ಅಸಹ್ಯ ಥೂ ನೀನು ಗಂಡ್ಸಾ?; ತುಕಾಲಿ ಸಂತೋಷ್ ವಿರುದ್ಧ ಗರಂ ಆದ ಇಶಾನಿ
ಎರಡನೇ ವಾರ ಆರಂಭವಾಗುತ್ತಿದ್ದರಂತೆ ಬಿಬಿ ಮನೆಯಲ್ಲಿ ದೊಡ್ಡ ಜಗಳ ಶುರುವಾಗಿದೆ. ತುಕಾಲಿ ಸಂತೋಷ್ ಮತ್ತು ಇಶಾನಿ ಜಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10 ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ 7 ಮಂದೆ ನಾಮಿನೇಟ್ ಆಗಿದ್ದಾರೆ. ಭಾಗ್ಯಶ್ರೀ, ತುಕಾಲಿ ಸಂತೋಷ್, ಮೈಕಲ್, ಗೌರೀಶ್ ಅಕ್ಕಿ ಮತ್ತು ಸಂಗೀತಾ ಶೃಂಗೇತಿ ನಾಮಿನೇಟ್ ಆಗಿದ್ದರು. ಮೊದಲನೇ ವಾರದ ಕ್ಯಾಪ್ಟನ್ ಆಗಿರುವ ಸ್ನೇಹಿತ್ ನೇರವಾಗಿ ಕಾರ್ತಿಕ್ ಮತ್ತು ತನಿಷಾ ಕುಪ್ಪಂಡರನ್ನು ನಾಮಿನೇಟ್ ಮಾಡಿದ್ದಾರೆ. ಆದರೆ ಬಿಗ್ ಬಾಸ್ ಇಲ್ಲೊಂದು ಬಿಗ್ ಟ್ವಿಸ್ಟ್ ನೀಡಿದ್ದಾರೆ. ಅದುವೇ ಒಬ್ಬರನ್ನು ಉಳಿಸಿಕೊಳ್ಳಲು ಅವಕಾಶ.
ಹೌದು! ನೇರವಾಗಿ ನಾಮಿನೇಟ್ ಆಗಿರುವ ಸ್ಪರ್ಧಿಗಳು ಮತ್ತು ಸೇಫ್ ಆಗಿರುವ ಸ್ಪರ್ಧಿಗಳ ಸಹಾಯ ಪಡೆದುಕೊಂಡು ನಾಮಿನೇಟ್ ಆಗಿರುವ 7 ಮಂದಿ ಸೇಫ್ ಆಗಲು ಒಂದು ಟಾಸ್ಕ್ ನೀಡಿದ್ದಾರೆ. ಅವರ ಪರವಾಗಿ ಸೇಫ್ ಆಗಿರುವವರು ಸ್ಪರ್ಧಿಸಿ ಗೆದ್ದರೆ ಈ ವಾರದ ನಾಮಿನೇಷನ್‌ನಿಂದ ಸೇಫ್ ಆಗುತ್ತಾರೆ. ಗೌರೀಶ್ ಪರವಾಗಿ ನಮ್ರತಾ ಗೌಡ, ತುಕಾಲಿ ಪರವಾಗಿ ರಕ್ಷಕ್, ಮೈಕಲ್ ಪರವಾಗಿ ವಿನಯ್ ಗೌಡ, ಸಂಗೀತ ಪರವಾಗಿ ಕಾರ್ತಿಕ್ ಹಾಗೂ ಭವ್ಯಾ ಪರವಾಗಿ ಸಿರಿ ಸ್ಪರ್ಧಿಸಿದ್ದರು. ಆರಂಭದಲ್ಲಿ ನಮ್ರತಾ ಗೌಡ ಕೈ ಬಿಟ್ಟರು ನಂತರ ಸಿರಿ.
ಡಾ. ರಾಜ್‌ಕುಮಾರ್ ಕುಟುಂಬದವರು ಎಂದಿಗೂ ಕೆಟ್ಟ ಪದ ಬಳಸಿಲ್ಲ: ಸಿಎಂ ಸಿದ್ದರಾಮಯ್ಯ
ಟಫ್ ಫೈಟ್ ಕೊಟ್ಟಿದ್ದು ರಕ್ಷಕ್. ತುಕಾಲಿ ಸೇಫ್ ಆಗಬಾರದು ಎಂದು ಇಶಾನಿ ಸಾಕಷ್ಟು ಹರ ಸಾಹಸ ಮಾಡುತ್ತಾರೆ. ಆಟ ಆಡುತ್ತಿರುವವರಿಗೆ ನೀರು ಏರಚಿ ತೊಂದರೆ ಕೊಡಬಹುದು ಹೀಗಾಗಿ ರಕ್ಷಕ್ ಕೈ ಬಿಡಬೇಕು ಎಂದು ಏನ್ ಏನೋ ಪ್ರಯತ್ನ ಮಾಡುತ್ತಾರೆ. ರಕ್ಷಕ್‌ಗೆ ಮಾನಸಿಕವಾಗಿ ಕಿವಿ ಏನ್ ಏನೋ ಹೇಳಲು ಮುಂದಾಗುತ್ತಾರೆ ಇದರಿಂದ ದೊಡ್ಡ ಜಗಳ ಶುರುವಾಗುತ್ತದೆ. 'ನಿನ್ನ ಬಗ್ಗೆ ನನಗೆ ಗೊತ್ತಿದೆ. ತುಕಾಲಿ ಸೇಫ್ ಆಗುತ್ತಾ ನಿನ್ನಲ್ಲ' ಎಂದು ಇಶಾನಿ ಹೇಳಿದಾಗ 'ನಮ್ಮಪ್ಪನ ಬದಲು ಅವರು ಅಂದುಕೊಳ್ಳುತ್ತೀನಿ. ಹೀ ಈಸ್ ಎ ಕಾಮಿಡಿಯನ್' ಎಂದು ರಕ್ಷಕ್ ಹೇಳುತ್ತಾರೆ. ಅಲ್ಲಿಗೆ ಸುಮ್ಮನೆ ಬಿಡದ ಇಶಾನಿ 'ನಿಮ್ಮಪ್ಪ ಯಾವಾಗಲೂ ನಿಮ್ಮ ಜೊತೆಯೇ ಇರುತ್ತಾರೆ ಅದು ಡಿಫರೆಂಟ್ ತುಕಾಲಿ ನಿಮ್ಮ ಅಪ್ಪ ಅಲ್ಲ. ಇದು ನಿನ್ನ ನಾಮಿನೇಷನ್ ಅಲ್ಲ ಅವರು ನಿನಗೆ ಸಪೋರ್ಟ್ ಮಾಡ್ತಾರೆ ಅಂತ ನಿನಗೆ ಗೊತ್ತಿಲ್ಲ ಆದರೆ ನಾವು ನಿನಗೆ ಸಪೋರ್ಟ್ ಮಾಡ್ತೀನಿ' ಎಂದು ಇಶಾನಿ ಹೇಳುತ್ತಾರೆ.
'ಸೂಪರ್ ಕಣೋ ಇದು ಫೈಯರ್ ಅಂದೆ..ನಿನಗೆ ಎಷ್ಟು ತಾಕತ್ತು ಇದೆ ಅಲ್ಲಿವರೆಗೂ ನಿಂತುಕೊಳ್ಳೋ' ಎಂದು ತುಕಾಲಿ ಹೇಳುತ್ತಾರೆ. ಅದಕ್ಕೆ ಕೋಪ ಮಾಡಿಕೊಂಡ ಇಶಾನಿ ನಾನು ರಕ್ಷಕತ್ ಜೊತೆ ಮಾತನಾಡುತ್ತಿರುವುದು. ಏಯ್ ಸುಮ್ಮಿರೋ ಹೋಗ್ ಇಲ್ಲಿಂದ. ನಾನು ನಿನ್ನ ಜೊತೆ ಮಾತನಾಡುತ್ತಿಲ್ಲ ಬಿಟ್ಟು ಬಿಡು ಸುಮ್ಮನಿರು' ಎನ್ನುತ್ತಾರೆ. 'ನಿನಗೆ ಯಾವನ್ ಹೇಳಿದ್ದು? ಇಲ್ಲಿಂದ ಹೋಗು ಅನ್ನೋಕೆ ನೀನ್ಯಾರು? ಏಯ್ ಹೋಗೇಲೇ' ಎಂದು ತುಕಾಲಿ ಕೋಪ ಮಾಡಿಕೊಳ್ಳುತ್ತಾರೆ.
'ನೀನ್ ಹೋಗೋ ಅಸಹ್ಯ ಥೂ ನೀನು ಗಂಡ್ಸಾ? ನೀನು' ಎಂದು ಇಶಾನಿ ಕೋಪ ಮಾಡಿಕೊಳ್ಳುತ್ತಾರೆ.