Asianet Suvarna News Asianet Suvarna News

'ಪಠಾಣ್‌' ವಿವಾದ: ಅನಗತ್ಯ ಟೀಕೆ ಮಾಡ್ಬೇಡಿ.. ಬಿಜೆಪಿ ಮುಖಂಡರಿಗೆ ಮೋದಿ ಸಲಹೆ!

ಈ ವಾರದ ಆರಂಭದಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಷಣ ಮಾಡಿದ ಪಿಎಂ ನರೇಂದ್ರ ಮೋದಿ ಅವರು 2024 ರ ಲೋಕಸಭೆ ಚುನಾವಣೆಗೆ ಸುಮಾರು 400 ದಿನಗಳು ಉಳಿದಿವೆ ಮತ್ತು ಎಲ್ಲಾ ವಿಭಾಗಗಳಿಗೆ ಸಂಪೂರ್ಣ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಲು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Refrain from making unnecessary remarks says PM Narendra Modi on amid controversy over SRK Pathaan san
Author
First Published Jan 19, 2023, 2:29 PM IST

ನವದೆಹಲಿ (ಜ.19): ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ "ಪಠಾಣ್‌" ವಿವಾದದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರದ ಆರಂಭದಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ  ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡದಂತೆ ಕೇಳಿಕೊಂಡಿದ್ದಾರೆ. ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದೊಂದಿಗೆ ಮುಕ್ತಾಯಗೊಂಡಿತ್ತು.ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡಬೇಡಿ. ಹಾಗೇನಾದರೂ ಮಾಡಿದರೆ, ಪಕ್ಷದ ಅಭಿವೃದ್ಧಿ ಅಜೆಂಡಾಗಳು ಹಿಂದೆ ಸರಿಯುತ್ತವೆ. ಹಾಗಾಗಿ ಇಂಥ ಟೀಕೆಗಳಿಂದ ಹಿಂದೆ ಸರಿದರೆ ಒಳ್ಳೆಯದು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ನಾಯಕರು ಸಾಮಾನ್ಯವಾಗಿ ಜನರ ಭಾವನೆಗಳನ್ನು "ನೋಯಿಸುವುದಕ್ಕಾಗಿ" ಚಲನಚಿತ್ರಗಳ ಬಗ್ಗೆ ವಿಮರ್ಶಾತ್ಮಕ ನಿಲುವನ್ನು ತೆಗೆದುಕೊಳ್ಳುತ್ತಾರೆ, ಶಾರುಖ್ ಖಾನ್ ಅವರ "ಪಠಾಣ್‌" ಇತ್ತೀಚಿನ ಉದಾಹರಣೆಯಾಗಿದೆ.

2024 ರ ಲೋಕಸಭೆ ಚುನಾವಣೆಗೆ ಸುಮಾರು 400 ದಿನಗಳು ಉಳಿದಿವೆ ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳದ್ದಾರೆ ಮತ್ತು ಪಕ್ಷದ ಸದಸ್ಯರು ಪ್ರತಿಯೊಂದು ವಿಭಾಗಕ್ಕೂ ಸಂಪೂರ್ಣ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುವಂತೆ ಕೇಳಿಕೊಂಡರು. ಯಾವುದೇ "ಅತಿಯಾದ ಆತ್ಮವಿಶ್ವಾಸ" ದ ವಿರುದ್ಧ ಅವರು ಪಕ್ಷದ ಸದಸ್ಯರಿಗೆ ಎಚ್ಚರಿಕೆ ನೀಡಿದರು ಮತ್ತು 1998 ರಲ್ಲಿ ದಿಗ್ವಿಜಯ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಲ್ಲಿಟ್ಟಿ ಸಿಟ್ಟಿದ್ದ ಹೊರತಾಗಿಯೂ ಮಧ್ಯಪ್ರದೇಶದಲ್ಲಿ ಬಿಜೆಪಿಯ ಸೋಲಿನ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೋದಿ ಆಗ ರಾಜ್ಯದಲ್ಲಿ ಬಿಜೆಪಿಯ ಸಂಘಟನಾ ವ್ಯವಹಾರಗಳ ಪ್ರಮುಖ ಮೈಂಡ್ ಆಗಿದ್ದರು.

ಭಾರತದ ಅತ್ಯುತ್ತಮ ಯುಗ ಬರಲಿದೆ ಮತ್ತು ಪಕ್ಷವು ದೇಶದ ಅಭಿವೃದ್ಧಿಗೆ ತನ್ನನ್ನು ಸಮರ್ಪಿಸಿಕೊಳ್ಳಬೇಕು ಮತ್ತು 2047 ರ 25 ವರ್ಷಗಳ ಅವಧಿಯನ್ನು "ಅಮೃತ ಕಾಲ" ಅನ್ನು "ಕರ್ತವ್ಯ ಕಾಲ" (ಕರ್ತವ್ಯಗಳ ಯುಗ) ಆಗಿ ಪರಿವರ್ತಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಎರಡು ಪ್ರದೇಶಗಳ ನಡುವಿನ ಪ್ರಾಚೀನ ಆಧ್ಯಾತ್ಮಿಕ ಸಂಬಂಧಗಳನ್ನು ಆಚರಿಸಲು ಇತ್ತೀಚೆಗೆ ವಾರಣಾಸಿಯಲ್ಲಿ ನಡೆದ ಕಾಶಿ-ತಮಿಳು ಸಂಗಮವನ್ನು ಉಲ್ಲೇಖಿಸಿದ ಮೋದಿ ಮತ್ತು ವಿವಿಧ ಸಂಸ್ಕೃತಿಗಳೊಂದಿಗೆ ಸಂಪರ್ಕ ಸಾಧಿಸಲು ಪಕ್ಷದ ಸದಸ್ಯರಿಗೆ ಸೂಚಿಸಿದ್ದಾರೆ. ಪ್ರತಿಜ್ಞೆ ಮಾಡುವವರು ಮಾತ್ರ ಇತಿಹಾಸ ಸೃಷ್ಟಿಸಲು ಮುಂದಾಗುತ್ತಾರೆ. ಬಿಜೆಪಿಯವರು ಪ್ರತಿಜ್ಞೆ ತೆಗೆದುಕೊಳ್ಳಬೇಕು ಮತ್ತು ಇತಿಹಾಸವನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದರು.

ಬಾಲಿವುಡ್‌ಲ್ಲಿ ಎಲ್ಲರೂ ಡ್ರಗ್ಸ್ ತಗೊಳಲ್ಲ; ಮೋದಿಗೆ ತಿಳಿಸಿ ಎಂದು ಯೋಗಿ ಆದಿತ್ಯನಾಥ್‌ಗೆ ಸುನಿಲ್ ಶೆಟ್ಟಿ ಮನವಿ

18-25 ವರ್ಷ ವಯಸ್ಸಿನ ಜನರು ಭಾರತದ ರಾಜಕೀಯ ಇತಿಹಾಸವನ್ನು ನೋಡಿಲ್ಲ ಮತ್ತು ಹಿಂದಿನ ಸರ್ಕಾರಗಳಲ್ಲಿ ನಡೆದ “ಭ್ರಷ್ಟಾಚಾರ ಮತ್ತು ಅಕ್ರಮಗಳ” ಬಗ್ಗೆ ಅವರಿಗೆ ಮಾಹಿತಿ ಇರುವುದಿಲ್ಲ ಎಂದು ಅವರು ಹೇಳಿದರು. "ಆದ್ದರಿಂದ, ಅವರಿಗೆ ಅರಿವು ಮೂಡಿಸುವ ಅಗತ್ಯವಿದೆ. ಬಿಜೆಪಿಯ ಉತ್ತಮ ಆಡಳಿತದ ಬಗ್ಗೆ ಅವರಿಗೆ ತಿಳಿಸಿ," ಎಂದು ಪ್ರಧಾನಿ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್‌ಗೆ ಮನವಿ ಮಾಡಿದ್ದ ಸುನಿಲ್‌ ಶೆಟ್ಟಿ: ಬಾಲಿವುಡ್‌ನಲ್ಲಿ 99ರಷ್ಟು ಮಂದಿ ಒಳ್ಳೆಯವವರು, ಎಲ್ಲರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ, ಕಠಿಣ ಶ್ರಮದ ಕಡೆ ಹರಿಸುತ್ತಾರೆ. ಹಾಗಾಗಿ ಸದ್ಯ ಟ್ರೆಂಡಿಂಗ್‌ನಲ್ಲಿರುವ #BoycottBollywood ಪದ ತೆಗೆದುಹಾಕುವಂತೆ ನಟ ಸುನಿಲ್ ಶೆಟ್ಟಿ ಮನವಿ ಮಾಡಿದ್ದರು. ಇದರಿಂದ ಬಾಲಿವುಡ್ ಇಮೇಜ್ ಅನ್ನು ಮತ್ತೆ ಪಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ಹಿಂದೂಗಳ ಬಳಿಕ ಪಠಾಣ್‌ಗೆ ಮುಸ್ಲಿಂ ಸಂಘಟನೆಗಳಿಂದಲೂ ವಿರೋಧ

ಇತ್ತೀಚಿಗಷ್ಟೆ ನಟ ಸುನಿಲ್ ಶೆಟ್ಟಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿ ಬಾಯ್ಕಾಟ್‌ ಬಾಲಿವುಡ್ ಪದ ತೆಗೆದು ಹಾಕುವಂತೆ ಕೇಳಿಕೊಂಡಿದ್ದರು.  'ಟ್ರೆಂಡಿಂಗ್‌ನಲ್ಲಿರುವ ಹ್ಯಾಷ್ ಟ್ಯಾಗ್ ಅನ್ನು ತೆಗೆದು ಹಾಕಬೇಕಿದೆ. ನಮ್ಮ ಕಥೆ, ನಮ್ಮ ಸಂಗೀತ ಜಗತ್ತಿಗೆ ಸಂಪರ್ಕ ಹೊಂದಿದೆ. ಹಾಗಾಗಿ ಬಾಲಿವುಡ್‌ಗೆ ಅಂಟಿರುವ ಕಳಂಕ ತೊಡೆದು ಹಾಕಬೇಕಿದೆ. ದಯವಿಟ್ಟು ಈ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಲುಪಿಸಿ' ಎಂದು ನಟ ಸುನಿಲ್ ಶೆಟ್ಟಿ ಯೋಗಿ ಆದಿತ್ಯನಾಥ್ ಅವರಿಗೆ ಹೇಳಿದ್ದರು. ಅದರ ಬೆನ್ನಲ್ಲಿಯೇ ಕಾರ್ಯಕಾರಿಣಿಯಲ್ಲಿ ಮೋದಿ ಮಾತನಾಡಿದ್ದು ಮಹತ್ವ ಪಡೆದುಕೊಂಡಿದೆ.

Follow Us:
Download App:
  • android
  • ios