಹೀರೋ ಹೆಸರು ಕೇಳಿದ ತಕ್ಷಣವೇ ಚಿತ್ರದಲ್ಲಿ ಕುಣಿಯಲು ಒಪ್ಪಲಿಲ್ಲ. ಇದು ನಮಗೆ ಸರಿ ಕಾಣಲಿಲ್ಲ. ಸ್ಯಾಂಡಲ್‌ವುಡ್ ನಟಿಯರ ಮೇಲಿನ ಹಠಕ್ಕಾಗಿ ಪೂನಂರನ್ನು ಕರೆತಂದೆವು. ಪರಭಾಷಾ ನಟಿಯರನ್ನು ಯಾಕೆ ಕರೆತರುತ್ತೀರಾ ಎಂದು ನನ್ನ ಕೆಲವರು ಪ್ರಶ್ನಿಸಿದ್ದರು. ಇಲ್ಲಿನವರು ನಟಿಸದೇ ಇದ್ದಾಗ ಅನಿವಾರ್ಯವಾಗಿ ನಾವು ಬೇರೆಯವರನ್ನು ಕರೆತರಬೇಕಾಗುತ್ತದೆ. ಪೂನಂರನ್ನು ಅನಿವಾರ್ಯವಾಗಿಯೇ ಕರೆತಂದೆವು' ಎಂದಿದ್ದರು ಲವ್ ಇಸ್ ಪಾಯ್ಸನ್ ಚಿತ್ರದ ನಿರ್ಮಾಪಕರು.

ಹುಟ್ಟುವಾಗಲೇ ಹೃದಯ ಸಮಸ್ಯೆ, 3 ತಿಂಗಳಿಗೆ ಸರ್ಜರಿ; ನನ್ನ ಮಗಳು ಫೈಟರ್ ಎಂದ ಬಿಪಾಶಾ ಪತಿ!

ಮುಂದೆ ಲವ್ ಇಸ್ ಪಾಯಿಸನ್ ಬಿಡುಗಡೆ ಮುನ್ನವೇ ದುರಂತವೊಂದು ನಡೆದು ಹೋಯಿತು. ನಾಯಕ ರಾಜೇಶ್ ಮಹಡಿ ಮೇಲಿಂದ ಬಿದ್ದು ದುರಂತ ಅಂತ್ಯವನ್ನ ಕಂಡಿದ್ದರು. ಇನ್ನೂ ಚಿತ್ರೀಕರಣ (Shooting) ಬಾಕಿ ಇದೆ ಹಾಗಾಗಿ ಚಿತ್ರ ರಿಲೀಸ್ ಅಗುವುದು ಡೌಟು ಎಂದು ಚಿತ್ರರಂಗದಲ್ಲಿ ಮಾತು ಕೇಳಿಬಂತು. ಆದರೆ ಈ ಅಭಿಪ್ರಾಯ ಸುಳ್ಳಾಗಿಸಿ ಈ ಚಿತ್ರ 2014ಕ್ಕೆ ಬಿಡುಗಡೆಯಾಯ್ತು. ಈ ಲವ್ ಇಸ್ ಪಾಯಿಸನ್ ಚಿತ್ರ ಬಿಡುಗಡೆಯಾಗಿ ಹತ್ತು ವರ್ಷದ ನಂತರ ರಾಜೇಶ್ ಅವರಂತೆಯೇ ಪೂನಂ ಪಾಂಡೆ ದುರಂತ ಅಂತ್ಯವನ್ನ ಕಂಡಿದ್ದಾರೆ. ಗರ್ಭನಾಳದ ಕ್ಯಾನ್ಸರೋ, ಅತಿಯಾದ ಡ್ರಗ್ಸ್ (drugs) ಬಳಕೆಯೋ ನಟಿಯ ಬದುಕನ್ನು ಆಪೋಶನ ತೆಗೆದುಕೊಂಡಿದೆ.

Follow Us:
Download App:
  • android
  • ios