Asianet Suvarna News Asianet Suvarna News

ಸಣ್ಣ ವಯಸ್ಸಲ್ಲೇ ಧ್ವನಿ ನಿಲ್ಲಿಸಿದ ಪೋಕೆಮಾನ್ ತಾರೆ, ಕ್ಯಾನ್ಸರ್‌ ವಿರುದ್ಧ ಹೋರಾಡಿ ಸೋತ ನಟಿ ರಾಚೆಲ್!

ಪೋಕೆಮಾನ್ ಸರಣಿಯಲ್ಲಿನ ಮಿಸ್ಟಿ ಮತ್ತು ಜೆಸ್ಸಿ ಪಾತ್ರಗಳಿಗೆ ತನ್ನ ಧ್ವನಿಯ ಮೂಲಕ ಜೀವ ತುಂಬುತ್ತಿದ್ದ ಪ್ರಸಿದ್ಧ ನಟಿ  ರಾಚೆಲ್ ಅಸುನೀಗಿದ್ದಾರೆ

Pokemon series voice star Rachael Lillis died with breast cancer gow
Author
First Published Aug 13, 2024, 3:36 PM IST | Last Updated Aug 13, 2024, 4:35 PM IST

ಪೋಕೆಮಾನ್ ಸರಣಿಯಲ್ಲಿನ ಮಿಸ್ಟಿ ಮತ್ತು ಜೆಸ್ಸಿ ಪಾತ್ರದ ಇಂಗ್ಲಿಷ್ ಆವೃತ್ತಿಗಳಿಗೆ ತನ್ನ ಧ್ವನಿಯ ಮೂಲಕ ಜೀವ ತುಂಬುತ್ತಿದ್ದ ಪ್ರಸಿದ್ಧ ನಟಿ  ರಾಚೆಲ್ ಲಿಲ್ಲಿಸ್ ತನ್ನ 46ನೇ ವಯಸ್ಸಿನಲ್ಲಿ ಅಸುನೀಗಿದ್ದಾರೆ.

ನಟಿ ದೀರ್ಘಕಾಲದಿಂದ ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು ಮತ್ತು ಧೈರ್ಯವಾಗಿ ಎದುರಿಸಿದ್ದರು. ಆದರೆ ಈ ಯುದ್ಧದಲ್ಲಿ ಸೋತಿರುವ ನಟಿ ರಾಚೆಲ್ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಪೋಕೆಮಾನ್ ಸರಣಿಯಲ್ಲಿ ಅಚ್ಚುಮೆಚ್ಚಿನ ಧ್ವನಿಯಾಗಿದ್ದರು. ನಟಿಯ ಮರಣವು ಅನಿಮೆಷನ್ ಜಗತ್ತಿಗೆ ಬಹಳ ಹೊಡೆತ ಬೀಳಲಿದೆ.

ಹೈದರಾಬಾದ್‌ ನಲ್ಲಿ ನಡೆದ ಕನ್ನಡ ಬಿಗ್‌ಬಾಸ್‌ 11 ಶೂಟಿಂಗ್, ಪ್ರೋಮೋ ರಿಲೀಸ್‌ಗೆ ಮುಹೂರ್ತ ಫಿಕ್ಸ್!

1990ರ ದಶಕದ ಉತ್ತರಾರ್ಧದಲ್ಲಿ ಪೋಕೆಮಾನ್ ಟಿವಿ ಸರಣಿ, ಚಲನಚಿತ್ರ ಮತ್ತು ವಿಡಿಯೋ ಗೇಮ್‌ಗಳಲ್ಲಿ  ಮಿಸ್ಟಿ ಮತ್ತು ಜೆಸ್ಸಿಯಾಗಿ  ಲಿಲ್ಲಿಸ್  ತಮ್ಮ ಧ್ವನಿ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಮಾತ್ರವಲ್ಲ ಈ ಎರಡು ಪಾತ್ರಗಳಿಗೆ ಆಕೆ ಜೀವ ತುಂಬುತ್ತಿದ್ದರಿಂದ ಅಪಾರ ಹೆಸರವಾಸಿಯಾಗಿದ್ದರು.

ಪ್ರೀತಿಯ ಜಪಾನೀಸ್ ಅನಿಮೇಟೆಡ್ ಸರಣಿಯಲ್ಲಿ ಮಿಸ್ಟಿ ಮತ್ತು ಜೆಸ್ಸಿ ಮಾತ್ರವಲ್ಲದೆ ಇನ್ನೂ ಹೆಚ್ಚಿನ ಪೋಕೆಮಾನ್ ಪಾತ್ರಗಳಿಗೆ ಲಿಲ್ಲಿಸ್ ಧ್ವನಿ ಕೊಟ್ಟಿದ್ದಾರೆ. ಆಗಸ್ಟ್ 10 ರಂದು ಆಕೆ ನಿಧನರಾದರು. ಆಗಸ್ಟ್ 13 ರಂದು ಆಕೆಯ ಸಾವಿನ ಸುದ್ದಿಯನ್ನು ಜಗತ್ತಿಗೆ ತಿಳಿಸಲಾಯ್ತು.

ಲಿಲ್ಲಿಸ್ 1978 ರಲ್ಲಿ ನ್ಯೂಯಾರ್ಕ್‌ನ ನಯಾಗರಾ ಫಾಲ್ಸ್‌ನಲ್ಲಿ ಜನಿಸಿದರು ಮತ್ತು ಹಿನ್ನೆಲೆ ಧ್ವನಿ ಕಲಾವಿದೆಯಾಗುವ ಮೊದಲು ವಿಶ್ವವಿದ್ಯಾಲಯದಿಂದ ಒಪೆರಾದಲ್ಲಿ ತರಬೇತಿ ಪಡೆದರು.

ಮತ್ತೆ ಹೊಸ ಫೋಟೋ ಹಂಚಿಕೊಂಡ ಜ್ಯೋತಿ ರೈ, ಹಾಟ್‌ನೆಸ್‌ಗೆ ನೀವೇ ಬ್ರಾಂಡ್‌ ಅಂಬಾಸಿಡರ್‌ ಎಂದ ನೆಟ್ಟಿಗರು

ವರದಿಯಂತೆ 1997 ಮತ್ತು 2015 ರ ನಡುವೆ ಪೋಕೆಮಾನ್‌ನ 423 ಸಂಚಿಕೆಗಳಲ್ಲಿ ಆಕೆಯ ಧ್ವನಿ ಇದೆ.  2019 ರ ಡಿಟೆಕ್ಟಿವ್ ಪಿಕಾಚು ಮತ್ತು ಸೂಪರ್ ಸ್ಮ್ಯಾಶ್ ಬ್ರದರ್ಸ್ ವಿಡಿಯೋ ಗೇಮ್ ಸರಣಿಯಲ್ಲಿ ಪೋಕೆಮಾನ್ ಪಾತ್ರದ ಜಿಗ್ಲಿಪಫ್‌ಗೆ ಧ್ವನಿ ನೀಡಿದ್ದಾರೆ. 

ಪೊಕ್ಮೊನ್‌ನಲ್ಲಿ ಮಾತ್ರವಲ್ಲದೆ ಲಿಲ್ಲಿಸ್ ಇತರ ಅನಿಮೆ ಮತ್ತು ಅನಿಮೇಟೆಡ್ ಸರಣಿಗಳಿಗೆ ಕೊಡುಗೆ ನೀಡಿದರು.  ಯುವರ್ ಲೈ ಇನ್ ಏಪ್ರಿಲ್, ಹಂಟರ್ ಎಕ್ಸ್ ಹಂಟರ್, ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್, ಮತ್ತು ಮೊಬೈಲ್ ಸೂಟ್ ಗುಂಡಮ್ ಯುನಿಕಾರ್ನ್, ಇತರ ಪಾತ್ರಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ಅನೇಕ ಪ್ರಶಸ್ತಿಗಳು ಕೂಡ ಆಕೆಯನ್ನು ಒಲಿದು ಬಂದಿದೆ.

Latest Videos
Follow Us:
Download App:
  • android
  • ios