ಭೋಜಪುರಿ ನಟ ಪವನ್ ಸಿಂಗ್ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದ್ರಲ್ಲಿ ನಟ, ಒಪ್ಪಿಗೆ ಇಲ್ದೆ ನಟಿಯ ಸೊಂಟ ಮುಟ್ಟಿದ್ದಾರೆ. ಪವನ್ ಸಿಂಗ್ ಮಾಡಿದ ತಪ್ಪಿಗೆ ನಟಿ ಅಂಜಲಿ ಕಣ್ಣೀರಿಟ್ಟಿದ್ದಾರೆ. 

ನಟರು ಎಷ್ಟೇ ಫೇಮಸ್ ಆಗಿರ್ಲಿ, ಎಲ್ಲಿ ಹೇಗಿರ್ಬೇಕು ಎನ್ನುವ ಮ್ಯಾನರ್ಸ್ ಗೊತ್ತಿರ್ಬೇಕು. ಪಕ್ಕದಲ್ಲಿರುವ ಮಹಿಳೆಯರಿಗೆ ಗೌರವ ನೀಡೋದನ್ನು ಕಲಿತಿರ್ಬೇಕು. ಸಾರ್ವಜನಿಕ ಪ್ರದೇಶದಲ್ಲಿ ಒಪ್ಪಿಗೆ ಇಲ್ದೆ ನಟಿಯ ಸೊಂಟು ಮುಟ್ಟೋದು ಉತ್ತಮ ಕಲಾವಿದನ ವ್ಯಕ್ತಿತ್ವವೇ ಇಲ್ಲ. ಹೀಗಂತ ಭೋಜ್ಪುರಿ ಪವರ್ ಸ್ಟಾರ್ ಪವನ್ ಸಿಂಗ್ (Bhojpuri Power Star Pawan Singh) ವಿಡಿಯೋ ನೋಡಿದ ಪ್ರತಿಯೊಬ್ಬರೂ ಮಾತನಾಡ್ತಿದ್ದಾರೆ. ಪವನ್ ಸಿಂಗ್ ಹಾಗೂ ವಿವಾದಕ್ಕೆ ಆಳವಾದ ನಂಟಿದೆ. ಒಂದಲ್ಲ ಒಂದು ವಿವಾದಲ್ಲಿ ಪವನ್ ಸಿಂಗ್ ಹೆಸ್ರು ಇದ್ದೇ ಇರುತ್ತೆ. ಈಗ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಟಿ ಸೊಂಟ ಮುಟ್ಟಿ ಮತ್ತೆ ವಿವಾದಕ್ಕೆ ಒಳಗಾಗಿದ್ದಾರೆ ಪವನ್ ಸಿಂಗ್.

ಏನು ಅಂಜಲಿ – ಪವನ್ ಸಿಂಗ್ ವಿವಾದ? : ಅಂಜಲಿ ರಾಘವ್ (Anjali raghav), ಹರಿಯಾಣ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಪವನ್ ಸಿಂಗ್ ಅವರಿಗೆ ಭೋಜ್ಪುರಿ ಸಂಗೀತ ವೀಡಿಯೊಗಳಲ್ಲಿ ಕೆಲಸ ಮಾಡಲು ಆಫರ್ ನೀಡಿದ್ದರು. ಪವನ್ ಸಿಂಗ್ ಮತ್ತು ಅಂಜಲಿ ಮ್ಯೂಜಿಕ್ ಅಲ್ಬಂ ಹೆಸರು ಸೈಯಾನ್ ಸೇವಾ ಕರೆ. ಹಾಡಿನ ಪ್ರಮೋಷನ್ ಗಾಗಿ ಲಕ್ನೋದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅಂಜಲಿ ರಾಘವ್ ಮೈಕ್ ಹಿಡಿದು, ಫ್ಯಾನ್ಸ್ ಜೊತೆ ಮಾತನಾಡ್ತಿದ್ರೆ ಪಕ್ಕದಲ್ಲಿ ನಿಂತಿದ್ದ ಪವನ್ ಸಿಂಗ್, ಅಂಜಲಿ ಸೊಂಟ ಟಚ್ ಮಾಡ್ತಿದ್ದಾರೆ. ಸೊಂಟದ ಮೇಲೆ ಏನೋ ಇದೆ, ಅದನ್ನು ಕ್ಲೀನ್ ಮಾಡ್ತೇನೆ ಎನ್ನುತ್ತ ಸೊಂಟ ಮುಟ್ಟುವ ಪವನ್ ಸಿಂಗ್, ಕೈ ತೆಗಿ, ಕೈ ತೆಗಿ ಅಂತ ಅಂಜಲಿಗೆ ಹೇಳ್ತಿದ್ದಾರೆ. ಇದ್ರ ಪೂರ್ಣ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪವನ್ ಸಿಂಗ್ ಮಾಡ್ತಿರುವ ಕೆಲ್ಸ ವಿರೋಧಿಸಲಾಗ್ದೆ ಅಂಜಲಿ, ಮುಜುಗರದ ನಗೆಯಾಡಿದ್ದಾರೆ.

ಕತ್ತಿಯಿಂದ ಅಲ್ಲ.. ಕಣ್ಣಿನಿಂದಲೇ ಸಾಯಿಸ್ತೀನಿ: ಬಾಲಯ್ಯ ಮಾಸ್ ಡೈಲಾಗ್ ಹೇಳಿದ ರಜನಿಕಾಂತ್!

ಸೋಶಿಯಲ್ ಮೀಡಿಯಾ ಬಳಕೆದಾರರ ಪ್ರತಿಕ್ರಿಯೆ ಏನು? : ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಶ ವ್ಯಕ್ತವಾಗಿದೆ. ಅಂಜಲಿ, ಪವನ್ ಸಿಂಗ್ ಕೆನ್ನೆಗೆ ಬಾರಿಸ್ಬೇಕಿತ್ತು ಅಂತ ಕೆಲವರು ಹೇಳಿದ್ರೆ ಮತ್ತೆ ಕೆಲವರು ಅಂಜಲಿ ನಗುವನ್ನು ಟೀಕಿಸಿದ್ದಾರೆ. ಅಂಜಲಿಗೆ ಸಮಸ್ಯೆ ಆಗ್ಲಿಲ್ಲ. ಪವನ್ ಸಿಂಗ್ ಕೆಲ್ಸ ವಿರೋದಿಸುವ ಬದಲು ನಗ್ತಿದ್ದಾರೆ, ಇದು ನಾಚಿಕೆಗೇಡು ಅಂತ ಕಮೆಂಟ್ ಮಾಡಿದ್ದಾರೆ.

ಉದ್ಯಮ ತೊರೆಯುವ ನಿರ್ಧಾರಕ್ಕೆ ಬಂದ ಅಂಜಲಿ ರಾಘವ್ : ಅಂಜಲಿ ಕ್ಯಾರೆಕ್ಟ್ ಬಗ್ಗೆ ಅನೇಕರು ಪ್ರಶ್ನೆ ಮಾಡ್ತಿದ್ದಂತೆ ಅಂಜಲಿ ಮೌನ ಮುರಿದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅಂಜಲಿ, ಪವನ್ ಸಿಂಗ್ ಸಾಂಗ್ ಗೆ ಒಪ್ಪಿಗೆ ನೀಡುವ ಮೊದಲೇ ಕೆಲವೊಂದು ಕಂಡೀಷನ್ ಹಾಕಿದ್ರಂತೆ. ಅದೆಲ್ಲದಕ್ಕೂ ಪವನ್ ಸಿಂಗ್ ಒಪ್ಪಿಗೆ ನೀಡಿದ್ದರು. ಹಾಗಾಗಿ ಯಾವುದೇ ಮುಜುಗರವಿಲ್ಲದೆ ಶೂಟಿಂಗ್ ನಡೆದಿತ್ತು. ನಂತ್ರ ಪ್ರಮೋಷನ್ ಗೆ ಲಕ್ನೋಗೆ ಕರೆದಿದ್ದರು ಪವನ್ ಸಿಂಗ್. ಅದಕ್ಕೆ ಅಂಜಲಿ ಒಪ್ಪಿ ಬಂದಿದ್ರು. ಸ್ಟೇಜ್ ಮೇಲೆ ಪವನ್ ಸಿಂಗ್, ಸೊಂಟ ತೋರಿಸಿ ಇಲ್ಲೇನೋ ಇದೆ ಎಂದಾಗ, ಹೊಸ ಡ್ರೆಸ್ ಟ್ಯಾಗ್ ಇರ್ಬಹುದು ಅಂದ್ಕೊಂಡ ಅಂಜಲಿ, ಅದನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ರು. ಅವ್ರಿಗೆ ಅಲ್ಲಿ ಏನಾಗ್ತಿದೆ ಅನ್ನೋದು ಸರಿಯಾಗಿ ತಿಳಿದಿರಲಿಲ್ಲ. ಕಾರ್ಯಕ್ರಮ ಮುಗಿದು ಹೊರಗೆ ಬಂದ್ಮೇಲೆ ಟೀಂ ಜೊತೆ ಮಾತನಾಡಿದ್ದಾರೆ. ಸೊಂಟದಲ್ಲಿ ಏನಿತ್ತು ಅಂತ ಕೇಳಿದ್ದಾರೆ. ಟೀಂ ಏನೂ ಇರಲಿಲ್ಲ ಎನ್ನುವ ಉತ್ತರ ನೀಡಿದೆ. ಆಗ್ಲೇ ನನಗೆ ಕೋಪ ಬಂದಿತ್ತು. ಅಳು ಬಂದಿತ್ತು. ಆದ್ರೆ ಈ ಬಗ್ಗೆ ಮಾತನಾಡ್ಬೇಡಿ ಅಂತ ಪವನ್ ಸಿಂಗ್ ಟೀಂ ಹೇಳಿತ್ತು. ಅವ್ರೇ ಏನಾದ್ರೂ ಮಾಡ್ತಾರೆ ಅಂತ ನಾನು ಅಂದ್ಕೊಂಡಿದ್ದೆ. ಆದ್ರೆ ಅವರು ಈವರೆಗೂ ಪ್ರತಿಕ್ರಿಯೆ ನೀಡಲಿಲ್ಲ.

ಹ್ಯಾಪಿ ಬರ್ತಡೇ ಡ್ಯಾಡ್... ಕಿಂಗ್ ನಾಗಾರ್ಜುನಗೆ ಎಮೋಷನಲ್ ವಿಶ್

ಅದು ಪವನ್ ಸಿಂಗ್ ಅಡ್ಡಾ. ಪ್ರತಿಯೊಬ್ಬರೂ ಅವರನ್ನು ದೇವರಂತೆ ನೋಡ್ತಾರೆ. ಅವರ ಕಾಲಿಗೆ ಬೀಳ್ತಾರೆ. ನಾನು ಅಲ್ಲಿ ಅವರನ್ನು ವಿರೋಧಿಸಬಾರದು ಅಂತ ಟೀಂ ಹೇಳಿತ್ತು. ಟ್ಯಾಗ್ ಇದೆ ಅಂದ್ಕೊಂಡಿದ್ದವಳಿಗೆ ವಿಡಿಯೋ ನೋಡಿದ ಮೇಲೆ ಸತ್ಯ ಗೊತ್ತಾಯ್ತು. ಆದ್ರೆ ಎಲ್ಲರೂ ನನ್ನ ಬಗ್ಗೆ ಮಾತನಾಡ್ತಿದ್ದಾರೆ. ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡ್ತಿದ್ದಾರೆ. ನಾನು ಭೋಜ್ಪುರಿ ಇಂಡಸ್ಟ್ರಿ ಬಿಡ್ತಿದ್ದೇನೆ ಎಂದ ಅಂಜಲಿ, ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.

View post on Instagram