ಎಲ್ಲೆಡೆ ಅತ್ಯಾಚಾರ, ಮಹಿಳೆಯ ಬದುಕು ನರಕ, ಸ್ಥಿತಿ ಭಯಾನಕ: ಕರಾಳ ಅನುಭವ ಹೇಳಿಕ ಪಾಕ್ ನಟಿ ಆಯೇಷಾ
ಪಾಕಿಸ್ತಾನದ ಸದ್ಯ ಸ್ಥಿತಿ ಅಲ್ಲೋಲಕಲ್ಲೋಲವಾಗಿದೆ. ಆದರೆ ಮಹಿಳೆಯರ ಮೇಲೆ ಆಗುತ್ತಿರುವ ಭಯಾನಕ ಕೃತ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನಟಿ ಆಯೇಷಾ ಓಮರ್.
ಸದಾ ಭಯೋತ್ಪಾದನೆಗೆ ಬೆಂಬಲ ನೀಡುತ್ತಾ, ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ಪಾಕಿಸ್ತಾನದಲ್ಲಿ ಈಗ ಕೋಲಾಹಲ ಸೃಷ್ಟಿಯಾಗಿದೆ. ಆರ್ಥಿಕತೆ ತೀರಾ ಕುಸಿದು ಜನಜೀವನ ಅಸ್ತವ್ಯಸ್ತವಾಗಿದೆ, ಬದುಕು ದುಸ್ತರವಾಗಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರಿವೆ. ಇದು ಒಂದೆಡೆಯಾದರೆ, ಇದೀಗ ಇಲ್ಲಿಯ ಮಹಿಳೆಯರ ಬದುಕು ದನನೀಯವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಖುದ್ದು ಪಾಕ್ ನಟಿ ಆಯೇಷಾ ಓಮರ್ ಬಹಿರಂಗಗೊಳಿಸಿದ್ದಾರೆ. ಪಾಕಿಸ್ತಾನ ಕರಾಳ ಮುಖವನ್ನು ಪಾಕ್ ನಟಿ ಆಯೇಷಾ ಬಿಚ್ಚಿಟ್ಟಿದ್ದು, ತಮ್ಮ ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದಿದ್ದಾರೆ. ಸ್ವಾತಂತ್ರ್ಯ ಮತ್ತು ಸುರಕ್ಷತೆಯು ಇಲ್ಲಿಲ್ಲದ ಮಾನವನ ಮೂಲಭೂತ ಅವಶ್ಯಕತೆಯಾಗಿದೆ. ಆದರೆ ಅದು ಇಲ್ಲಿ ಸಿಗುತ್ತಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನದ ಇನ್ನೊಂದು ಮುಖವನ್ನೂ ಬಯಲು ಮಾಡಿದ್ದಾರೆ.
ನನಗೆ ಇಲ್ಲಿ ಸುರಕ್ಷಿತವಾಗಿದ್ದೇನೆ ಎನ್ನುವ ಭಾವನೆ ಬರುತ್ತಿಲ್ಲ. ಪಾಕಿಸ್ತಾನಲ್ಲಿ ಮಹಿಳೆಯರು ಅನುಭವಿಸುವ ಭಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ರಸ್ತೆಯಲ್ಲಿ ನಡೆಯಲು ಆರಾಮಾಗಿ ಓಡಾಡಲು ಬಯಸುತ್ತೇನೆ. ಆದರೆ ಜೀವನ ಪ್ರತಿ ಕ್ಷಣವೂ ಆತಂಕದಿಂದ ಕೂಡಿರುತ್ತದೆ. ಪ್ರತಿಯೊಬ್ಬ ಮನುಷ್ಯನು ಶುದ್ಧ ಗಾಳಿಗಾಗಿ ಹೊರಗೆ ಹೋಗಬೇಕು. ನಾನು ರಸ್ತೆಗಳಲ್ಲಿ ಸೈಕಲ್ ತುಳಿಯಲು ಬಯಸುತ್ತೇನೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ನಟಿ ಈ ಮಾತನ್ನು ಹೇಳಿದ್ದಾರೆ.
ಇಬ್ಬರು ಪತ್ನಿಯರ ಜೊತೆ ಮಗ ಸೋಹೈಲ್ ಬರ್ತ್ಡೇಗೆ ಬಂದ ಸಲ್ಮಾನ್ ಖಾನ್ ಅಪ್ಪ! ಸಲ್ಲು ಭಾಯಿ ಗರಂ ಆಗಿದ್ದೇಕೆ?
ಇನ್ನೂ ಕೆಲವು ಶಾಕಿಂಗ್ ವಿಷಯವನ್ನೂ ನಟಿ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಮಹಿಳೆಯರು ಎಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಇಲ್ಲಿನ ಪುರುಷರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲಿ ನೋಡಿದ್ರು ಅಪಹರಣ, ಅತ್ಯಾಚಾರ ನಡೆಯುತ್ತಲೇ ಇರುತ್ತದೆ. ಭಯವಿಲ್ಲದೆ ಪಾಕಿಸ್ತಾನದ ಬೀದಿಗಳಲ್ಲಿ ಮುಕ್ತವಾಗಿ ಓಡಾಡಲು ಸಾಧ್ಯವೇ ಇಲ್ಲ. ಮಹಿಳೆಯರ ಭಯ, ಆತಂಕ ಎಂದಿಗೂ ಗೊತ್ತಾಗಲ್ಲ. ಹೊರಗೆ ಹೋಗಿ ಮನೆಗೆ ಸೇರುವ ಮಧ್ಯದಲ್ಲೇ ಏನಾಗುತ್ತದೆಯೋ ಎಂಬ ಭಯವಿರುತ್ತದೆ. ಇಲ್ಲಿರುವ ಮಹಿಳೆಯರು ಪ್ರತಿಕ್ಷಣ ಭಯಪಡುತ್ತಲೇ ಇದ್ದಾರೆ. ದೇಶದಲ್ಲಿ ಬೆಳೆಯುತ್ತಿರುವ ಸ್ತ್ರೀ ಸಮುದಾಯ ಮತ್ತು ಈ ದೇಶದಲ್ಲಿ ಮಹಿಳೆ ಅನುಭವಿಸುವ ಭಯವನ್ನು ಇಲ್ಲಿನ ಪುರುಷರು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ ಎಂದು ನಟಿ ಆರೋಪಿಸಿದ್ದಾರೆ.
ಪ್ರಪಂಚದ ಎಲ್ಲಾ ದೇಶಗಳಲ್ಲಿ ಅಪರಾಧಗಳು ನಡೆಯುತ್ತದೆ. ಆದರೆ ಜನರು ಕನಿಷ್ಠ ರಸ್ತೆಯಲ್ಲಿ ಓಡಾಡಬಹುದು. ಆದರೆ ಪಾಕಿಸ್ತಾನದಲ್ಲಿ ಹತ್ತು ಜನರು ನಿಮ್ಮನ್ನು ಹಿಂಬಾಲಿಸದೇ ಅಥವಾ ಕೆಟ್ಟದಾಗಿ ಮಾತು ಕೇಳದೇ ಹೊರಗೆ ಹೋಗಲು ಸಾಧ್ಯವಿಲ್ಲದ ಸ್ಥಿತಿ ಇದೆ. ನಾನು ಕಾಲೇಜಿನಲ್ಲಿದ್ದಾಗ ಕರಾಚಿಗಿಂತ ಲಾಹೋರ್‌ನಲ್ಲಿ ಹೆಚ್ಚು ಸುರಕ್ಷಿತವಾಗಿರುದ್ದೆ. ತಾನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಆದರೆ ಈಗ ಸ್ಥಿತಿ ಹದಗೆಟ್ಟಿದೆ ಎಂದಿರುವ ನಟಿ, ಆದರೆ ನಾನು ದೇಶವನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ.
ದುಬಾರಿ ಗಿಫ್ಟ್ ಪಡೆದು ತಗ್ಲಾಕ್ಕೊಂಡ ರಾ ರಾ ರಕ್ಕಮ್ಮ ಬೆಡಗಿ: ಲವ್ ಲೆಟರ್ ವಿರುದ್ಧ ಕೋರ್ಟ್ ಮೊರೆ