Asianet Suvarna News Asianet Suvarna News

ತೋರಿಸ್ಬೇಕೋ, ಬೇಡವೋ ಗೊತ್ತಾಗದೇ ನಟಿ ಪಾಲಕ್​ ಪಟ್ಟ ಪರಿಪಾಟಲಿಗೆ ಅಯ್ಯೋ ಪಾಪ ಎಂದ ನೆಟ್ಟಿಗರು!

ತೆರೆದೆದೆ ಡ್ರೆಸ್​ ಹಾಕಿಕೊಂಡ ನಟಿ ಶ್ವೇತಾ ತಿವಾರಿ ಪುತ್ರಿ ಪಾಲಕ್​ ತಿವಾರಿ ಪಟ್ಟ ಪರಿಪಾಟಲು ನೋಡಿ ನೆಟ್ಟಿಗರು ಅಯ್ಯೋಪಾಪ ಎನ್ನುತ್ತಿದ್ದಾರೆ. ವಿಡಿಯೋ ವೈರಲ್​ ಆಗಿದೆ. 
 

Palak Tiwari spotted at event  with uncomfortable dress being trolled by netizens suc
Author
First Published Aug 31, 2024, 11:39 AM IST | Last Updated Aug 31, 2024, 11:39 AM IST

 ಖ್ಯಾತ ಟಿವಿ ತಾರೆ ಶ್ವೇತಾ ತಿವಾರಿ ಅವರ ಪುತ್ರಿಯಾಗಿರುವ 22 ವರ್ಷದ ಪಾಲಕ್ ತಮ್ಮ ಅತ್ಯಾಕರ್ಷಕ ನೋಟದಿಂದಾಗಿ ಚಲನಚಿತ್ರ ನಿರ್ಮಾಪಕರನ್ನು ಆಕರ್ಷಿಸುತ್ತಿದ್ದಾರೆ. ಈಕೆ  ಸ್ಟೈಲಿಶ್ ಬಟ್ಟೆಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿದ್ದಾರೆ. ಸದ್ಯ ಪಾಲಕ್​, ತಮ್ಮ ಅಮ್ಮ ಕಿರುತೆರೆ ನಟಿ ಶ್ವೇತಾ ತಿವಾರಿ ಅವರಿಗಿಂತಲೂ  ಫೇಮಸ್ ಆಗುತ್ತಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿರೋ ಪಾಲಕ್​,  ವಿವಿಧ ಬ್ರಾಂಡ್‌ಗಳಿಗೆ ಶೂಟ್ ಮಾಡುತ್ತಾರೆ.   ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ  ಪಾಲಕ್​.  

ಇದೀಗ ನಟಿ ಷಾರ್ಟ್ ಆ್ಯಂಡ್​ ಟೈಟ್​ ಡ್ರೆಸ್​ ಹಾಕಿಕೊಂಡು, ಧಾರಾಳವಾಗಿ ಎದೆ ಪ್ರದರ್ಶನ ಮಾಡುತ್ತಾ ನಡೆದುಕೊಂಡು ಬರುವಾಗ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಹಾಕಿದ್ದೇ ಷಾರ್ಟ್​ ಆ್ಯಂಡ್​ ಓಪನ್​ ಡ್ರೆಸ್​. ಎಲ್ಲವೂ ಧಾರಾಳವಾಗಿ ಪ್ರದರ್ಶನ ಆಗಲಿ ಎನ್ನುವ ಕಾರಣಕ್ಕೇ ಇಂಥ ಡ್ರೆಸ್​ ಹಾಕಿದ್ದರೂ ಯಾಕೋ ನಟಿ ಮುಜುಗರಪಟ್ಟುಕೊಂಡಂತೆ  ಕಾಣುತ್ತಿದೆ. ಎದೆಭಾಗದ ನಡುವೆ ಓಪನ್​ ಇರೋ ಡ್ರೆಸ್​ ಅನ್ನು ಪದೇ ಪದೇ ಮುಟ್ಟಿನೋಡಿಕೊಳ್ಳುವುದೂ ಅಲ್ಲದೇ, ಅದನ್ನು ಮೇಲೆ ಮೇಲೆ ಎಳೆದುಕೊಂಡು ಸಕತ್​ ಟ್ರೋಲ್​  ಆಗಿದ್ದಾರೆ. ತೋರಿಸುವುದಿದ್ದರೆ ಫುಲ್​ ತೋರಿಸು, ಮುಚ್ಚಿಕೊಳ್ಳುವುದಿದ್ರೆ ಫುಲ್​  ಮುಚ್ಕೊ. ಇದ್ಯಾಕೆ ಅರ್ಧಂಬರ್ಧ ಎಂದು ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ನಟಿ ಪಡುತ್ತಿರುವ ಪರಿಪಾಟಲು ನೋಡಿ ನೆಟ್ಟಿಗರು ಅಯ್ಯೋ ಪಾಪ ಎನ್ನುತ್ತಿದ್ದಾರೆ. 

ಪಾಲಕ್​ಗೆ ನಿಮಿಷ ನಿಮಿಷಕ್ಕೂ ಒಬ್ಬ ಬೇಕು, ಅಫೇರ್ಸ್​ಗೆ ಲೆಕ್ಕವೇ ಇಲ್ಲ: ಮಗಳ ಬಗ್ಗೆ ಕಿರುತೆರೆ ನಟಿ ಇದೆಂಥ ಹೇಳಿಕೆ!

 
ಇನ್ನು ಪಾಲಕ್​ ಕುರಿತು ಹೇಳುವುದಾದರೆ,   ಬಾಲಿವುಡ್​​ ನಟಿ ಪಾಲಕ್ ತಿವಾರಿ ಶ್ವೇತಾ ಮತ್ತು ರಾಜಾ ಚೌಧರಿ ಅವರ ಪುತ್ರಿ. ಶ್ವೇತಾ ಮತ್ತು ರಾಜಾ 1998 ರಲ್ಲಿ ವಿವಾಹವಾದರು. ಪಾಲಕ್ 8 ಅಕ್ಟೋಬರ್ 2000 ರಂದು ಜನಿಸಿದರು. ಆದರೆ ಶ್ವೇತಾ ಮತ್ತು ರಾಜಾ ನಡುವಿನ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ವಿವಾದಗಳ ನಂತರ, ಶ್ವೇತಾ ಮತ್ತು ರಾಜಾ 2007 ರಲ್ಲಿ ಪರಸ್ಪರ ವಿಚ್ಛೇದನ ಪಡೆದರು. 2021 ರಲ್ಲಿ, ಪಾಲಕ್   ಅವರು ಸಂಧು ಅವರ ಹಾಡು ಬಿಜ್ಲಿ ಬಿಜ್ಲಿಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಅವರು  ಖ್ಯಾತಿ ಗಳಿಸಿದರು. ಪಾಲಕ್ ಅನೇಕ ಸ್ಟಾರ್ ಮಕ್ಕಳೊಂದಿಗೆ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಅವರ ಹೆಸರು ಹೆಚ್ಚಾಗಿ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್‌ಗೆ ಸಂಬಂಧಿಸಿದೆ. ಆದರೆ, ಪಾಲಕ್ ಮತ್ತು ಇಬ್ರಾಹಿಂ ಈ ಸುದ್ದಿಗೆ ಬಹಿರಂಗವಾಗಿ ಪ್ರತಿಕ್ರಿಯಿಸಿಲ್ಲ.
 
ಈ ಸಂಬಂಧವನ್ನು  ಅವರು ಒಪ್ಪಿಕೊಳ್ಳದಿದ್ದರೂ ನಟ ಸಲ್ಮಾನ್​ ಖಾನ್​ ಅವರೇ ಪರೋಕ್ಷವಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದೂ ಉಂಟು. ಆದರೆ ಇದನ್ನು ನಟಿ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಆದರೆ ಇದೀಗ ಅವರ ತಂದೆ ರಾಜಾ ಚೌಧರಿ, (ಶ್ವೇತಾ ತಿವಾರಿ ಅವರ ವಿಚ್ಛೇದಿತ ಪತಿ) ಮಗಳ ಬಗ್ಗೆ ಮಾತನಾಡಿದ್ದಾರೆ. ಇಬ್ರಾಹಿಂ ಅಲಿ ಖಾನ್ ಜೊತೆಗಿನ ಮಗಳ ಸಂಬಂಧದ ಕುರಿತು ನೇರವಾಗಿ ಹೇಳದ ಅವರು, ಈ ಸಮಯದಲ್ಲಿ, ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಪಡೆದಿರುತ್ತಾರೆ. ಅವರು ಏನನ್ನು ಚೆನ್ನಾಗಿ ಭಾವಿಸಿದರೂ, ನಾನು ಅದರಲ್ಲಿ ಸಂತೋಷವಾಗಿರುತ್ತೇನೆ. ಅವಳು ಸಂತೋಷವಾಗಿದ್ದರೆ ನನಗೆ  ಸಂತೋಷ, ಅವಳು ದುಃಖಿತಳಾದರೆ,  ನಾನು ದುಃಖಿತನಾಗುತ್ತೇನೆ ಎಂದಿದ್ದಾರೆ. ಈ ಮೂಲಕ ಮಗಳ ರಿಲೇಷನ್​ ಕುರಿತು ಪರೋಕ್ಷವಾಗಿ ತಿಳಿಸಿದ್ದಾರೆ.  

ಕರೀನಾ ಜೊತೆನೂ ಸೈಫ್​ಗೆ ಬೋರ್​ ಆಗೋಕೆ ಶುರುವಾಯ್ತಾ? ಸಂದರ್ಶನದಲ್ಲಿ ಗಂಡನ ಮಾತಿಗೆ ಕಸಿವಿಸಿಗೊಂಡ ನಟಿ

Latest Videos
Follow Us:
Download App:
  • android
  • ios