Alia Bhatt: ತುಂಬಾ ತೊಂದ್ರೆ ಕೊಡ್ತಿದ್ದಾರೆ ನಿಮ್ ಮಗ ಎಂದ ಆಲಿಯಾ: ಇದ್ರೆ ಹೀಗಿರ್ಬೇಕೆಂದ ನೆಟ್ಟಿಗರು

ಅಭಿಮಾನಿಯೊಬ್ಬರ ಸೆಲ್ಫಿಗಾಗಿ ಕೇಳಿದಾಗ ಎದುರಿಗೆ ಬಂದ ಆತನ ತಾಯಿಗೆ ನಟಿ ಆಲಿಯಾ ಭಟ್​ ಹೇಳಿದ್ದೇನು? 
 

Alia Bhatt complains to paparazzi mother your son disturbs a lot watch video

ಚಿತ್ರ ತಾರೆಯರನ್ನು ಅಭಿಮಾನಿಗಳು ಸುತ್ತುವರಿಯುವುದು, ಸೆಲ್ಫಿಗಾಗಿ (Selfie) ಕಿರಿಕಿರಿ ಮಾಡುವುದು, ಅವರ ಹಿಂದೆ ಮುಗಿ ಬೀಳುವುದು ಎಲ್ಲವೂ ಮಾಮೂಲು. ಇಂಥ ಸಂದರ್ಭದಲ್ಲಿ ನಟ ನಟಿಯರು ಅಭಿಮಾನಿಗಳನ್ನು ಕಡೆಗಣಿಸುವುದು ಇಲ್ಲವೇ ಅವರ ಬಾಡಿಗಾರ್ಡ್​ಗಳು ಮುಗಿಬೀಳುತ್ತಿರುವವರನ್ನು ತಳ್ಳುವುದು ನಡೆದೇ ಇದೆ. ಇಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಸೆಲೆಬ್ರಿಟಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುವುದು, ಅವರನ್ನು ಟ್ರೋಲ್​ ಮಾಡುವುದೂ ಮಾಮೂಲು.  ಆದರೆ ನಟಿ ಆಲಿಯಾ ಭಟ್ (Alia Bhatt) ವಿಷಯದಲ್ಲಿ ಹಾಗಾಗಿಲ್ಲ. ಇದೇ ರೀತಿಯ ಪರಿಸ್ಥಿತಿ ಆಲಿಯಾ ಅವರಿಗೂ ಬಂದಾಗ ಅದನ್ನು ಅವರು ನಿಭಾಯಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಅಷ್ಟಕ್ಕೂ ಆಗಿರುವುದು ಏನೆಂದರೆ, ಇತ್ತೀಚೆಗೆ ಮುಂಬೈಗೆ  ಗ್ಲೋಬಲ್ ಸ್ಪೋರ್ಟ್ಸ್ ಪಿಕಲ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ನಟಿ ಆಲಿಯಾ ಬಂದಿದ್ದರು. ಮಾಮೂಲಿನಂತೆ ಹಲವು ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕಿದ್ದಾರೆ. ಅದರಲ್ಲಿ ಒಬ್ಬಾತ ಸೆಲ್ಫಿಗಾಗಿ ಗೋಗರೆಯುತ್ತಿದ್ದ. ಅಷ್ಟರಲ್ಲಿ ಆ ಯುವಕನ ತಾಯಿ ಅಲ್ಲಿಗೆ ಬಂದಿದ್ದಾರೆ. ವೃದ್ಧೆಯನ್ನು ನೋಡಿದ ಆಲಿಯಾ ಭಟ್​ ಅವರಿಗೆ ಬಗ್ಗಿ ನಮಸ್ಕರಿಸಿ, ಮಾತನಾಡಿಸಿದ ವಿಡಿಯೋ ಸಕತ್​ ವೈರಲ್​ ಆಗಿದ್ದು, ನಟಿಯ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇಷ್ಟೇ ಅಲ್ಲ, ಆ  ಪಾಪರಾಜಿಯ ತಾಯಿಯ ಜೊತೆ ಮಾತನಾಡಿದ ಆಲಿಯಾ,  ನೋಡಿ ನಿಮ್ಮ ಮಗ ನನಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ತಮಾಷೆಯಾಗಿ ಆಲಿಯಾ ಹೇಳಿದ್ದು, ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದೆ. ನಂತರ ಆ ವೃದ್ಧಿ ಹಾಗೂ ಯುವಕನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಆಲಿಯಾ ಉಳಿದವರತ್ತ ಕೈ ಬೀಸಿ ಹೊರಟು ಹೋದರು. 

ರಣಬೀರ್​-ಆಲಿಯಾ ವೆಡ್ಡಿಂಗ್​ ಆ್ಯನಿವರ್ಸರಿ: ಮಾಜಿ ಪ್ರಿಯತಮನಿಗಾಗಿ ಕಣ್ಣೀರಿಟ್ಟ ನಟಿ ಕತ್ರೀನಾ

 ಈವೆಂಟ್‌ಗೆ ಆಲಿಯಾ ಕ್ಯಾಶುಯಲ್ ಲುಕ್‌ನಲ್ಲಿ (Casual Look) ಆಗಮಿಸಿದ್ದರು. ಅವರು ಬಿಳಿ ಟಿ ಶರ್ಟ್ನೊಂದಿಗೆ ಡೆನಿಮ್ ಪ್ಯಾಂಟ್ ಧರಿಸಿದ್ದರು. ವೀಡಿಯೊದಲ್ಲಿ ನೋಡಬಹುದಾದಂತೆ, ಫೋಟೋ ಕ್ಲಿಕ್ಕಿಸಲು ಬಂದ ಫ್ಯಾನ್​, ತನ್ನ ತಾಯಿಯನ್ನು ಕರೆದುಕೊಂಡು ಬಂದಿದ್ದ. ನಂತರ ಫೋಟೋಗಾಗಿ ಗೋಗರೆಯುತ್ತಿದ್ದ. ನಂತರ ಆಲಿಯಾ ಮಹಿಳೆಯತ್ತ ಬಗ್ಗಿ  ಕೈಮುಗಿದು ಮಗನ ಬಗ್ಗೆ ತಮಾಷೆಯ ಕಂಪ್ಲೇಂಟ್​ ಹೇಳಿದ್ದಾರೆ.   "ನಿಮ್ಮನ್ನು ಭೇಟಿಯಾಗಲು ತುಂಬಾ ಸಂತೋಷವಾಯಿತು" ಎಂದು ಮಹಿಳೆಗೆ ಮೊದಲು ಆಲಿಯಾ ಹೇಳಿದರು. ಛಾಯಾಗ್ರಾಹಕನತ್ತ ಕೈ ತೋರಿಸುತ್ತಾ, ತಮಾಷೆಯಾಗಿ  'ನಿಮ್ಮ ಮಗ ನನಗೆ ತುಂಬಾ ತೊಂದರೆ ಕೊಡುತ್ತಾರೆ, ಹೆದರಬೇಡಿ, ಅವರು ಜೀವನದಲ್ಲಿ ದೊಡ್ಡ ಕೆಲಸ ಮಾಡುತ್ತಾರೆ' ಎಂದಾಗ ಮಹಿಳೆಯ ಮೊಗದಲ್ಲಿ ಸಂತಸ ಕಾಣಿಸಿತು. ಇದ್ದರೆ ಹೀಗೆ ಇರಬೇಕು, ತಮ್ಮ ಅಭಿಮಾನಿಗಳನ್ನು ನಟ-ನಟಿಯರು ಹೀಗೆ ನಡೆಸಿಕೊಳ್ಳಬೇಕು ಎಂದು ಹಲವರು ಕಮೆಂಟ್​ನಲ್ಲಿ (Comment) ಹೇಳುತ್ತಿದ್ದಾರೆ. 


ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಪಾಪರಾಜಿಯೊಬ್ಬರು, "ಆಲಿಯಾ ಭಟ್ ಅತ್ಯಂತ ಸುಂದರ ಮತ್ತು ಮುದ್ದಾದ ನಟಿ" ಎಂದು ಬರೆದಿದ್ದಾರೆ, ವೀಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ, "ಆಲಿಯಾ ತುಂಬಾ ಚಿಕ್ಕವರು. ಕೆಲವೊಮ್ಮೆ ಈಕೆ ಒಂದು ಮಗುವಿನ ತಾಯಿ ಎಂದು ನಂಬುವುದು ಕಷ್ಟ ಎಂದಿದ್ದರೆ, ಇನ್ನು ಕೆಲವರು "ಡೌನ್ ಟು ಅರ್ಥ್ ನಟಿ" ಎಂದು ಶ್ಲಾಘಿಸಿದ್ದಾರೆ. 

Wedding Anniversary ದಿನ ಶಾಕಿಂಗ್​ ಹೇಳಿಕೆ ಕೊಟ್ಟ ರಣಬೀರ್​ ಕಪೂರ್​

  ಆಲಿಯಾ ಭಟ್ ಅವರ ಕೆಲಸದ ಕುರಿತು ಮಾತನಾಡುವುದಾದರೆ, ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rakhi Aur Rani ki prem Kahani)ಯಲ್ಲಿಯೂ ನಟಿ ಕಾಣಿಸಿಕೊಳ್ಳಲಿದ್ದಾರೆ. ಗಲ್ಲಿ ಬಾಯ್ ನಂತರ ಮತ್ತೊಮ್ಮೆ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ರಣಬೀರ್ ಮತ್ತು ಆಲಿಯಾ ಅಲ್ಲದೆ, ಇದು ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ನಟಿಸಿದ್ದಾರೆ. ಆಲಿಯಾ ಕೂಡ ಫರ್ಹಾನ್ ಅಖ್ತರ್ ಅವರ ನಿರ್ದೇಶನದ ಜೀ ಲೆ ಜರಾ ಚಿತ್ರದ ಭಾಗವಾಗಿದ್ದಾರೆ. ಇದರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

Latest Videos
Follow Us:
Download App:
  • android
  • ios