* ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಸಂಕಷ್ಟ* ಬಚ್ಚನ್ ಕುಟುಂಬದ ಸೊಸೆಗೆ ಸಮನ್ಸ್ ಜಾರಿಗೊಳಿಸಿದ ಇಡಿ* ಪನಾಮಾ ಪೇಪರ್ ಲೀಕ್ಸ್ ವಿಚಾರವಾಗಿ ಸಮನ್ಸ್ ಜಾರಿ
ನವದೆಹಲಿ(ಡಿ.20): ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಬಚ್ಚನ್ ಕುಟುಂಬದ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಇಡಿ ಸಮನ್ಸ್ ಕಳುಹಿಸಿ ದೆಹಲಿಗೆ ಬರುವಂತೆ ಆದೇಶಿಸಲಾಗಿದೆ. ಇನ್ನು ಐಶ್ವರ್ಯಾ ರೈ ಬಚ್ಚನ್ ಇಂದು ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ. ಹೀಗಾಗಿ ಸಂಸ್ಥೆಯು ಶೀಘ್ರದಲ್ಲೇ ಐಶ್ವರ್ಯಾ ರೈ ಬಚ್ಚನ್‌ಗೆ ಹೊಸ ಸಮನ್ಸ್ ಅನ್ನು ಜಾರಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ
ಇಮೇಲ್ ಮೂಲಕ ಉತ್ತರ
ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ED ಈ ಹಿಂದೆ 9/11 2021 ರಂದು ಐಶ್ವರ್ಯಾ ರೈ ಬಚ್ಚನ್‌ಗೆ ಸೆಕ್ಷನ್ 37 ಫೆಮಾ ಅಡಿಯಲ್ಲಿ ಸಮನ್ಸ್ ನೀಡಿತ್ತು. ಮುಂಬೈನಲ್ಲಿರುವ ಪ್ರತೀಕ್ಷಾ ಬಚ್ಚನ್ ಕುಟುಂಬದ ನಿವಾಸಕ್ಕೆ ಈ ಸಮನ್ಸ್ ಕಳುಹಿಸಲಾಗಿದೆ. ಇದರಲ್ಲಿ 15 ದಿನಗಳೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. ಮೂಲಗಳ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ಇಮೇಲ್ ಮೂಲಕ ಇಡಿಗೆ ಈ ಉತ್ತರವನ್ನು ನೀಡಿದ್ದಾರೆ..
ಇಡಿಯಿಂದ ಪ್ರಕರಂದ ತನಿಖೆ
ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಬಚ್ಚನ್ ಕುಟುಂಬದ ಹೆಸರೂ ಬಂದಿತ್ತು ಎಂಬುವುದು ಉಲ್ಲೇಖನೀಯ. ಆಗ ಜಾರಿ ನಿರ್ದೇಶನಾಲಯ (ಇಡಿ) ಕೂಡ ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಜಾರಿ ನಿರ್ದೇಶನಾಲಯದ ಎಚ್‌ಐಯು ಈ ಕುರಿತು ತನಿಖೆ ನಡೆಸುತ್ತಿದೆ.
ಏನಿದು ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣ?
2016ರಲ್ಲಿ ಯುಕೆಯಲ್ಲಿ ಪನಾಮಾ ಕಾನೂನು ಸಂಸ್ಥೆಯೊಂದರ 11.5 ಕೋಟಿ ತೆರಿಗೆ ದಾಖಲೆಗಳು ಸೋರಿಕೆಯಾಗಿದ್ದವು. ಇದರಲ್ಲಿ ಪ್ರಪಂಚದಾದ್ಯಂತದ ದೊಡ್ಡ ನಾಯಕರು, ಉದ್ಯಮಿಗಳು ಮತ್ತು ದೊಡ್ಡ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಲಾಯಿತು. ಈ ಸಂದರ್ಭದಲ್ಲಿ ಭಾರತದ ಸುಮಾರು 500 ಜನರ ಹೆಸರುಗಳು ಈ ಪಟ್ಟಿಯಲ್ಲಿ ಇರುವುದು ಬಹಿರಂಗವಾಗಿದೆ. ಇದರಲ್ಲಿ ಬಚ್ಚನ್ ಕುಟುಂಬದ ಹೆಸರೂ ಸೇರಿತ್ತು.
ವರದಿಯೊಂದರ ಪ್ರಕಾರ, ಪನಾಮಾ ಲೀಕ್ಸ್ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಗಳು ತೆರಿಗೆ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಇದಕ್ಕಾಗಿ ತೆರಿಗೆ ಅಧಿಕಾರಿಗಳು ತನಿಖೆಯಲ್ಲಿ ತೊಡಗಿದ್ದಾರೆ. ಈ ವೇಳೆ ಐಶ್ವರ್ಯಾ ರೈ ಅವರನ್ನು ಮೊದಲು ಕಂಪನಿಯೊಂದರ ನಿರ್ದೇಶಕಿಯನ್ನಾಗಿ ಮಾಡಲಾಗಿತ್ತು. ನಂತರ ಅವರನ್ನು ಕಂಪನಿಯ ಷೇರುದಾರ ಎಂದು ಘೋಷಿಸಲಾಯಿತು.
ಗಮನಾರ್ಹವೆಂದರೆ, ಈ ವಿಷಯ ಬಹಿರಂಗಗೊಂಡ ನಂತರ, ಇಡೀ ದೇಶದಲ್ಲಿ ಸಂಚಲನ ಉಂಟಾಗಿದೆ. ಪ್ರಭಾವಿಗಳ ಹೆಸರು ಹೊರಬಿದ್ದ ಮೇಲೆ ಜನ ನಾನಾ ರೀತಿಯ ಊಹಾಪೋಹಗಳನ್ನು ಮಾಡುತ್ತಿದ್ದಾರೆ.
