Asianet Suvarna News Asianet Suvarna News

ಸಾಲು ಸಾಲು ಸೋಲು: ಐಟಂ ಹಾಡುಗಳಿಗೆ ಕಣ್ಣಿಟ್ಟ ಕರಾವಳಿ ಸುಂದರಿ ಪೂಜಾ ಹೆಗ್ಡೆ

ಸಾಲು ಸಾಲು ಸೋಲು ಕಂಡಿರುವ ನಟಿ ಪೂಜಾ ಹೆಗ್ಡೆ ಐಟಂ ಹಾಡುಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. 

Pooja Hegde Looking For Item Numbers after failure sgk
Author
First Published May 15, 2023, 5:36 PM IST

ಕರ್ನಾಟಕ ಮೂಲದ ಬಹುಭಾಷಾ ನಟಿ ಪೂಜಾ ಹೆಗ್ಡೆ ಸಾಲು ಸಾಲು ಸೋಲಿನ ಸುಳಿಯಲ್ಲಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದ ನಟಿ ಪೂಜಾ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಬಳಿಕ ಸರಣಿ ಸೋಲು ಕಂಡಿದ್ದಾರೆ. ಪೂಜಾ ನಟನೆಯ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳು ವರ್ಕೌಟ್ ಆಗುತ್ತಿಲ್ಲ. ಸದ್ಯ ತೆಲುಗಿನಲ್ಲಿ ಪೂಜಾ ಹೆಗ್ಡೆ ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ. ಹಿಂದಿಯಲ್ಲಿ ಇನ್ನೂ ಬೇಡಿಕೆ ಕುಗ್ಗಿಸಿಕೊಳ್ಳದ ಪೂಜಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಪೂಜಾ ಹೊಸ ನಿರ್ಧಾರ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಪೂಜಾ ನಟನೆಯ ಐದು ಸಿನಿಮಾಗಳು ಸೋಲು ಕಂಡಿವೆ. ರಾಧೆ ಶ್ಯಾಮ್, ಬೀಸ್ಟ್, ಆಚಾರ್ಯ, ಸರ್ಕಸ್ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೊಂಚ ಕಲೆಕ್ಷನ್ ಮಾಡಿದರೂ ಸಹ ನಿರೀಕ್ಷೆಯ ಪ್ರತಿಕ್ರಿಯೆ ಸಿಕ್ಕಿಲ್ಲ. ಪೂಜಾ ಹೆಗ್ಡೆಗೂ ಬೂಸ್ಟ್ ನೀಡಿಲ್ಲ. ಹಾಗಾಗಿ ಪೂಜಾಗೆ ದೊಡ್ಡ ಸಕ್ಸಸ್ ಅನಿವಾರ್ಯವಾಗಿದೆ. ಹಾಗಾಗಿ ಪೂಜಾ ಸದ್ಯ ಹೊಸ ನಿರ್ಧಾರಕ್ಕೆ ಬಂದಿದ್ದು ನಟನೆಯಿಂದ ಐಟಂ ಹಾಡಿನ ಕಡೆ ಗಮನ ಕೊಡುತ್ತಿದ್ದಾರೆ ಎನ್ನಲಾಗಿದೆ. ಪೂಜಾ ಹೆಗ್ಡೆ ಸದ್ಯ ಐಟಂ ಹಾಡನ್ನು ಸರ್ಚ್ ಮಾಡುತ್ತಿದ್ದಾರಂತೆ. 

Pooja Hegde: ಮಂಗಳೂರಿನ ಕಾಡಿನಲ್ಲಿ ಪೂಜಾ ಹೆಗ್ಡೆ ಸುತ್ತಾಟ, ಹೆಬ್ಬಲಸಿಗೆ ಮಾರುಹೋದ ಸ್ಟಾರ್ ನಟಿ

ಸೌತ್‌ನಲ್ಲಿ ಇತ್ತೀಚೆಗೆ ಐಟಂ ಹಾಡಿನ ಮೂಲಕ ಸಮಂತಾ ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದರು. ಪುಷ್ಪ ಸಿನಿಮಾದಲ್ಲಿ ಸಮಂತಾ 'ಹೂಂ ಅಂತಿಯಾ ಮಾವ..' ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ್ದರು. ಸಮಂತಾ ಸಕ್ಸಸ್ ಬಳಿಕ ಅನೇಕ ನಟಿಯರು ಐಟಂ ಹಾಡಿನ ಕಡೆ ಹೆಚ್ಚು ಗಮನ ಹರಿಸಿದ್ದಾರೆ ಎನ್ನಲಾಗಿದೆ. ಪೂಜಾ ಹೆಗ್ಡೆ ಕೂಡ ಐಟಂ ಹಾಡಿಗಾಗಿ ಕಾಯುತ್ತಿದ್ದಾರಂತೆ. ಈ ಮೂಲಕವಾದರೂ ದೊಡ್ಡ ಸಕ್ಸಸ್ ಸಿಗುತ್ತಾ ಎಂದು ಪೂಜಾ ಎದುರು ನೋಡುತ್ತಿದ್ದಾರೆ. 

ಅವರ ಜೊತೆ ಹೆಚ್ಚು ಮಾತಾಡಿಲ್ಲ ಆದರೆ...: KGF ಸ್ಟಾರ್ ಯಶ್ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದು ಹೀಗೆ

ಪೂಜಾ ಹೆಗ್ಡೆ ಬಾಲಿವುಡ್‌ನಿಂದ ಆಫರ್ ಪಡೆಯುತ್ತಿದ್ದರೂ ಕಳೆದ ಕೆಲವು ತಿಂಗಳಿಂದ ತೆಲುಗಿನಲ್ಲಿ ಯಾವುದೇ ಸಿನಿಮಾಗೂ ಸಹಿ ಮಾಡಿಲ್ಲ. ಮಹೇಶ್ ಬಾಬು ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ ಎನ್ನಲಾಗಿದೆ. ಸದ್ಯ ಪೂಜಾ ಬಳಿ ಯಾವುದೇ ತೆಲುಗು ಸಿನಿಮಾವಿಲ್ಲ. ಹಾಗಾಗಿ ಐಟಂ ಹಾಡುಗಳ ಮೇಲೆ ಕಣ್ಣಿಟ್ಟಿದ್ದಾರೆ. ಸಮಂತಾ ಹಾಗೆ ಪೂಜಾ ಕೂಡ ಐಟಂ ಹಾಡಿನಲ್ಲಿ ಕಾಣಿಸಿಕೊಂಡು ದೊಡ್ಡ ಸಕ್ಸಸ್ ಕಾಣುತ್ತಾರಾ ಮುಂದಿನ ಸಿನಿಮಾಗಳಲ್ಲಿ ಗೊತ್ತಾಗಲಿದೆ. ಸಾಲು ಸಾಲು ಸೋಲಿನ ಬಳಿಕ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳುವುದು ತುಂಬಾ ಕಷ್ಟ. ಹಾಗಾಗಿ ಪೂಜಾ ಹೆಗ್ಡೆ ಮತ್ತೆ ಯಶಸ್ಸು ಕಾಣುತ್ತಾರ ಕಾದು ನೋಡಬೇಕಿದೆ. 

Follow Us:
Download App:
  • android
  • ios