Asianet Suvarna News Asianet Suvarna News

ರಾವಣನ ಮಗಳಾ ಸೀತೆ? ಜಾನಕಿಯ ಕುರಿತ 6 ಅಪರೂಪದ ವಿಷಯಗಳು

ರಾಮ ಸೀತೆ ಎಂಬುದು ಜೋಡಿ ಪದಗಳಷ್ಟು ಬೆರೆತು ಹೋಗಿದೆ. ಅವರಿಬ್ಬರ ಜೋಡಿ ಆದರ್ಶ ದಾಂಪತ್ಯಕ್ಕೆ ಸಾಕ್ಷಿಯಾಗಿದೆ. ರಾಮನ ಬಗ್ಗೆ ಸಾಕಷ್ಟು ವಿಷಯಗಳು ಕೆಲ ದಿನಗಳಿಂದ ಹರಿದಾಡುತ್ತಲೇ ಇದೆ. ಆದರೆ, ಸೀತೆಯ ಕುರಿತ ಈ ಅಪರೂಪದ ವಿಷಯಗಳನ್ನು ತಿಳಿದಿದ್ದೀರಾ? 

6 Lesser Known Facts About Mata Sita wife Of Lord Ram skr
Author
First Published Jan 28, 2024, 12:19 PM IST

ರಾಮಾಯಣವು ಅತ್ಯಂತ ಪ್ರಸಿದ್ಧ ಭಾರತೀಯ ಮಹಾಕಾವ್ಯ. ಇದರಲ್ಲಿ ಸೀತಾ ದೇವಿಯ ಪಾತ್ರ ಪ್ರಮುಖವಾಗಿದೆ. ಸೀತೆ ರಾಮನ ಹೆಂಡತಿಯಷ್ಟೇ ಅಲ್ಲ, ಅವಳ ಅಪಹರಣ ಕತೆಗೆ ಪೂರ್ಣ ಟ್ವಿಸ್ಟ್ ಕೊಡುತ್ತದೆ. ಸೀತೆ ಇಂದಿನ ಮಹಿಳೆಯರಿಗೆ ಮಾದರಿ. ಆದರ್ಶ ಪತ್ನಿ. ಈ ಜಾನಕಿ ದೇವಿಯ ಕುರಿತ ಅಪರೂಪದ ವಿಷಯಗಳು ಇಲ್ಲಿವೆ. 

1. ಆಧುನಿಕ ನೇಪಾಳದಲ್ಲಿರುವ ಮಿಥಿಲಾದಲ್ಲಿ ಸೀತಾ ದೇವಿಯು ರಾಜ ಜನಕ ಮತ್ತು ರಾಣಿ ಸುನೈನಾಗೆ ದೊರಕಿದಳು. ಅವಳು ಹೊಲದ ತೋಡಿನಲ್ಲಿ ಸಿಕ್ಕಿದವಳು. ಆದ್ದರಿಂದ ಅವಳಿಗೆ ಭೂಮಿಜೆ ಎಂದೂ ಕರೆಯುತ್ತಾರೆ. ಭೂಮಿ ತಾಯಿಯ ಮಗು ಎಂದೇ ಭಾವಿಸಲಾದ ಸೀತೆ ಮಕ್ಕಳಿಲ್ಲದ ರಾಜ ದಂಪತಿಗೆ ದೊರೆತ ಮೇಲೆ ಜನಕನ ಮಗಳಾಗಿ ಜಾನಕಿ ಎಂಬ ಹೆಸರು ಪಡೆಯುತ್ತಾಳೆ.

2. ಸೀತಾದೇವಿಯ ಬಗ್ಗೆ ಇನ್ನೂ ಹೆಚ್ಚು ತಿಳಿದಿಲ್ಲದ ಸಂಗತಿಯೆಂದರೆ, ಕೆಲವು ರಾಮಾಯಣ ವ್ಯಾಖ್ಯಾನಗಳಲ್ಲಿ, ದೇವಿ ಸೀತೆಯನ್ನು 'ಮಾಯಾ ಸೀತಾ' ಎಂದು ಉಲ್ಲೇಖಿಸಲಾಗಿದೆ. ಆಕೆ ಭ್ರಮೆ ಮಾತ್ರವಾಗಿದ್ದಳು. ನಿಜವಾದ ಸೀತೆ ಅಗ್ನಿ ದೇವನೊಂದಿಗೆ ಸುರಕ್ಷಿತವಾಗಿದ್ದಳು ಎನ್ನಲಾಗುತ್ತದೆ. ಅಲ್ಲಿಂದ ಆಕೆಯನ್ನು ಪಾರ್ವತಿ ದೇವಿಯ ನಿವಾಸಕ್ಕೆ ಕಳುಹಿಸಲಾಗಿತ್ತು. ರಾವಣನು ಅಪಹರಿಸಿದ್ದು ಮಾಯಾ ಸೀತೆಯನ್ನೇ ಹೊರತು ನಿಜ ಸೀತೆಯನ್ನಲ್ಲ ಎನ್ನಲಾಗುತ್ತದೆ. ರಾವಣನೊಂದಿಗಿನ ಘರ್ಷಣೆಯು ಮುಗಿದ ನಂತರ, ಅವಳು ಮತ್ತೆ ಭಗವಾನ್ ರಾಮನೊಂದಿಗೆ ಸೇರಿಕೊಂಡಳು. ಮಾಯಾ ಸೀತೆಯ ಮುಂದಿನ ಅವತಾರ ದ್ರೌಪದಿ ಎಂದು ಕೆಲವರು ಭಾವಿಸುತ್ತಾರೆ.

ವ್ಯಾಲೆಂಟೈನ್ಸ್ ವೀಕ್‌ಗೆ ಇನ್ನೊಂದೇ ವಾರ ಬಾಕಿ; ರೋಸ್ ಡೇಯಿಂದ ಕಿಸ್ ಡೇ ತನಕ ಇಲ್ಲಿದೆ ಪಟ್ಟಿ

3. ವಿಷ್ಣುವಿನ ಸಂಗಾತಿಯಾಗಲು ತಪಸ್ಸು ಮಾಡುತ್ತಿರುವಾಗ ರಾವಣನಿಂದ ಕಿರುಕುಳಕ್ಕೊಳಗಾದ ವೇದವತಿಯ ಪುನರ್ಜನ್ಮ ಸೀತಾ ಎಂದು ಭಾವಿಸಲಾಗಿದೆ. 

4. ಸೀತಾ ದೇವಿಯ ಜ್ಞಾನ ಮತ್ತು ಒಳನೋಟವು ಬಹಳ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ಸೀತಾ ದೇವಿಯು ಪವಿತ್ರ ಗ್ರಂಥಗಳಲ್ಲಿ ಚೆನ್ನಾಗಿ ಪಾರಂಗತಳಾಗಿದ್ದಳು ಮತ್ತು ಧರ್ಮದ ಆಳವಾದ ಗ್ರಹಿಕೆಯನ್ನು ಹೊಂದಿದ್ದಳು.

ಫೆಬ್ರವರಿಯಲ್ಲಿ ಈ 6 ದಿನ ಗೃಹಪ್ರವೇಶಕ್ಕಿದೆ ಮುಹೂರ್ತ; ಹೊಸ ಮನೆ ಪ್ರವೇಶ ವಿಷಯದಲ್ಲಿ ಮಾಡಬೇಡಿ ಈ ತಪ್ಪು

5. ಕೆಲವು ರಾಮಾಯಣ ನಿರೂಪಣೆಗಳಲ್ಲಿ, ದೇವಿ ಸೀತಾ ರಾವಣ ಮತ್ತು ಮಂಡೋದರಿಯ ಮೊದಲ ಮಗುವಾಗಿದ್ದಾಳೆ. ಜ್ಯೋತಿಷಿಗಳು, ಮಂಡೋದರಿಯ ಮೊದಲ ಮಗುವಿನಿಂದ ರಾವಣನ ವಂಶ ಅಳಿಯುತ್ತದೆ ಎಂದು ಭವಿಷ್ಯ ಹೇಳಿದ್ದರು.  ಪರಿಣಾಮವಾಗಿ, ರಾವಣನು ಮಗುವನ್ನು ದೂರದ ಸ್ಥಳದಲ್ಲಿ ಹೂಳಲು ಸಹಾಯಕರಿಗೆ ಆಜ್ಞೆಯನ್ನು ನೀಡಿದನು. ಇದೇ ಮಗು ಮಿಥಿಲೆಯಲ್ಲಿ ರಾಜ ಜನಕನಿಗೆ ದೊರೆಯಿತು.

6. ಸೀತಾ ದೇವಿಯನ್ನು ಕಾಡಿನಲ್ಲಿ ವನವಾಸ ಮಾಡುವಾಗ 'ವೈದೇಹಿ' ಎಂದು ಕರೆಯಲಾಗುತ್ತಿತ್ತು ಮತ್ತು ಅವಳು ಭಗವಾನ್ ರಾಮನ ಪ್ರೀತಿಪಾತ್ರಳಾಗಿದ್ದರಿಂದ 'ರಾಮ' ಎಂದು ಕರೆಯಲ್ಪಟ್ಟಳು.

Latest Videos
Follow Us:
Download App:
  • android
  • ios