Asianet Suvarna News Asianet Suvarna News

ಮತ್ತೊಂದು ಮದುವಗೆ ಮಕ್ಕಳೇ ಒತ್ತಾಯಿಸುತ್ತಾರೆ; ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ಹೇಳಿಕೆ ವೈರಲ್

ನಿಮಾ ಪ್ರಚಾರದಲ್ಲಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ರೇಣು ದೇಸಾಯಿ. ಮಕ್ಕಳು ನಿಜಕ್ಕೂ ಒತ್ತಾಯಿಸುತ್ತಾರಾ?

Pawan Kalyan ex wife Renu Desai opens about calling 2nd engagement off vcs
Author
First Published Oct 18, 2023, 11:09 AM IST

ಸಿಂಪಲ್ ಸ್ಟಾರ್ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಮತ್ತೊಂದು ಮದುವೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ ಎಂದು ಇತ್ತೀಚಿಗೆ ನಡೆದ ಸಂದರ್ಶನಗಳಲ್ಲಿ ಹೇಳುತ್ತಿದ್ದರು. ರವಿ ತೇಜ ನಟನೆಯ 'ಟೈಗರ್ ನಾಗೇಶ್ವರ್ ರಾವ್' ಸಿನಿಮಾದಲ್ಲಿ ನಟಿಸಿರುವ ರೇಣು ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 2009ರಲ್ಲಿ ಪವನ್ ಕಲ್ಯಾಣ್‌ರನ್ನು ಮದುವೆ ಮಾಡಿಕೊಂಡು 2012ರಲ್ಲಿ ಡಿವೋರ್ಸ್‌ ಪಡೆದು ಈಗ ಇಬ್ಬರು ಮಕ್ಕಳ ಜೊತೆ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ಉಂಗುರ ಬದಲಾಯಿಸಿಕೊಂಡಿರುವುದರ ಬಗ್ಗೆ ರಿವೀಲ್ ಮಾಡಿದ್ದರು. 

'ನನ್ನ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲರಿಗೂ ವಿವರ ಕೊಡುವ ಅಗತ್ಯವಿಲ್ಲ. ಹಿರಿಯರು ಒಪ್ಪಿಗೆ ಪಡೆದು ಸೂಕ್ತ ವ್ಯಕ್ತಿಯನ್ನು ಮದುವೆಯಾಗಬೇಕು ಎಂದುಕೊಂಡೆ. ಕುಟುಂಬದ ಸ್ನೇಹಿತರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆಯಿತ್ತು.  ನಿಶ್ಚಿತಾರ್ಥದ ಬಳಿಕ ಮಕ್ಕಳಿದ್ದಾರೆ ಅವರಿಗೆ ಬೆಂಬಲವಾಗಿ ಇರಬೇಕು ಎಂದು ನನ್ನ ಫ್ಯಾಮಿಲಿ ಫ್ರೆಂಡ್ಸ್ ಹೇಳಿದ್ದಾರೆ. ನನ್ನ ನಿಶ್ಚಿತಾರ್ಥದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು  ಅದು ದೊಡ್ಡ ಸುದ್ದಿಯಾಗಿದೆ. ಆದರೆ ನನಗೆ ಅರಿವಾಗಿದೆ ನನ್ನ ಮಗನಿಗೆ ಕೇವಲ 7 ವರ್ಷ ಮದುವೆ ನಂತರ ಅವರಿಗೆ ಸಮಯ ಕೊಡಬೇಕು ಎಂದು. ಇನ್ನು ನನ್ನ ಮಗಳಿಗೆ ಬಹಳ ಚಿಕ್ಕ ವಯಸ್ಸು ತಂದೆ ಕೂಡ ಇಲ್ಲ' ಎಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಹೊಡೆದಾಡುವ ಮಟ್ಟಕ್ಕೆ ಕಾಟ ಕೊಟ್ಟಿದ್ದರು; ತುಕಾಲಿ ಸಂತು ಅಸಲಿ ಮುಖ ಬಿಚ್ಚಿಟ್ಟ ಯತಿರಾಜ್

'ನಾನು ಮಾಡಿದ್ದು ತಪ್ಪೋ ಸರಿನೋ ಗೊತ್ತಿಲ್ಲ. ಎಲ್ಲಾ ಗೊತ್ತಿದ್ದು ಆ ನಿರ್ಣಯ ಕೈಗೊಂಡೆ. ಮದುವೆ ಕ್ಯಾನ್ಸಲ್ ಮಾಡಿಕೊಂಡೆ. ಈಗ ಮಗಳ ವಯಸ್ಸು 13 ವರ್ಷ. ಬಿಟ್ಟು ಬಂದಾಗ 7 ವರ್ಷ. ಆ ಸಮಯದಲ್ಲಿ ನಾನು ಆ ನಿರ್ಧಾರ ತೆಗೆದುಕೊಂಡಿದ್ದರೆ ಸರಿ ಅನಿಸುತ್ತಿರಲಿಲ್ಲ. ನನಗಗೆ ಮದುವೆ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ಮಂದುವೆ ಆಗಬೇಕು ಅನಿಸುತ್ತದೆ. ನನಗೆ ಮದುವೆಯಲ್ಲಿ ತುಂಬಾ ನಂಬಿಕೆ ಇದೆ. ಮದುವೆ ಎಂಬ ಪರಿಕಲ್ಪನೆ ನನಗೆ ಬಹಳ ಇಷ್ಟ. ಸಂಬಂಧವಿಲ್ಲದ ಇಬ್ಬರು ಜೀವನ ಹಂಚಿಕೊಳ್ಳುವ ಆ ಬಾಂಧವ್ಯ ಬಹಳ ಗಟ್ಟಿಯಾದದ್ದರು' ಎಂದು ರೇಣು ಹೇಳಿದ್ದಾರೆ. 

ಅಸಹ್ಯ ಥೂ ನೀನು ಗಂಡ್ಸಾ?; ತುಕಾಲಿ ಸಂತೋಷ್ ವಿರುದ್ಧ ಗರಂ ಆದ ಇಶಾನಿ

'ನಾನು ಮತ್ತೊಂದು ಮದುವೆ ಮಾಡಿಕೊಳ್ಳಲು ಕಾಯುತ್ತಿರುವೆ. ಆದ್ಯಾ ಕಾಲೇಜ್‌ಗೆ ಹೋದ ಮೇಲೆ ನನ್ನ ಬಗ್ಗೆ ಯೋಚಿಸುತ್ತೇನೆ. ನನ್ನ ಮಕ್ಕಳು ನನಗೆ ಮದುವೆಯಾಗಬೇಕೆಂದು ಬಯಸುತ್ತಾರೆ. ಅವರ ಸಂತೋಷವಾಗಿದ್ದರೆ ಅದೇ ನನಗೆ ಖುಷಿ. ಮದುವೆ ಅನ್ನೋದು ನನ್ನ ಅಭಿಪ್ರಾಯ ದೇವರು ಕೊಡುಗೆ ನನ್ನ ಮಕ್ಕಳು. ಇನ್ನೆರಡು ವರ್ಷಗಳಲ್ಲಿ ಮಕ್ಕಳು ದೊಡ್ಡವರಾಗುತ್ತಾರೆ ಆಗ ಮದುವೆ ಬಗ್ಗೆ ಯೋಜಿಸುತ್ತೀನಿ' ಎಂದಿದ್ದಾರೆ ರೇಣು. 

Follow Us:
Download App:
  • android
  • ios