ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿನ ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರ ಭಾಷಣವನ್ನು ಮಂಗಳವಾರ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದ್ದು, ಟ್ವಿಟ್ಟರ್‌ನಲ್ಲಿ "ಮತ್ತೊಂದು ಹಿಂದೂ ಧ್ವನಿ" ಹತ್ತಿಕ್ಕಲಾಗಿದೆ ಎಂದು ಹೇಳಿದ್ದಾರೆ.
ನವದೆಹಲಿ (ಮೇ 31): ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕಥಾಹಂದರ ಹೊಂದಿರುವ ‘ದ ಕಾಶ್ಮೀರಿ ಫೈಲ್ಸ್’ ಚಿತ್ರ ಬಳಿಕ ಸಾಕಷ್ಟು ಸುದ್ದಿ ಮಾಡಿದ್ದ ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿನ ಕಾರ್ಯಕ್ರಮ ರದ್ದು ಮಾಡಲಾಗಿದ್ದು, ಈ ಬೆನ್ನಲ್ಲೇ ಬೆಂಬಲ ನೀಡುವಂತೆ ಟ್ವಿಟರ್ ಮೂಲಕ ಸೋಮವಾರ ಮನವಿ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಅವರ ಚಲನಚಿತ್ರ ದಿ ಕಾಶ್ಮಿ ಫೈಲ್ಸ್‌ಗೆ ಹೆಸರುವಾಸಿಯಾದ ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮೇ 31 ರಂದು ಭಾಷಣ ಮಾಡಲು ಮಾಡಲು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಆಹ್ವಾನಿಸಲಾಗಿತ್ತು ಎಂದು ವೀಡಿಯೊದಲ್ಲಿ ಹೇಳಿದ್ದಾರೆ.
ಆದಾಗ್ಯೂ, ಈವೆಂಟ್‌ಗೆ ಕೆಲವು ಗಂಟೆಗಳ ಮೊದಲು, ಕಾರ್ಯಕ್ರಮ ತಪ್ಪಾಗಿದೆ ಮತ್ತು ಅವರಿಗೆ ಆತಿಥ್ಯ ನೀಡಲು ಸಾಧ್ಯವಾಗುವುದಿಲ್ಲ ಎಂದು ವಿಶ್ವವಿದ್ಯಾಲಯ ತಿಳಿಸಿದೆ" ಎಂದು ಅವರು ಹೇಳಿದ್ದಾರೆ
“ಇದೆಲ್ಲವನ್ನೂ ಇಮೇಲ್‌ನಲ್ಲಿ ದೃಢೀಕರಿಸಲಾಗಿದೆ ಆದರೆ ಕೆಲವು ಗಂಟೆಗಳ ಹಿಂದೆ, ಅವರು ತಪ್ಪು ಮಾಡಿದ್ದಾರೆ ಎಂದು ಹೇಳಿದರು. ಈ ದಿನ ಇಲ್ಲಿ ಎರಡು ಕಾರ್ಯಕ್ರಮಗಳಿದ್ದು ಮತ್ತು ಅವರು ಇಂದು ನನ್ನನ್ನು ಹೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ. ನನ್ನನ್ನು ಕೇಳದೆ, ಅವರು ಜುಲೈ 1 ಕ್ಕೆ ದಿನಾಂಕವನ್ನು ಬದಲಾಯಿಸಿದ್ದಾರೆ, ಏಕೆಂದರೆ ಆ ದಿನ ಯಾವುದೇ ವಿದ್ಯಾರ್ಥಿ ಇರುವುದಿಲ್ಲ ಮತ್ತು ಕಾರ್ಯಕ್ರಮವನ್ನು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ, ”ಎಂದು ಅವರು ಹೇಳಿದ್ದಾರೆ.
ನನ್ನನ್ನು ಬೆಂಬಲಿಸಿ: “ಹಿಂದೂಫೋಬಿಕ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಹಿಂದೂ ಧ್ವನಿಯನ್ನು ನಿರ್ಬಂಧಿಸಲಾಗಿದೆ. ಅವರು ನನ್ನ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ. ವಾಸ್ತವದಲ್ಲಿ, ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಜನಾಂಗೀಯ ಹತ್ಯೆ ಮತ್ತು ಹಿಂದೂ ವಿದ್ಯಾರ್ಥಿಗಳ ಕಾರ್ಯಕ್ರಮವನ್ನುಯ ರದ್ದುಗೊಳಿಸಿದ್ದಾರೆ. ಸಂಘದ ಅಧ್ಯಕ್ಷರಾಗಿ ಆಯ್ಕೆಯಾದವರು ಪಾಕಿಸ್ತಾನ ಮೂಲದವರಾಗಿದ್ದಾರೆ. ದಯವಿಟ್ಟು ಈ ಅತ್ಯಂತ ಕಷ್ಟಕರವಾದ ಹೋರಾಟದಲ್ಲಿ ನನ್ನನ್ನು ಬೆಂಬಲಿಸಿ ಹಾಗೂ ಇದನ್ನು ಹಂಚಿಕೊಳ್ಳಿ" ಎಂದು ವಿವೇಕ್ ಅಗ್ನಿಹೋತ್ರಿ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಅಲ್ಲದೇ ವಿಶ್ವವಿದ್ಯಾಲಯದ ವಿರುದ್ಧ ಕಾನೂನು ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
“ಅವರು ನನ್ನನ್ನು ಇಸ್ಲಾಮೋಫೋಬಿಕ್ ಎಂದು ಕರೆಯುತ್ತಾರೆ. ಸಾವಿರಾರು ಕಾಶ್ಮೀರಿ ಹಿಂದೂಗಳನ್ನು ಕೊಲ್ಲುವುದು ಹಿಂದೂಫೋಬಿಕ್ ಅಲ್ಲ ಆದರೆ ಸತ್ಯದ ಮೇಲೆ ಚಲನಚಿತ್ರ ಮಾಡುವುದು ಇಸ್ಲಾಮೋಫೋಬಿಕ್, ಹಿಂದೂಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಇದು ಅಲ್ಪಸಂಖ್ಯಾತರ ದಬ್ಬಾಳಿಕೆಯಾಗಿದೆ" ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ಇದನ್ನೂ ಓದಿ:The Kashmir Files; OTTಯಲ್ಲಿ ದಾಖಲೆ ಬರೆದ ಅಗ್ನಿಹೋತ್ರಿ ಸಿನಿಮಾ
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ: ಅವರ ವೀಡಿಯೊದಲ್ಲಿ, ವಿವೇಕ್ ಅಗ್ನಿಹೋತ್ರಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಡೆದ ಒಂದು ಘಟನೆಯನ್ನು ಸಹ ವಿವರಿಸಿದ್ದಾರೆ. ಅಲ್ಲಿ ಅವರ ಭಾಷಣವನ್ನು ಕೊನೆಯ ಕ್ಷಣದಲ್ಲಿ ಚಿತ್ರೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ ಎಂದಿದ್ದಾರೆ. “ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಿದೆ. ಕೆಲವು ಪಾಕಿಸ್ತಾನಿ ಮತ್ತು ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಇದು ಸಂಭವಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ, ನಾನು ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತೇನೆ ಎಂದು ಅವರು ಹೀಗೆ ಮಾಡುತ್ತಾರೆ, ”ಎಂದು ಅವರು ಹೇಳಿದರು.
ಮಾರ್ಚ್ 2022 ರಲ್ಲಿ ಬಿಡುಗಡೆಯಾದ ವಿವೇಕ್ ಅಗ್ನಿಹೋತ್ರಿಯವರ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್, 1990 ರ ದಶಕದಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆಗಳು ಮತ್ತು ವಲಸೆಯ ಮೇಲೆ ಕೇಂದ್ರೀಕೃತವಾಗಿತ್ತು. ಚಿತ್ರವು ತೀವ್ರ ಚರ್ಚೆಗೆ ಗ್ರಾಸವಾಗಿತ್ತು ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸದ್ದು ಮಾಡಿತ್ತು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಚಲನಚಿತ್ರವನ್ನು ಹೊಗಳಿದರು, ಇದು ಸಾಕಷ್ಟು ಟೀಕೆಗಳಿಗೂ ಕಾರಣವಾಗಿತ್ತು. ಈ ತಿಂಗಳ ಆರಂಭದಲ್ಲಿ, "ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಆರೋಪದ ಮೇಲೆ" ಚಲನಚಿತ್ರವನ್ನು ಸಿಂಗಾಪುರದಲ್ಲಿ ನಿಷೇಧಿಸಲಾಯಿತು.
ಇದನ್ನೂ ಓದಿ:ಮುಸ್ಲಿಮರ ಏಕಪಕ್ಷೀಯ ಚಿತ್ರಣ, ಸಿಂಗಾಪುರದಲ್ಲಿ ಕಾಶ್ಮೀರ ಫೈಲ್ಸ್ ಪ್ರದರ್ಶನಕ್ಕೆ ನಿಷೇಧ!
