ಬೆನ್ನು ತೋರಿಸಿ ಮದ್ವೆ ಫೋಟೋಗಳಿಗೆ 'ಲೈಕ್ಸ್' ಕಳಕೊಂಡ ನಟಿ ಪರಿಣಿತಿ ಚೋಪ್ರಾ?
ಖ್ಯಾತ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಫೋಟೋಗೆ ಪೋಸ್ ಕೊಡಲು ನಿರಾಕರಿಸಿದರು. ಇದಕ್ಕೆ ನೆಟ್ಟಿಗರು ಹೇಳಿದ್ದೇನು?
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡರು. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥದ ನಂತರ, ಅವರ ಅಭಿಮಾನಿಗಳು ಅವರ ಮದುವೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಪರಿಣಿತಿ ಚೋಪ್ರಾ (Parineeti Chopra ) ಮತ್ತು ರಾಘವ್ ಚಡ್ಡಾ ರಾಜಸ್ಥಾನದಲ್ಲಿ ಮದುವೆಯಾಗಲಿದ್ದಾರೆ ಎಂಬುದು ಬಹುತೇಕ ನಿಶ್ಚಿತವಾಗಿದೆ. ಪರಿಣಿತಿ ಚೋಪ್ರಾ ಅವರು ಪ್ರವಾಸೋದ್ಯಮ ಇಲಾಖೆಯ (Tourism Department) ಉಪ ನಿರ್ದೇಶಕಿ ಶಿಖಾ ಸಕ್ಸೇನಾ ಅವರನ್ನು ಭೇಟಿಯಾಗಿ ಸಮೀಪದ ವಿಶೇಷ ಹೋಟೆಲ್‌ಗಳು ಮತ್ತು ಪ್ರವಾಸಿ ಸ್ಥಳಗಳ ಬಗ್ಗೆ ವಿಚಾರಿಸಿದ್ದು ಸ್ಥಳ ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಈ ಜೋಡಿ ಬರುವ ಅಕ್ಟೋಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬಹುದು ಎನ್ನಲಾಗುತ್ತಿದೆ. ಸೆಪ್ಟೆಂಬರ್ನಲ್ಲಿಯೇ ಮದುವೆಯಾಗುವ ಬಗ್ಗೆ ನಟಿ ಯೋಚಿಸಿದ್ದಾರೆ ಎನ್ನಲಾಗಿದೆ. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥದಲ್ಲಿ, ಇಬ್ಬರ ಕುಟುಂಬದ ಸದಸ್ಯರನ್ನು ಹೊರತುಪಡಿಸಿ, ಆಪ್ತರು ಭಾಗಿಯಾಗಿದ್ದರು. ಇನ್ನು ಇಬ್ಬರ ಮದುವೆಗೆ ಯಾರು ಬರುತ್ತಾರೆ ಎಂಬುದು ಫ್ಯಾನ್ಸ್ ಕಾದು ನೋಡುತ್ತಿರುವ ಮಧ್ಯೆಯೇ ಈಗ ನಟಿ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಅದೇನೆಂದರೆ, ಪರಿಣಿತಿ ಚೋಪ್ರಾ ಮೊನ್ನೆ ಗೋಲ್ಡನ್ ಗ್ಲೋರಿ ಅವಾರ್ಡ್ಸ್ 2023 ರಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಹೊರಡುತ್ತಿದ್ದಂತೆಯೇ ಫ್ಯಾನ್ಸ್ ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ. ಚಿತ್ರ ತಾರೆಯರನ್ನು ಅಭಿಮಾನಿಗಳು ಸುತ್ತುವರಿಯುವುದು, ಸೆಲ್ಫಿಗಾಗಿ (Selfie) ಕಿರಿಕಿರಿ ಮಾಡುವುದು, ಅವರ ಹಿಂದೆ ಮುಗಿ ಬೀಳುವುದು ಎಲ್ಲವೂ ಮಾಮೂಲು. ಇಂಥ ಸಂದರ್ಭದಲ್ಲಿ ನಟ ನಟಿಯರು ಅಭಿಮಾನಿಗಳನ್ನು ಕಡೆಗಣಿಸುವುದು ಇಲ್ಲವೇ ಅವರ ಬಾಡಿಗಾರ್ಡ್ಗಳು ಮುಗಿಬೀಳುತ್ತಿರುವವರನ್ನು ತಳ್ಳುವುದು ನಡೆದೇ ಇದೆ. ಇಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಸೆಲೆಬ್ರಿಟಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುವುದು, ಅವರನ್ನು ಟ್ರೋಲ್ ಮಾಡುವುದೂ ಮಾಮೂಲು. ಇಲ್ಲೂ ಹಾಗೆಯೇ ಆಗಿದೆ.
ರಾಜಸ್ಥಾನಕ್ಕೆ ಹಾರಿದ ಪರಿಣಿತಿ ಚೋಪ್ರಾ- ಮದುವೆ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ
ಪರಿಣಿತಿ ಚೋಪ್ರಾ ಪಾಪರಾಜಿಗಳಿಗೆ ಪೋಸ್ ನೀಡಲು ನಿರಾಕರಿಸಿದರು, ಅಸಮಾಧಾನ ತೋರುತ್ತಿದ್ದಾರೆ. ಫೋಟೋ ಕ್ಲಿಕ್ಕಿಸುತ್ತಿದ್ದಂತೆಯೇ ಅವರ ಪಿಎ ಎಷ್ಟೇ ಬೇಡ ಎಂದರೂ ಜನರು ಫೋಟೋಗೆ ಮುಂದಾಗಿದ್ದಾರೆ. ಅದ್ಯಾವುದೋ ಮೂಡ್ನಲ್ಲಿದ್ದ ನಡಿ ಪರಿಣಿತಿ ಫೋಟೋ (Photo) ತೆಗೆಯುವುದು ಬೇಡವೇ ಬೇಡ ಎಂದು ಬೆನ್ನು ತಿರುಗಿಸಿದ್ದಾರೆ. ಇದರ ವಿಡಿಯೋ ಸಕತ್ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ಪರಿಣಿತಿ ಅವರು ಟೊಮೆಟೊ ರೆಡ್ ಕೋ-ಆರ್ಡ್ ಕುರ್ತಿ ಸೆಟ್ ಧರಿಸಿಕೊಂಡು ಮುದ್ದಾಗಿ ಕಾಣುತ್ತಿದ್ದರು. ಅವರನ್ನು ನೋಡಿದ ಪಾಪರಾಜಿಗಳು ಫೋಟೋಗೆ ಹೋದಾಗ ಈ ಅವಾಂತರವಾಗಿದ್ದು, ಇದು ಪಾಪರಾಜಿಗಳ ಸಿಡಿಮಿಡಿಗೆ ಕಾರಣವಾಗಿದೆ.
ಪರಿಣಿತಿ ಚೋಪ್ರಾ ಅವರ ವರ್ತನೆಗಾಗಿ ನೆಟಿಜನ್‌ಗಳು ಟ್ರೋಲ್ ಮಾಡುತ್ತಿದ್ದಾರೆ. ಸಾಕಷ್ಟು ನೆಟಿಜನ್‌ಗಳು ನಟಿಯ ವಿರುದ್ಧ ಟೀಕೆ ಮಾಡಿದ್ದಾರೆ. ಖ್ಯಾತ ರಾಜಕಾರಣಿಯನ್ನು ಮದುವೆಯಾಗುವ ಗುಂಗಿನಲ್ಲಿರುವ ಈ ನಟಿ ಈಗಲೇ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನೂ ಸಿಟ್ಟಗೆದ್ದಿರುವ ನೆಟ್ಟಿಗರು ಈಕೆಯ ಮದುವೆಯ ಫೋಟೋಗೆ ಯಾರೂ ಲೈಕ್ಸ್ (Likes) ಒತ್ತಬೇಡಿ ಎಂದಿದ್ದಾರೆ. ಇದಕ್ಕೆ ಹಲವರು ಹೌದು. ಇದೇ ಸರಿಯಾದ ಶಿಕ್ಷೆ ಎಂದಿದ್ದಾರೆ. ಇನ್ನು ಕೆಲವೇ ಕೆಲವರು ಮಾತ್ರ ನಟಿಯ ಪರವಾಗಿ ನಿಂತಿದ್ದು, ಅವರಿಗೂ ಖಾಸಗಿ ಜೀವನ ಇರುತ್ತದೆ. ಎಲ್ಲಾಸಮಯದಲ್ಲಿಯೂ ಅವರ ಮೂಡ್ ಸರಿಯಿರುವುದಿಲ್ಲ. ಹೀಗೆ ಎಲ್ಲಿಯಾದರೂ ಕಾಣಿಸಿಕೊಂಡ ನಂತರ ಜನರು ವಿಚಿತ್ರವಾಗಿ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
Alia Bhatt: ತುಂಬಾ ತೊಂದ್ರೆ ಕೊಡ್ತಿದ್ದಾರೆ ನಿಮ್ ಮಗ ಎಂದ ಆಲಿಯಾ: ಇದ್ರೆ ಹೀಗಿರ್ಬೇಕೆಂದ ನೆಟ್ಟಿಗರು