ಪಾಕ್ ನಟ ಫಾವದ್ ಖಾನ್ ಅಬಿರ್ ಗುಲಾಲ್ ಸಿನಿಮಾ ಹಾಡು ಯೂಟ್ಯೂಬ್‌ನಿಂದ ಡಿಲೀಟ್

Synopsis
ಪಾಕಿಸ್ತಾನದಲ್ಲಿ ಸಿನಿಮಾ ಗಳಿಕೆ ಮಾಡಲು ಫಾವದ್ ಖಾನ್ ನಾಯಕನಾಗಿ, ಬಾಲಿವುಡ್ ನಟಿ ವಾಣಿ ಕಪೂರ್ ನಾಯಕಿಯಾಗಿ ಅಭಿನಯಿಸಿದ ಅಬಿರ್ ಗುಲಾಲ್ ಹಿಂದಿ ಸಿನಿಮಾ ಹಾಡನ್ನೂ ಯೂಟ್ಯೂಬ್ ಡಿಲೀಟ್ ಮಾಡಿದೆ. ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಈ ನಡೆ ತೆಗೆದುಕೊಂಡಿದೆ.
ನವದೆಹಲಿ(ಏ.25) ಬಾಲಿವುಡ್ ಸಿನಿಮಾ ಮಂದಿ ಪಾಕಿಸ್ತಾನ ನಟ ನಟಿಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಹೊಸದೇನಲ್ಲ. ಪ್ರತಿ ಬಾರಿ ಗಡಿ ಸಂಘರ್ಷ, ಪಾಕ್ ಉಗ್ರರ ದಾಳಿಯಾದಾಗ ಒಂದಷ್ಟು ದಿನ ಪಾಕ್ ಕಲಾವಿದರಿಗೆ ನಿಷೇಧ ಹೇರಿ ಮತ್ತೆ ಎಂದಿನಂತೆ ನಡೆಯುತ್ತದೆ. ಇದರಂತೆ ಅಬಿರ್ ಗುಲಾಲ್ ಸಿನಿಮಾ ತಯಾರಾಗಿದೆ, ಬಿಡುಗಡೆಗೂ ಸಜ್ಜಾಗಿದೆ. ಪಾಕಿಸ್ತಾನ ನಟ ಫಾವದ್ ಖಾನ್ ಹಾಗೂ ಬಾಲಿವುಡ್‌ನ ವಾಣಿ ಕಪೂರ್ ಅಭಿನಯಸಿದ ಹಿಂದಿ ಸಿನಿಮಾಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ಪೆಹಲ್ಗಾಮ್ ದಾಳಿಯಿಂದ ಪಾಕಿಸ್ತಾನ ನಟ ನಟಿಯರಿಗೆ ನಿಷೇಧ ಹೇರಬೇಕು ಅನ್ನೋ ಕೂಗು ಹೆಚ್ಚಾಗಿದೆ. ಇತ್ತ ಸಿನಿಮಾ ಬಿಡುಗಡೆ ನಿಷೇಧಿಸಲಾಗಿದೆ. ಇದರ ನಡುವೆ ಅಬಿರ್ ಗುಲಾಲ್ ಸಿನಿಮಾ ಹಾಡೂ ಯೂಟ್ಯೂಬ್ ಡಿಲೀಟ್ ಮಾಡಿದೆ.
ಎರಡು ಹಾಡು ಡಿಲೀಟ್, ಮತ್ತೊಂದು ಹಾಡು ಬಿಡುಗಡೆಯಾಗಲೇ ಇಲ್ಲ
ಈ ತಿಂಗಳ ಆರಂಭದಲ್ಲಿ ಅಬಿರ್ ಗುಲಾಲ್ ಸಿನಿಮಾದ ಖುದಾಯ ಇಷ್ಕ್ ಹಾಗೂ ಅಂಗ್ರೆಜಿ ರಂಗ್ರಸಿಯಾ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಒಂದು ರೊಮ್ಯಾಂಟಿಕ್ ಹಾಡಾಗಿದ್ದರೆ, ಮತ್ತೊಂದು ಡ್ಯಾನ್ಸ್ ನಂಬರ್. ಈ ಎರಡೂ ಹಾಡನ್ನು ಎಪ್ರಿಲ್ 25ಕ್ಕೆ ಯೂಟ್ಯೂಬ್ ತೆಗೆದು ಹಾಕಿದೆ. ಇನ್ನು ಏಪ್ರಿಲ್ 23ರಂದು ಟೈನ್ ಟೈನ್ ಹಾಡು ರಿಲೀಸ್ ಮಾಡಲಾಗುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಅದಕ್ಕೂ ಮೊದಲೇ ಪೆಹಲ್ಗಾಮ್ ಮೇಲೆ ದಾಳಿ ನಡೆದಿತ್ತು. ಹೀಗಾಗಿ ಈ ಹಾಡು ಬಿಡುಗಡೆ ಮುಂದೂಡಲಾಗಿತ್ತು. ಇದೀಗ ಹಾಡು ಡಿಲೀಟ್ ಆಗಿದ್ದರೆ, ಸಿನಿಮಾ ಬ್ಯಾನ್ ಮಾಡಲಾಗಿದೆ.
BREAKING ಬಂಡಿಪೊರ ಎನ್‌ಕೌಂಟರ್, ಲಷ್ಕರ್ ಕಮಾಂಡರ್ ಅಲ್ತಾಫ್‌ಗೆ ಗುಂಡಿಕ್ಕಿದ ಭಾರತೀಯ ಸೇನೆ
ಭಾರತದಲ್ಲಿ ಪಾಕ್ ನಟ ರೋಮ್ಯಾನ್ಸ್, ಪಾಕ್ ಉಗ್ರರ ದಾಳಿ
ಪಾಕಿಸ್ತಾನ ನೆಲದಿಂದ ಬಂದ ಉಗ್ರರು ಹಿಂದೂಗಳ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. 26ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದೀಗ ಅದೇ ನೆಲದಿಂದ ಬಂದ ನಟನ ರೊಮ್ಯಾನ್ಸ್ ಭಾರತೀಯರು ನೋಡಬೇಕಾ? ಆಪ್ತರನ್ನು ಕಳೆದುಕೊಂಡ ಕುಟುಂಬದವರ ಜೊತೆ ನಿಲ್ಲಬೇಕಾ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಹೀಗಾಗಿ ಅಬಿರ್ ಗುಲಾಲ್ ಸಿನಿಮಾಗೆ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ. ನಿರ್ದೇಶಕ ಸಂಘ ಸೇರಿದಂತೆ ಹಲವು ಸಿನಿಮಾ ಫೆಡರೇಶನ್ ಅಬಿರ್ ಗುಲಾಲ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿತ್ತು
ಸಿನಿಮಾದ ಅಧಿಕೃತ ಯೂಟ್ಯೂಬ್ ಖಾತೆಯಿಂದ ಈ ಹಾಡುಗಳನ್ನು ಡಿಲೀಟ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನಿ ಉಗ್ರರು ಸತತವಾಗಿ ದಾಳಿ ಮಾಡುತ್ತಿದಾರೆ. ಇದರ ನಡುವೆ ಪಾಕಿಸ್ತಾನ ನಟ ಹಾಗೂ ಭಾರತೀಯ ನಟಿಯನ್ನು ಇಟ್ಟುಕೊಂಡು ಯಾವ ಸಂದೇಶ ನೀಡುತ್ತೀರಿ ಎಂದು ಹಲವರು ಪ್ರಶ್ನಿಸಿದ್ದಾರೆ. ಮೊದಲು ಉಗ್ರರ ದಾಳಿಗೆ ಆಪ್ತರನ್ನು ಕಳೆದುಕೊಂಡವರ ಆಕ್ರಂದನ ಕೇಳಿ ಎಂದು ಸಲಹೆ ನೀಡಿದ್ದಾರೆ.
ಪಾಕಿಸ್ತಾನಿ ನಟ ಫಾವದ್ ಖಾನ್ ಪೆಹಲ್ಗಾಮ್ ದಾಳಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಾಳಿಯನ್ನು ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಉಗ್ರರ ವಿಚಾರ ಬಂದಾಗ, ಪಾಕಿಸ್ತಾನದ ಮೇಲೆ ಭಾರತ ಆರೋಪ ಮಾಡಿದಾಗ ಇದೇ ಫಾವದ್ ಖಾನ್ ತನಗೆ ಅವಕಾಶ ನೀಡಿದ ಬಾಲಿವುಡ್ ಬದಲು ಪಾಕಿಸ್ತಾನವನ್ನೇ ಡೆಫೆಂಡ್ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಸಿನಿಮಾ ರಿಲೀಸ್ ಆಗಬೇಕಿದ್ದ ಕಾರಣ ಪೆಹಲ್ಗಾಮ್ ದಾಳಿಗೆ ಕಣ್ಣೀರು ಸುರಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಪೆಹಲ್ಗಾಂ ದಾಳಿ ಹಿಂದೆ 26/11 ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸೈಯಿದ್ ಪಾತ್ರ