Asianet Suvarna News Asianet Suvarna News

ಕೈ ತುಂಬ ಇದ್ದೋನೆ ಯೋಗಿ, ಕಡೆವರೆಗು ಬೇಡೋನೆ ಜೋಗಿ ಸದ್ಯ ಟ್ರೆಂಡಿಂಗ್ ಆಗ್ತಿರೋದು ಯಾಕೆ?

ಅಣ್ಣಾವ್ರು ಹಾಗು ಪಾರ್ವತಮ್ಮನವರು ಜೋಗಿ ಪಾತ್ರಧಾರಿ ಶಿವರಾಜ್‌ಕುಮಾರ್ ಅವರಿಗೆ ಭಿಕ್ಷೆ ನೀಡುತ್ತಿರುವ ಸಮಯದಲ್ಲಿ, ಹಿನ್ನೆಯಲ್ಲಿ 'ಮಾನವರ ಜೀವಿತವೆ, ಬೇಡುವುದೆ ಕಾಯಕವೆ...

Shiva Rajkumar acted prem movie Jogi video song becomes viral in social media srb
Author
First Published Aug 24, 2024, 6:16 PM IST | Last Updated Aug 24, 2024, 6:18 PM IST

ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shiva Rajkumar) ಅಭಿನಯದ 'ಜೋಗಿ' ಚಿತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪ್ರೇಮ್ ನಿರ್ದೇಶಿಸಿದ್ದ ಜೋಗಿ (Jogi Movie) ಚಿತ್ರವು ಅದ್ಯಾವ ಪರಿ ಹಿಟ್ ಆಗಿತ್ತು ಎಂದರೆ, ಆ ಚಿತ್ರದ ಬಳಿಕ ನಿರ್ದೇಶಕ ಪ್ರೇಮ್ ಅವರನ್ನು ಕನ್ನಡ ಚಿತ್ರರಂಗ ಹಗು ಸಿನಿಪ್ರೇಕ್ಷಕರು 'ಜೋಗಿ ಪ್ರೇಮ್' ಎಂದೇ ಕರೆಯುತ್ತಾರೆ. 'ಬೇಡುವನು ವರವನ್ನು..' ಎಂಬಾ ಚಿತ್ರದ ಸೂಪರ್ ಹಿಟ್ ಗೀತೆಯನ್ನು ಸ್ವತಃ ಪ್ರೇಮ್ ಅವರೇ ಹಾಡಿದ್ದು, ಅದು ಅಂದಿನ ನಾಡಗೀತೆ ಎಂಬಷ್ಟು ಪ್ರಸಿದ್ಧಿ ಪಡೆದಿತ್ತು ಎನ್ನಬಹುದು. 

ಸೋಷಿಯಲ್ ಮೀಡಿಯಾದಲ್ಲಿ ಇದೀಗ, ಶಿವರಾಜ್‌ಕುಮಾರ್ ನಟನೆಯ ಜೋಗಿ ಚಿತ್ರದ ಆ ಹಾಡು ಹಾಗು ಆ ದೃಶ್ಯ ವೈರಲ್ ಆಗುತ್ತಿದೆ. ಡಾ ಶಿವರಾಜ್‌ಕುಮಾರ್ ಅಕೌಂಟ್‌ನಿಂದ ಈ ವಿಡಿಯೋ ಅಪ್ಲೋಡ್ ಆಗಿದ್ದು, ಅದನ್ನು ಮೆಚ್ಚಿ ಹಲವರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟ ಶಿವಣ್ಣ ಅವರು ಜೋಗಿ ಚಿತ್ರದಲ್ಲಿನ ಜೋಗಿಯ ಗೆಟ್‌ಅಪ್‌ನಲ್ಲಿ ತಮ್ಮದೇ ಮನೆಗೆ ಬರುತ್ತಾರೆ. ಅಲ್ಲಿ, ಸ್ವತಃ ಅವರ ಅಪ್ಪ-ಅಮ್ಮನೇ ಆಗಿರುವ ಡಾ ರಾಜ್‌ಕುಮಾರ್ ಹಾಗು ಪಾರ್ವತಮ್ಮ ಅವರೇ ಜೋಗಿ ಶಿವಣ್ಣರಿಗೆ ಭಿಕ್ಷೆ ನೀಡುತ್ತಾರೆ. 

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ; ಯಾವುದು ಈ ಸಿನಿಮಾ?

ಅಣ್ಣಾವ್ರು ಹಾಗು ಪಾರ್ವತಮ್ಮನವರು ಜೋಗಿ ಪಾತ್ರಧಾರಿ ಶಿವರಾಜ್‌ಕುಮಾರ್ ಅವರಿಗೆ ಭಿಕ್ಷೆ ನೀಡುತ್ತಿರುವ ಸಮಯದಲ್ಲಿ, ಹಿನ್ನೆಯಲ್ಲಿ 'ಮಾನವರ ಜೀವಿತವೆ, ಬೇಡುವುದೆ ಕಾಯಕವೆ, ಕೈ ತುಂಬ ಇದ್ದೋನೆ ಯೋಗಿ, ಕಡೆವರೆಗು ಬೇಡೋನೆ ಜೋಗಿ..' ಎಂದು ಹಾಡು ಕೇಳಿಸುತ್ತಿದೆ. ಆ ದೃಶ್ಯವನ್ನು ಇನ್ನಷ್ಟು ಪರಿಣಾಮಕಾರಿ ಎನ್ನಿಸುವಲ್ಲಿ ಪಾತ್ರವಹಿಸಿದೆ. ಹೀಗೆ, ಸದ್ಯ ಸೋಷಿಯಲ್ ಮೀಡಿಯಾದಲ್ಲಿ 'ಜನಮೆಚ್ಚಿದ ಸಾಲುಗಳು' ಎಂಬ ಶೀರ್ಷಿಕೆ ಅಡಿಯಲ್ಲಿ 'ಜೋಗಿ' ಚಿತ್ರದ ಹಾಡು ಸದ್ದು ಮಾಡುತ್ತಿದೆ. 

ನಟ ಶಿವಣ್ಣ ಅವರು ಸದ್ಯದಲ್ಲೇ ಭೈರತಿ ರಣಗಲ್ ಎಂಬ ಚಿತ್ರದ ಮೂಲಕ ಮತ್ತೆ ಕನ್ನಡ ಸಿನಿಪ್ರೇಕ್ಷಕರಿಗೆ ದರ್ಶನ್ ನೀಡುತ್ತಿದ್ದಾರೆ. ಇತ್ತೀಚೆಗೆ ಕನ್ನಡಕ್ಕೆ ಮಾತ್ರ ಸೀಮಿತರಾಗದೇ ತಮಿಳು ಸೇರಿದಂತೆ ಬೇರೆ ಭಾಷೆಗಳಲ್ಲಿ ಕೂಡ ಶಿವರಾಜ್‌ಕುಮಾರ್ ಅವರು ನಟಿಸುತ್ತಿದ್ದಾರೆ. ಭೈರತಿ ರಣಗಲ್ ಚಿತ್ರವು ಬಹಳಷ್ಟು ಕುತೂಹಲ ಕೆರಳಿಸುತ್ತಿದ್ದು, ಬಿಡುಗಡೆ ಬಳಿಕ ಸೂಪರ್ ಹಿಟ್ ದಾಖಲಿಸಬಹುದು ಎಂಬ ಲೆಕ್ಕಾಚಾರ ಶಿವಣ್ಣರ ಅಭಿಮಾನಿಗಳಲ್ಲಿ ಮನೆ ಮಾಡಿದೆ. 

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಶೂಟಿಂಗ್ ಸೆಟ್‌ಗೆ ರಾಕಿಂಗ್ ಸ್ಟಾರ್ ಯಶ್ ಸರ್‌ಪ್ರೈಸ್ ಭೇಟಿ..!

ಒಟ್ಟಿನಲ್ಲಿ, ದೊಡ್ಮನೆ ಅಭಿಮಾನಿ ಬಳಗವು ನಟ ಶಿವಣ್ಣ ಅಭಿನಯದ 'ಜೋಗಿ' ಚಿತ್ರದ ಹಾಡಿನ ಸಾಲುಗಳ ವಿಡಿಯೋವನ್ನು ಮತ್ತೆ ನೋಡಿ ಥ್ರಿಲ್ ಆಗಿದ್ದಾರೆ. 2005ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರವು ನಟ ಪ್ರೇಮ್ ಹಾಗು ಶಿವರಾಜ್‌ಕುಮಾರ್ ಇಬ್ಬರಿಗೂ ಮರುಜನ್ಮ ನೀಡಿರುವ ಚಿತ್ರ ಎನ್ನಬಹುದು. ತಾಯಿ ಸೆಂಟ್‌ಮೆಂಟ್ ಹಾಗು ಆಕ್ಷನ್ ಡ್ರಾಮಾ ಅಗಿದ್ದ ಜೀಗಿ ಚಿತ್ರವನ್ನು ಅಂದು ನೋಡಿದ್ದ ಪ್ರೇಕ್ಷಕರು ಇಂದೂ ಕೂಡ ನೆನಪಿಸಿಕೊಂಡು ಕಣ್ತುಂಬಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಜೀಗಿ ಚಿತ್ರವು ಜನಮಾಸನದಲ್ಲಿ ನೆಲೆಯೂರಿದೆ. 

Latest Videos
Follow Us:
Download App:
  • android
  • ios