Asianet Suvarna News Asianet Suvarna News

ಮದ್ಯಕ್ಕಾಗಿ ಶಿಷ್ಯನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಗಾಯಕ; ವಿಡಿಯೋ ವೈರಲ್

ಜನಪ್ರಿಯ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ತನ್ನ ಶಿಷ್ಯನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸೋಷ್ಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಚರ್ಚೆಯಾಗುವುದು ತಿಳಿಯುತ್ತಿದ್ದಂತೆಯೇ ಈ ಕೃತ್ಯಕ್ಕೆ ತೇಪೆ ಹಾಕುವ ಕೆಲಸವನ್ನು ಗಾಯಕ ಮಾಡಿದ್ದಾರೆ. 

Pakistani Singer Rahat Fateh Ali Khan Beats His Employee Video Goes Viral skr
Author
First Published Jan 28, 2024, 2:01 PM IST

ಹೆಸರಾಂತ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ಉದ್ಯೋಗಿಯೊಬ್ಬನಿಗೆ ಮದ್ಯದ ಬಾಟಲ್ ಬಗ್ಗೆ ಕೇಳಿ ಕೋಪದಲ್ಲಿ ಕೆಂಡಾಮಂಡಲವಾಗಿ ಶೂ ತೆಗೆದುಕೊಂಡು ಹಿಗ್ಗಾಮುಗ್ಗಾ ಬಾರಿಸುವ ವಿಡಿಯೋ ವೈರಲ್ ಆಗಿದೆ.

ಗಾಯಕನು ನನ್ನ ಬಾಟಲ್ ಎಲ್ಲಿದೆ ಎಂದು ಕೇಳುತ್ತಾ ವ್ಯಕ್ತಿಗೆ ಥಳಿಸಿದ್ದಾರೆ. ಇದರಲ್ಲಿ ಉದ್ಯೋಗಿಯು 'ನನಗೆ ಗೊತ್ತಿಲ್ಲ' ಎಂದು ಹೇಳುವುದನ್ನು ಕೇಳಬಹುದು. ಅಷ್ಟಾದರೂ ಸುಮ್ಮನಾಗದ ಗಾಯಕ ಆತನನ್ನು ಎಳೆದಾಡಿ ಬಾರಿಸುತ್ತಿದ್ದಾರೆ. ಶೂನಲ್ಲಿ ಹೊಡೆಯುವುದಷ್ಟೇ ಅಲ್ಲ, ಕಪಾಳಮೋಕ್ಷ ಮಾಡುವುದನ್ನು ಕೂಡಾ ಕಾಣಬಹುದು. ಈ ವಿಡಿಯೋ ವೈರಲ್ ಆಗಿ ಎಲ್ಲೆಡೆ ಗಾಯಕನ ವಿರುದ್ಧ ಮಾತುಗಳು ಕೇಳಿ ಬರುತ್ತಿದ್ದಂತೆಯೇ ಇದು 'ಉಸ್ತಾದ್ ಮತ್ತು ಶಾಗಿರ್ದ್ ನಡುವಿನ ವೈಯಕ್ತಿಕ ವಿಷಯ' ಎಂದು ತೇಪೆ ಹಾಕುವ ಕೆಲಸವನ್ನು ಗಾಯಕ ಮಾಡಿದ್ದಾರೆ. 

ಬಹುಕಾಲದ ಗೆಳತಿ ಪೂಜಾ ಕೈ ಹಿಡಿದ 'ಟಗರುಪಲ್ಯ' ನಟ ನಾಗಭೂಷಣ್

ಪಾಕಿಸ್ತಾನಿ ಹಿನ್ನಲೆ ಮತ್ತು ಕವ್ವಾಲಿ ಗಾಯಕ ರಹತ್ ಫತೇಹ್ ಅಲಿ ಖಾನ್ ಪಕ್ಕದಲ್ಲಿ ವ್ಯಕ್ತಿಯು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಮಯದಲ್ಲಿ ಬಾಟಲ್‌ನಲ್ಲಿ ಪವಿತ್ರ ನೀರು ಇದೆ ಎಂದು ಆ ವ್ಯಕ್ತಿ ಹೇಳುತ್ತಿದ್ದಂತೆ ಅದನನು ಬದಲಿಸಿದ್ದು ಯಾರು ಎಂದು ಕೇಳುತ್ತಾ ಆತನ ಮೇಲೆ ಹಿಂಸಾಚಾರ ನಡೆಸಿದ್ದಾರೆ ಗಾಯಕ. 

ರಾಹತ್ ಫತೇಹ್ ಅಲಿ ಖಾನ್ ಅವರ ಕೃತ್ಯ ಮತ್ತು ನಡವಳಿಕೆಯನ್ನು ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಈ ಘಟನೆಯು ಆನ್‌ಲೈನ್‌ನಲ್ಲಿ ಬಹಳ ಟೀಕೆಗೆ ಕಾರಣವಾಯಿತು. ಇದರ ನಂತರ, ಹಿನ್ನೆಲೆ ಗಾಯಕ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿ ಇಡೀ ಘಟನೆಯನ್ನು ವಿವರಿಸಲು ಪ್ರಯತ್ನಿಸಿದರು. ಇದು ಕೂಡಾ ವಿವಿಧ ವಲಯಗಳಿಂದ ಟೀಕೆಗೆ ಗುರಿಯಾಯಿತು.

ರಾವಣನ ಮಗಳಾ ಸೀತೆ? ಜಾನಕಿಯ ಕುರಿತ 6 ಅಪರೂಪದ ವಿಷಯಗಳು

ವಿವರಣೆ ವೀಡಿಯೊದಲ್ಲಿ, 'ಅವನು ನನ್ನ ಮಗನಿದ್ದಂತೆ ಮತ್ತು ಇದು ಉಸ್ತಾದ್ ಮತ್ತು ಶಾಗಿರ್ದ್ ನಡುವಿನ ಸಂಬಂಧವಾಗಿದೆ. ನಾವು ಕೆಲವೊಮ್ಮೆ ಒಳ್ಳೆಯ ಕೆಲಸಕ್ಕಾಗಿ ಶಾಗಿರ್ದ್‌ನ ಮೇಲೆ ಪ್ರೀತಿಯನ್ನು ತೋರಿಸುತ್ತೇವೆ ಮತ್ತು ಕೆಲವು ತಪ್ಪುಗಳಿಗೆ ಶಿಕ್ಷೆಯನ್ನು ನೀಡುತ್ತೇವೆ, ' ಎಂದು ಗಾಯಕ ಹೇಳಿದ್ದಾರೆ. ಜೊತೆಗೆ ಆತನ ಬಳಿ ಕ್ಷಮೆ ಯಾಚಿಸಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಹೊಡೆತ ತಿಂದ ವ್ಯಕ್ತಿ ಹಾಗೂ ಆತನ ತಂದೆಯನ್ನು ನಿಲ್ಲಿಸಿಕೊಂಡಿದ್ದಾರೆ.

ಇಲ್ಲಿದೆ ವಿಡಿಯೋ..


 

Follow Us:
Download App:
  • android
  • ios