ಚಮ್ಕಿಲಾ ಚಿತ್ರಕ್ಕಾಗಿ 15 ಕೆ.ಜಿ ಹೆಚ್ಚಿಸಿಕೊಂಡಿದ್ದಾರೆ ನಟಿ ಪರಿಣಿತಿ ಚೋಪ್ರಾ! ಇದೀಗ ಚಿತ್ರೀಕರಣ ಮುಗಿದಿರುವ ಹಿನ್ನೆಲೆಯಲ್ಲಿ ಮತ್ತೆ ವರ್ಕ್​ಔಟ್​ ಶುರು ಮಾಡಿದ್ದಾರೆ. ವಿಡಿಯೋ ವೈರಲ್ 

ಒಂದು ಚಿತ್ರಕ್ಕೆ ದಿಢೀರ್​ ತೂಕವನ್ನು ಏರಿಸಿಕೊಳ್ಳೋದು, ಇನ್ನೊಂದು ಚಿತ್ರಕ್ಕಾಗಿ ಇರುವ ತೂಕ ಇಳಿಸಿಕೊಳ್ಳೋದು... ಇವೆಲ್ಲಾ ಚಿತ್ರ ತಾರೆಯರಿಗೆ ಮಾಮೂಲಾಗಿ ಬಿಟ್ಟಿದೆ. ಒಂದು ಚಿತ್ರಕ್ಕೆ ಸಿಕ್ಸ್​ ಪ್ಯಾಕ್​ ಮಾಡಿಕೊಳ್ಳೋದು, ಇನ್ನೊಂದು ಪಾತ್ರಕ್ಕೆ ಅದನ್ನು ತೆಗೆದುಹಾಕೋದು ಇವು ಕೂಡ ಸಾಮಾನ್ಯ ಎನಿಸಿಬಿಟ್ಟಿದೆ. ಸಾಮಾನ್ಯ ಜನರಿಗೆ ಅಸಾಧ್ಯ ಎನ್ನುವ ಈ ಮಾತನ್ನು ಚಿತ್ರ ತಾರೆಯರು ಸುಲಭದಲ್ಲಿ ಮಾಡಿ ತೋರಿಸುತ್ತಾರೆ. ಅಷ್ಟಕ್ಕೂ ಅವರಿಗೆ ಇದು ಸುಲಭವಾದ ಮಾತೇನಲ್ಲ. ಚಿತ್ರದಲ್ಲಿ ಯಶಸ್ಸು ಪಡೆಯಲು, ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಕೆಲವು ನಟ-ನಟಿಯರು ಈ ರೀತಿಯ ಸರ್ಕಸ್​ ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಪರಿಣಿತಿ ಚೋಪ್ರಾ ಸರದಿ.

ಇತ್ತೀಚಿಗಷ್ಟೇ ಅದ್ಧೂರಿ ಮದುವೆಯಾಗಿರುವ ನಟಿ ಪರಿಣಿತಿ ಚೋಪ್ರಾ, ಇನ್ನೂ ಮದುವೆಯ ಗುಂಗಿನಿಂದ ಹೊರ ಬರುವ ಮೊದಲೇ ವರ್ಕ್​ಔಟ್​ ಶುರುವಿಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣ, ಇವರು ಚಿತ್ರವೊಂದಕ್ಕಾಗಿ 15 ಕೆ.ಜಿ ಏರಿಸಿಕೊಂಡಿದ್ದರು. ಇದೀಗ ಅವರು ತಮ್ಮ ನಾರ್ಮಲ್​ ತೂಕಕ್ಕೆ ಬರಲು ಜಿಮ್​ನಲ್ಲಿ ಸರ್ಕಸ್​ ಮಾಡುತ್ತಿದ್ದಾರೆ. ಈ ಕುರಿತು ವಿಡಿಯೋ ಶೇರ್​ ಮಾಡಿಕೊಂಡಿರುವ ನಟಿ ಪರಿಣಿತಿ, ಈ ಬಗ್ಗೆ ತಮ್ಮ ಅನಿಸಿಕೆಯನ್ನೂ ಹಂಚಿಕೊಂಡಿದ್ದಾರೆ. ತೂಕ ಏರಿಕೆ, ಇಳಿಕೆಗಳ ವಿಡಿಯೋ ನೋಡಿ ಫ್ಯಾನ್ಸ್​ ಅಂತೂ ಉಸ್ಸಪ್ಪಾ ಎನ್ನುತ್ತಿದ್ದಾರೆ. 

ನೆಟ್ಟಿಗನ ಪ್ರಶ್ನೆಗೆ ಶಾರುಖ್​ ಫುಲ್​ ಗರಂ! ಲೂಸ್​ ಮೋಷನ್​ ಔಷಧ ಕಳಿಸಿಕೊಡ್ತೇನೆ ಎಂದ ನಟ: ಆಗಿದ್ದೇನು?

ಅಷ್ಟಕ್ಕೂ ನಟಿ ಪರಿಣಿತಿ ಚೋಪ್ರಾ ತಮ್ಮ ಮುಂಬರುವ ಚಿತ್ರ 'ಚಮ್ಕಿಲಾ' ಗಾಗಿ 15 ಕೆ.ಜಿ ತೂಕವನ್ನು ಏರಿಸಿಕೊಂಡಿದ್ದರು. ದಿವಂಗತ ಗಾಯಕ ಅಮರ್ ಸಿಂಗ್ ಚಮ್ಕಿಲಾ ಅವರ ಜೀವನಚರಿತ್ರೆ ಆಧರಿತ ಚಿತ್ರವಿದು. ಇವರ ಸಂಗೀತಕ್ಕೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು. ಆದರೆ ಚಮ್ಕಿಲಾ ಅವರು 27 ನೇ ವಯಸ್ಸಿನಲ್ಲಿ 1988 ರಲ್ಲಿ ಕೊಲೆಯಾದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಸಾಧನೆ ಮಾಡಿದ ಚಮ್ಕಿಲಾ ಅವರ ಈ ಚಿತ್ರದಲ್ಲಿ ನಟಿ ಪರಿಣಿತಿ ಚೋಪ್ರಾ ದಿಲ್ಜಿತ್ ದೋಸಾಂಜ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 15 ಕೆಜಿ ತೂಕ ಏರಿಸಿಕೊಂಡಿದ್ದರು.

ಇದೀಗ ಚಿತ್ರೀಕರಣ ಮುಗಿದಿದ್ದು, ನಟಿ ಪುನಃ ತಮ್ಮ ವಾಸ್ತವ ತೂಕಕ್ಕೆ ಬರಲು ಜಿಮ್​ನಲ್ಲಿ ವರ್ಕ್​ಔಟ್​ ಮಾಡುತ್ತಿದ್ದಾರೆ. ತೂಕ ಹೆಚ್ಚಿಸಿಕೊಂಡಿರುವ ಕುರಿತು ಹೇಳಿರುವ ನಟಿ, ಚಿತ್ರಕ್ಕಾಗಿ ಜಂಕ್ ಫುಡ್ ತಿನ್ನಲು ಆರಂಭಿಸಿದೆ. ಇದರಿಂದ ತೂಕ ಹೆಚ್ಚಾಯಿತು ಎಂದಿದ್ದಾರೆ. ತೂಕ ಹೆಚ್ಚಿಸಿಕೊಳ್ಳೋದು ಸುಲಭ ಆದರೆ, ಅದನ್ನು ಮತ್ತೆ ಇಳಿಸಿಕೊಳ್ಳುವುದು ಕಷ್ಟ ಎಂದಿರುವ ನಟಿ, ನನ್ನ ಮೊದಲಿನ ತೂಕಕ್ಕೆ ಮರಳಲು ಬಯಸುತ್ತಿದ್ದೇನೆ. ಅದಕ್ಕಾಗಿ ನಾನು ಈಗ ಸಾಕಷ್ಟು ಜಿಮ್ ಮಾಡುತ್ತಿದ್ದೇನೆ. ತೂಕ ಇಳಿಕೆ ಪ್ರಯಾಣ ತುಂಬಾ ಕಷ್ಟ ಎಂದಿದ್ದಾರೆ. ನಿರ್ದೇಶಕ ಇಮ್ತಿಯಾಜ್ ಅವರ ಚಿತ್ರಕ್ಕಾಗಿ ತಾವು ಏನು ಬೇಕಾದರೂ ಮಾಡಲು ಸಿದ್ಧ ಎಂದಿರುವ ನಟಿ, ತೂಕ ಏರಿಸಿಕೊಂಡಿರುವ ಬಗ್ಗೆ ಬೇಸರವಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಇವರು ವರ್ಕ್​ಔಟ್​ ವಿಡಿಯೋ ಸಕತ್​ ಸದ್ದು ಮಾಡುತ್ತಿದೆ. 

ನಟಿಯೊಬ್ಬರ ಖಾಸಗಿ ಕ್ಷಣ ಸೆರೆಹಿಡಿದು ಬ್ಲ್ಯಾಕ್​ಮೇಲ್​- ನಟಿ ಆತ್ಮಹತ್ಯೆ: ಪುಷ್ಪ ನಟ ಜಗದೀಶ್​ ಅರೆಸ್ಟ್

View post on Instagram