Asianet Suvarna News Asianet Suvarna News

jitendra kumar : ಒಟಿಟಿ ಸೆನ್ಸೇಷನ್, ಐಐಟಿ ಪಾಸ್ ಪಂಚಾಯತ್ ನಟನ ನೆಟ್ ವರ್ತ್ ಎಷ್ಟು ಗೊತ್ತಾ?

ಪಂಚಾಯತ್ ಎಂದಾಗ ಅಭಿಷೇಕ್ ತ್ರಿಪಾಠಿ ನೆನಪಿಗೆ ಬರ್ತಾರೆ. ಪಂಚಾಯತ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಜಿತೇಂದ್ರ ಕುಮಾರ್ ಇಂಜಿನಿಯರ್ ಪದವೀಧರ. ಆಸಕ್ತಿಯಿಂದಲೇ ಆಕ್ಟಿಂಗ್ ಶುರು ಮಾಡಿದ ನಟ ಪ್ರಮಾಣಿಕ ಪ್ರಯತ್ನದ ಮೂಲಕ ಸಾಧಿಸಿ ತೋರಿಸಿದ್ದಾನೆ. 
 

panchayat season three actor jitendra kumar net worth roo
Author
First Published Aug 22, 2024, 5:09 PM IST | Last Updated Aug 22, 2024, 5:20 PM IST

ಜನಪ್ರಿಯ ವೆಬ್ ಸರಣಿ ಪಂಚಾಯತ್ (web series Panchayat) ನಲ್ಲಿ ನಟಿಸಿ, ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತವರು ಅಭಿಷೇಕ್ ತ್ರಿಪಾಠಿ (Abhishek Tripathi) ಅಲಿಯಾಸ್ ಜಿತೇಂದ್ರ ಕುಮಾರ್ (Jitendra Kumar). ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ವೆಬ್ ಸರಣಿಯಲ್ಲಿ ಪಂಚಾಯತ್ ಒಂದು. ಜಿತೇಂದ್ರ ಕುಮಾರ್ ಯಾವಾಗ ಮತ್ತು ಹೇಗೆ ಎಲ್ಲರ ಅಚ್ಚುಮೆಚ್ಚಿನ ಜೀತು ಭಯ್ಯಾ ಆದರು ಎಂಬುದನ್ನು ತಿಳಿಯಲು ಅವರ ಹಿಂದಿನ ಜೀವನ ತಿಳಿದುಕೊಳ್ಳಬೇಕು.

ಜಿತೇಂದ್ರ ಕುಮಾರ್ ನಟನಾ ಹಾದಿ ಸುಲಭವಾಗಿರಲಿಲ್ಲ. ಯಾಕೆಂದ್ರೆ ಜಿತೇಂದ್ರ ಕುಮಾರ್ ಕಲಿತಿದ್ದು ಇಂಜಿನಿಯರಿಂಗ್. ಅವರು ಇಂಜಿನಿಯರ್ ಕುಟುಂಬದಿಂದ ಬಂದವರು. ಸೆಪ್ಟೆಂಬರ್ 1, 1990 ರಂದು ರಾಜಸ್ಥಾನದ ಖೈರ್ತಾಲ್ ನಲ್ಲಿ ಜನಿಸಿದ ಜಿತೇಂದ್ರ ಕುಮಾರ್ ಕುಟುಂಬದಲ್ಲಿ ಎಲ್ಲರೂ ಎಂಜಿನಿಯರ್‌ಗಳು. ಎಲ್ಲರನ್ನೂ ಒಂದೇ ವೃತ್ತಿಯಲ್ಲಿ ನೋಡಿದ್ದ ಜಿತೇಂದ್ರ ಕುಮಾರ್ ಕೂಡ ಇಂಜಿನಿಯರ್ ಆಗುವ ನಿರ್ಧರಕ್ಕೆ ಬಂದಿದ್ದರು. ಅದೇ ದಾರಿಯಲ್ಲಿ ಸಾಗಿದ ಅವರು ಐಐಟಿ ಪದವಿ ಪಡೆದರು. 

 ಸೈಫ್ - ಕರೀನಾ ಮದುವೆಯಲ್ಲಿ ಪಾತ್ರೆ ತೊಳೆದಿದ್ದ ವ್ಯಕ್ತಿ ಇಂದು ಸೂಪರ್ ಹೀರೋ

ಇಂಜಿನಿಯರಿಂಗ್ ಮುಗಿಸಿದ್ರೂ ಜಿತೇಂದ್ರ ಕುಮಾರ್ ಒಲವು ಕಲೆ ಮೇಲಿತ್ತು. ಮಿಮಿಕ್ರಿ ಮಾಡೋದ್ರಲ್ಲಿ ಅವರು ಮುಂದಿದ್ದರು. ಬಾಲ್ಯದಿಂದಲೂ ಅಮಿತಾಬ್ ಬಚ್ಚನ್, ನಾನಾ ಪಾಟೇಕರ್ ಮಿಮಿಕ್ರಿ ಮಾಡ್ತಾ ಬೆಳೆದವರು ಜಿತೇಂದ್ರ ಕುಮಾರ್. ಬಾಲ್ಯದಲ್ಲಿಯೇ ರಾಮಲೀಲಾ, ನಾಟಕಗಳಲ್ಲಿ ಅವರು ಕಾಣಿಸಿಕೊಳ್ತಿದ್ದರು.

ಜಿತೇಂದ್ರ ಕುಮಾರ್, ಜೆಇಇ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಜೆಇಇ ಮುಖ್ಯ ಮತ್ತು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ ಐಐಟಿ ಖರಗ್‌ಪುರದಲ್ಲಿ ಅಧ್ಯಯನ ಮುಂದುವರೆಸಿದ್ರು. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಪಾಸ್ ಆದ ಜಿತೇಂದ್ರ ಹೆಚ್ಚು ಅಂಕಗಳಿಸಿರಲಿಲ್ಲ. ಹಾಗಾಗಿ ಅವರಿಗೆ ಕೆಲಸ ಸಿಗೋದು ಕಷ್ಟವಿತ್ತು. ಆದ್ರೆ ಒಂದು ಆಫರ್ ಅವರ ಅದೃಷ್ಟ ಬದಲಿಸ್ತು. 

ಐಐಟಿ ಖರಗ್‌ಪುರದಲ್ಲಿ ಬಿಟೆಕ್ ಓದುತ್ತಿದ್ದಾಗಲೇ ಜಿತೇಂದ್ರ ಕುಮಾರ್‌ ಅವರಿಗೆ ಆಕ್ಟಿಂಗ್ ಕಲಿಯುವ ಅವಕಾಶ ಸಿಕ್ಕಿತ್ತು. ಐಐಟಿ ಖರಗ್‌ಪುರದಲ್ಲಿ ಆಯೋಜಿಸಲಾಗ್ತಿದ್ದ  ಕಾರ್ಯಕ್ರಮದ ಪಾಲ್ಗೊಂಡು ಆಕ್ಟಿಂಗ್ ಕಲಿಯಲು ಶುರು ಮಾಡಿದ್ದರು. ಕಾಲೇಜು ದಿನಗಳಲ್ಲಿ ಸಾಕಷ್ಟು ನಾಟಕ ಮಾಡುತ್ತಿದ್ದರು. ಕಾಲೇಜಿನ ಕೊನೆಯ ವರ್ಷದಲ್ಲಿ ತಮ್ಮ ಹಿರಿಯ ಗೆಳೆಯ ವಿಶ್ವಪತಿ ಸರ್ಕಾರ್ ಅವರ ನಾಟಕದಲ್ಲಿ ನಟಿಸಿದ್ದರು.

ಐಐಟಿ ಖರಗ್‌ಪುರದಲ್ಲಿ ನಾಟಕಗಳು, ಬೀದಿ ನಾಟಕಗಳು ಮತ್ತು ಪ್ರದರ್ಶನಗಳನ್ನು ಮಾಡುವಾಗ ಅವರು ಪ್ರೊಡಕ್ಷನ್ ಹೌಸ್ ಟಿವಿಎಫ್  ಸಂಪರ್ಕಕ್ಕೆ ಬಂದ್ರು. ಆ ಸಮಯದಲ್ಲಿ ಟಿವಿಎಫ್ ಯೂಟ್ಯೂಬ್‌ಗೆ ಕಾಲಿಟ್ಟಿತ್ತು.  ಇದ್ರ ಮುಖ್ಯಸ್ಥ ವಿಶ್ವಪತಿ ಸರ್ಕಾರ್, ಜಿತೇಂದ್ರ ಕುಮಾರ್ ಅವರಿಗೆ ಟಿವಿಎಫ್ ಪ್ರಾಜೆಕ್ಟ್ ನೀಡಲು ಶುರು ಮಾಡಿದ್ದರು. ಇದಕ್ಕಿಂತ ಮೊದಲು ಜಿತೇಂದ್ರ ಸ್ವಲ್ಪ ದಿನ ಖಾಸಗಿ ಕಂಪನಿಯಲ್ಲಿ ಕೆಲಸ ಕೂಡ ಮಾಡಿದ್ದರು. 

ಐಐಟಿ ಖರಗ್ಪುರದಿಂದ ಉತ್ತೀರ್ಣರಾಗಿ ಹೊರ ಬಂದ ಜಿತೇಂದ್ರ ಮೂರು ತಿಂಗಳು ನಿರುದ್ಯೋಗಿ. ನಂತ್ರ ಬೆಂಗಳೂರಿನಲ್ಲಿ ಜಪಾನಿನ ನಿರ್ಮಾಣ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಆಗ ವಿಶ್ವಪತಿ ಸರ್ಕಾರ್ ಅವರನ್ನು ಟಿವಿಎಫ್ ಯೋಜನೆಗೆ ಕರೆದರು. ಜಿತೇಂದ್ರ ಕುಮಾರ್ , ಮುನ್ನಾ ಜಜ್ಬಾತಿ ಸರಣಿಯಲ್ಲಿ ಕೆಲಸ ಮಾಡಿದರು. ಇದ್ರ ಮೂಲಕ ಜನಮನ್ನಣೆ ಗಳಿಸಿದ ಅವರಿಗೆ ಒಂದೊಂದೇ ಪಾತ್ರ ಸಿಗಲು ಶುರುವಾಯ್ತು. 

 ಪಂಚಾಯತ್ 2 ಖ್ಯಾತಿಯ ಅಂಚಲ್ ತಿವಾರಿ ಸಾವಿನ ಸುದ್ದಿ ಸುಳ್ಳು, ಸ್ಪಷ್ಟನೆ ನೀಡಿದ ನಟಿ!

ಟಿವಿಎಫ್‌ ನಲ್ಲಿ ಫೇಮಸ್ ಆದ ನಂತ್ರ ಜಿತೇಂದ್ರ ಕುಮಾರ್‌ಗೆ ಬಾಲಿವುಡ್‌ನಿಂದ ಆಫರ್ ಬರಲು ಶುರುವಾಯ್ತು. ಗಾನ್ ಕ್ಯಾಶ್ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಜೀತೇಂದ್ರ ಕುಮಾರ್., ಆಯುಷ್ಮಾನ್ ಖುರಾನಾ ಅವರೊಂದಿಗೆ  ಶುಭ್ ಮಂಗಲ್ ಸಾವಧಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.   ಚಮನ್ ಬಹಾರ್,  ಜಾದುಗರ್,  ಡ್ರೈ ಡೇ  ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಹೆಚ್ಚಾಗಿ ಒಟಿಟಿ ವೆಬ್ ಸರಣಿಯಲ್ಲೇ ಮಿಂಚುತ್ತಿರುವ ಜಿತೇಂದ್ರ ಕುಮಾರ್ ನಿವ್ವಳ ಆಸ್ತಿ 10 ಕೋಟಿ ಎನ್ನಲಾಗಿದೆ. 88.18 ಲಕ್ಷ ಮೌಲ್ಯದ Mercedes Benz GLS 350D,  82.10 ಲಕ್ಷ ರೂಪಾಯಿ ಮೌಲ್ಯದ Mercedes Benz E-Class,   48.43 ಲಕ್ಷ ಬೆಲೆಯ ಟೊಯೊಟಾ ಫಾರ್ಚುನರ್ ಮತ್ತು  4 ಲಕ್ಷ ಬೆಲೆಯ ಸ್ವಾಂಕಿ ಮಿನಿ ಕಂಟ್ರಿಮ್ಯಾನ್ ಕಾರನ್ನು ಜಿತೇಂದ್ರ ಹೊಂದಿದ್ದಾರೆ.  ಸಣ್ಣ ಹಳ್ಳಿಯಿಂದ ಬಂದ ಜಿತೇಂದ್ರ ಕುಮಾರ್ ಸ್ಟಾರ್‌ಡಮ್‌ ಪ್ರಯಾಣ,  ಕಠಿಣ ಪರಿಶ್ರಮ, ದೃಢತೆ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ.   

Latest Videos
Follow Us:
Download App:
  • android
  • ios