Asianet Suvarna News Asianet Suvarna News

ಪೂನಂ ಪಾಂಡೆ ಸಾವಿನ ಸುತ್ತ ಅನುಮಾನ, ಜೀವಂತ ಸುದ್ದಿ ನಡುವೆ ಡ್ರಗ್ ಓವರ್ ಡೋಸ್ ಶಾಕ್!

ಬೋಲ್ಡ್ ಅವತಾರಗಳಿಂದಲೇ ಸುದ್ದಿಯಾಗುತ್ತಿದ್ದ ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಗರ್ಭಕಂಠ ಕ್ಯಾನ್ಸರ್‌ನಲ್ಲಿ ದಿಢೀರ್ ಸಾವು ಸಂಭವಿಸಲ್ಲ. ಪೂನಂ ಜೀವಂತವಾಗಿದ್ದಾಳೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ನಡುವೆ ಪೂನಂ ನಿಧನ ನಿಜ. ಆದರೆ ಕ್ಯಾನ್ಸರ್‌ನಿಂದ ಸಾವಾಗಿಲ್ಲ. ಡ್ರಗ್ ಓವರ್ ಡೋಸ್‌ನಿಂದ ಸಾವಾಗಿದೆ ಅನ್ನೋ ಮಾಹಿತಿಗಳೂ ಹೊರಬಿದ್ದಿದೆ.

Did Model Poonam Pandey dies of Drug overdose says unofficial report after Death rumour ckm
Author
First Published Feb 2, 2024, 8:25 PM IST

ಕಾನ್ಪುರ(ಫೆ.02) ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಮನೋರಂಜನಾ ಕ್ಷೇತ್ರ ಮಾತ್ರವಲ್ಲ, ಕ್ರೀಡೆ, ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಭಾರಿ ಜನಪ್ರಿಯ. ಬೋಲ್ಡ್ ಹಾಗೂ ಸೆಕ್ಸಿ ಅವತಾರಗಳಿಂದಲೇ ಸಂಚಲನ ಸೃಷ್ಟಿಸುತ್ತಿದ್ದ ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಅನ್ನೋ ಸುದ್ದಿ ಆಘಾತ ತಂದಿತ್ತು. ಇದಕ್ಕಿದ್ದಂತೆ ಪೂನಂ ಪಾಂಡೆ ನಿಧನ ಸುದ್ದಿ ತಲ್ಲಣ ಸೃಷ್ಟಿಸಿತ್ತು. ಪೂನಂ ಪಾಂಡೆ ಮ್ಯಾನೇಜರ್ ಸಾವಿನ ಸುದ್ದಿ ಖಚಿತಪಡಿಸಿದ್ದರು. ಆದರೆ ಗರ್ಭಕಂಠ ಕ್ಯಾನ್ಸರ್‌ನಿಂದ ದೀಢೀರ್ ಸಾವು ಸಂಭವಿಸುವುದಿಲ್ಲ ಅನ್ನೋ ತಜ್ಞ ವೈದ್ಯರ ಮಾತುಗಳ ಬೆನ್ನಲ್ಲೇ ಪೂನಂ ಪಾಂಡೆ ಸಾವಿನ ಸುತ್ತ ಅನುಮಾನಗಳು ಮೂಡಿಸಿದೆ. ಪೂನಂ ಪಾಂಡೆ ಜೀವಂತ ವಾಗಿದ್ದಾಳೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಆದರೆ ಕೆಲ ವರದಿಗಳ ಪ್ರಕಾರ, ಪೂನಂ ಪಾಂಡೆ ಮೃತಪಟ್ಟಿರುವುದು ನಿಜ. ಆದರೆ ಗರ್ಭಕಂಠ ಕ್ಯಾನ್ಸರ್‌ನಿಂದ ಅಲ್ಲ, ಓವರ್ ಡೋಸ್ ಔಷಧಿಯಿಂದ ಮೃತಪಟ್ಟಿದ್ದಾಳೆ ಎಂದು ವರದಿಗಳು ಹೇಳುತ್ತಿದೆ.

ಚಿಕಿತ್ಸೆ ವೇಳೆ ನೀಡಿದ ಔಷದಿ ಓವರ್ ಡೋಸ್‌ನಿಂದ ಪೂನಂ ಪಾಂಡೆ ಮೃತಪಟ್ಟಿದ್ದಾಳೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಮಾಹಿತಿಗಳು ಅಧಿಕೃತವಾಗಿಲ್ಲ. ಯಾವ ಔಷಧಿ, ಯಾವ ಚಿಕಿತ್ಸೆ ಪಡೆಯುತ್ತಿದ್ದರೂ, ಪೂನಂ ಗರ್ಭಕಂಠ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದರೇ? ಅನ್ನೋದು ದೃಢಪಟ್ಟಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಡ್ರಗ್ ಓವರ್ ಡೋಸ್‌ನಿಂದ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿಗಳು ಹೆಚ್ಚಾಗಿ ಹರಿದಾಡುತ್ತಿದೆ.ಆದರೆ ಸಾವಿನ ಸುತ್ತ ಹಲವು ಅನುಮಾನಗಳು ಕಾಡುತ್ತಿರುವುದು ನಿಜ.

32 ಲಕ್ಷ ಚಂದಾದಾರರ ಈ ಆ್ಯಪ್​ ಪೂನಂ ಪಾಂಡೆಯನ್ನು ಕೋಟ್ಯಧಿಪತಿ ಮಾಡಿತ್ತು! ನಟಿಯ ಸಂಪಾದನೆ ಮಾರ್ಗ ಹೀಗಿತ್ತು

ಸಾವಿನ ಸುದ್ದಿ ಬೆನ್ನಲ್ಲೇ ಇದು ಪ್ರಚಾರಕ್ಕಾಗಿ ಮಾಡಿದ ತಂತ್ರ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಗರ್ಭಕಂಠ ಕ್ಯಾನ್ಸರ್ ಲಸಿಕೆ ಕುರಿತು ಮಹತ್ವದ ನಿರ್ಧಾರ ಘೋಷಿಸಿದ್ದರು. ಆರೋಗ್ಯ ಕ್ಷೇತ್ರದಲ್ಲಿನ ಸವಾಲು ಎದುರಿಸಲು ಅನುದಾನ ಮಾಹಿತಿ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಮಾರ್ಕೆಟಿಂಗ್ ಎಜೆನ್ಸಿಗಳು ಈ ರೀತಿಯ ಕತೆ ಕಟ್ಟಿದೆ ಅನ್ನೋ ಮಾತುಗಳು ಇವೆ. ಆದರೆ ಯಾವುದೇ ಮಾಹಿತಿಗಳು ಅಧಿಕೃತವಾಗಿಲ್ಲ.

ಪೂನಂ ಪಾಂಡೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂಪೂರ್ಣ ಸಕ್ರಿಯವಾಗಿದ್ದರು. ನಾಲ್ಕು ದಿನದ ಹಿಂದೆ ಈವೆಂಟ್ ಒಂದರಲ್ಲಿ ಪೂನಂ ಪಾಂಡೆ ತಮ್ಮ ಎಂದಿನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋಗಳನ್ನು ಪೂನಂ ಪಾಂಡೆ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಲಭ್ಯವಿದೆ. ಹೀಗಾಗಿ ಏಕಾಏಕಿ ಪೂನಂ ಗರ್ಭಕಂಠ ಕ್ಯಾನ್ಸರ್‌ನಿಂದ ನಿಧನ ಸಾಧ್ಯವಿಲ್ಲ ಎನ್ನುತ್ತಿದೆ ವೈದ್ಯಕೀಯ ಮೂಲಗಳು. ಆದರೆ ಡ್ರಗ್ ಓವರ್ ಡೋಸ್ ಸಾಧ್ಯತೆ ಹೆಚ್ಚಿದೆ ಎಂದು ಮಾಹಿತಿಗಳು ಹರಿದಾಡುತ್ತಿದೆ.

ಬೋಲ್ಡ್‌ ಫೋಟೋಸ್‌, ಸೆಕ್ಸೀ ಲುಕ್‌ನಿಂದ ಫೇಮಸ್ ಆಗಿದ್ದ ಹಾಟ್ ನಟಿ ಪೂನಂ ಪಾಂಡೆ

ಪೂನಂ ಪಾಂಡೆ ನಿಧನ ಸುದ್ದಿ ಕುರಿತು ಆಸ್ಪತ್ರೆ ಮೂಲಗಳಿಂದಾಗಲಿ, ಪೂನಂ ಕುಟುಂಬಸ್ಥರಿಂದಾಗಲಿ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. 

Follow Us:
Download App:
  • android
  • ios