ಕಳೆದ ಕೆಲವು ದಿನಗಳಿಂದ ಶಿವಸೇನೆ ಮತ್ತು ಕಂಗನಾ ನಡುವೆ ವಾಕ್ಸಮರ ನಡೆಯುತ್ತಲೇ ಇದೆ. ನಟಿಯ ಮುಂಬೈ ಬಂಗಲೆ ಒತ್ತುವರಿ ಮಾಡಿದ ಬಿಎಂಸಿ ಮತ್ತು ಮಹಾರಾಷ್ಟ್ರ ಸರ್ಕಾರದ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೆಟ್ಟ ಪದ ಬಳಕೆ ಆರೋಪದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಕೇಸು ದಾಖಲಿಸಲಾಗಿದೆ.

ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೆಟ್ಟ ಪದ ಬಳಸಿದ್ದಕ್ಕಾಗಿ ನಟಿಯ ವಿರುದ್ಧ ಬಾಂಬೆ ಹೈಕೋರ್ಟ್ ಲಾಯ್ ನಿತಿನ್ ಮಾನೆ ದೂರು ದಾಖಲಿಸಿದ್ದಾರೆ. ಸೆ.9ರಂದು ನಟಿಯ ಫೇಸ್‌ಬುಕ್ ಪೋಸ್ಟ್ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ವಿಖ್ರೋಲಿ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ನಟಿ ಮೂವಿ ಮಾಫಿಯಾ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಸಂಬಂಧಿಸಿ ಪೋಸ್ಟ್ ಮಾಡಿದ್ದರು.

ನಟಿ ಕಂಗನಾಳ ಮುಂಬೈ ಆಫೀಸ್ ಮೇಲೆ ಬುಲ್ಡೋಝರ್ ಹತ್ತಿಸಿದ ಮಹಾರಾಷ್ಟ್ರ ಸರ್ಕಾರ

ಐಪಿಸಿ ಸೆಕ್ಷನ್ 499 ಮಾನನಷ್ಟ ಸಂಬಂಧ ದೂದು ದಾಖಲಿಸಲಾಗಿದೆ. ಬುಧವಾರ ಬಿಎಂಸಿ ನಟಿ ಕಂಗನಾಳ ಬಂಗಲೆಯಲೆಯ ಕೆಲವು ಭಾಗಗಳನ್ನು ಗುರುತಿಸಿ ಅಕ್ರಮ ಕಟ್ಟಡ ಎಂದು ತೆರವುಗೊಳಿಸಿತ್ತು.

ಮುಂಬೈನ ಪಾಲಿ ಹಿಲ್‌ನ ಕಂಗನಾ ಬಂಗಲೆ ಮುಂಭಾಗ ಬಹುತೇಕ ಪುಡಿ ಪುಡಿಯಾಗಿದೆ. ನಟಿ ತನ್ನ ಮನೆಯ ಫೋಟೋಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು. ಬಾಂಬೆ ಹೈಕೋರ್ಟ್ ಮೊರೆ ಹೋದ ನಟಿ ತೆರವು ಕಾರ್ಯಾಚರಣೆಗೆ ಸ್ಟೇ ತರಿಸುವಲ್ಲಿ ಸಫಲರಾಗಿದ್ದಾರೆ.