ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ವಿಡಿಯೋ ರೈಟ್ಸ್‌ಗೆ ಓಟಿಟಿ ವೇದಿಕೆಯೊಂದು 100 ಕೋಟಿ ರೂ. ಆಫರ್ ನೀಡಿದೆ ಎಂದು ವರದಿಯಾಗಿದೆ. ಆದರೆ, ತಮ್ಮ ಖಾಸಗಿ ಬದುಕನ್ನು ಕ್ಯಾಮೆರಾ ಮುಂದೆ ತೆರೆದಿಡಲು ಇಷ್ಟಪಡದ ಈ ಜೋಡಿ, ಈ ಬೃಹತ್ ಮೊತ್ತದ ಆಫರ್ ಅನ್ನು ತಿರಸ್ಕರಿಸಿದೆ ಎನ್ನಲಾಗಿದೆ.

ಇತ್ತೀಚಿಗೆ ಸೆಲೆಬ್ರಿಟಿಗಳ ಮದುವೆ ವಿಡಿಯೋವನ್ನ ಓಟಿಟಿ ವೇದಿಕೆಗಳು ಖರೀದಿ ಮಾಡಿ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಪ್ರದರ್ಶನ ಮಾಡೋದು ಹೊಸ ಟ್ರೆಂಡ್. ಇದಕ್ಕಾಗಿ ಕೋಟಿ ಕೋಟಿ ಹಣ ಕೊಡಲಿಕ್ಕೆ ಓಟಿಟಿಗಳು ಮುಂದೆ ಬರುತ್ವೆ. ಸದ್ಯ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕಲ್ಯಾಣಕ್ಕೆ ಇಂಥದ್ದೇ ಆಫರ್ ಬಂದಿದೆಯಂತೆ. ರಶ್ಮಿಕಾ-ದೇವರಕೊಂಡ ಮ್ಯಾರೇಜ್​ ವಿಡಿಯೋಗೆ ಬರೊಬ್ಬರಿ 100 ಕೋಟಿ ಆಫರ್ ಕೊಟ್ಟಿದೆ OTT ವರ್ಲ್ಡ್.

ವಿಜಯ್ ರಶ್ಮಿಕಾ ಕಲ್ಯಾಣ, 100 ಕೋಟಿ OTT ರೈಟ್ಸ್?

ಯೆಸ್ ಕನ್ನಡದ ಕಿರಿಕ್ ಬೆಡಗಿ, ಆಂಧ್ರದ ಹುಡುಗ ಇದೇ ಫೆಬ್ರುವರಿ 26ನೇ ತಾರೀಖು ಹಸೆಮಣೆ ಏರ್ತಾ ಇರೋ ವಿಷ್ಯ ಗೊತ್ತೇ ಇದೆ. ಅರಮನೆ ನಗರಿ ಉದಯಪುರದಲ್ಲಿ ಈ ರಶ್ಮಿಕಾ ವಿಜಯ್ ಕಲ್ಯಾಣ ನೆರವೇರಲಿದ್ದು, ಈಗಾಗ್ಲೇ ಭರ್ಜರಿ ತಯಾರಿ ನಡೀತಾ ಇದೆ. ಈ ನಡುವೆ ಇವರ ಮದುವೆ ವಿಡಿಯೋವನ್ನ ಶೂಟ್ ಮಾಡಿ ಸ್ಟ್ರೀಮಿಂಗ್ ಮಾಡುವ ರೈಟ್ಸ್‌ಗಾಗಿ ಹಲವು ಓಟಿಟಿಗಳು ಮುಂದೆ ಬಂದಿವೆಯಂತೆ. ಅಷ್ಟೇ ಅಲ್ಲ ಇದಕ್ಕಾಗಿ ಭರ್ಜರಿ ಆಫರ್ ಕೂಡ ಈ ತಾರಾಜೋಡಿಗೆ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ ಓಟಿಟಿ ವೇದಿಕೆಯೊಂದು ಮದುವೆಯನ್ನ ಡಾಕ್ಯೂಮೆಂಟರಿ ರೂಪದಲ್ಲಿ ಪ್ರಸಾರ ಮಾಡೋ ಹಕ್ಕು ಕೊಟ್ರೆ ಬರೊಬ್ಬರಿ 100 ಕೋಟಿ ಕೊಡ್ತಿನಿ ಅಂತ ಆಫರ್ ಕೊಟ್ಟಿದೆಯಂತೆ.

ಓಟಿಟಿಯಲ್ಲಿ ಸೆಲೆಬ್ರಿಟಿ ಕಲ್ಯಾಣ, ಫ್ಯಾನ್ಸ್‌ಗೆ ರಸದೌತಣ!

ಹೌದು ಇತ್ತೀಚಿಗೆ ಹೀಗೆ ಸೆಲೆಬ್ರಿಟಿಗಳ ಮದುವೆ ವಿಡಿಯೋ ರೈಟ್ಸ್‌ನ ಓಟಿಟಿಗಳು ಖರೀದಿ ಮಾಡುತ್ವೆ. ಅವುಗಳನ್ನ ತಮ್ಮ ವೇದಿಕೆಗಳಲ್ಲಿ ಪ್ರಸಾರ ಮಾಡಿ ವೀಕ್ಷಕರಿಂದ ಹಣ ಗಳಿಸುತ್ವೆ. ಸದ್ಯ ಇದೇ ರೀತಿ ರಶ್ಮಿಕಾ-ವಿಜಯ್ ಮದುವೆ ಸಂಭ್ರಮವನ್ನ ಶೂಟ್ ಮಾಡಿ ಫ್ಯಾನ್ಸ್‌ಗೆ ರಸದೌತಣ ಕೊಡೋದಕ್ಕೆ ಓಟಿಟಿಯೊಂದು ಸಜ್ಜಾಗಿದೆ.

ನಯನತಾರಾ ಮದುವೆಗೆ 25ಕೋಟಿ ಕೊಟ್ಟಿದ್ದ ನೆಟ್‌ಫ್ಲಿಕ್ಸ್

2024ರ ನವೆಂಬರ್‌ನಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ನಿರ್ದೇಶಕ ವಿಘ್ನೇಶ್ ಜೊತೆಗೆ ಸಪ್ತಪದಿ ತುಳಿದಿದ್ರು. ಇದರ ವಿಡಿಯೋ ರೈಟ್ಸ್ ನ ನೆಟ್‌ಫ್ಲಿಕ್ಸ್ ಬರೊಬ್ಬರಿ 25 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಸದ್ಯ ಅದು ‘ನಯನತಾರಾ: ಬಿಯಾಂಡ್ ದಿ ಫೇರಿ ಟೈಲ್’ ಅನ್ನೋ ಹೆಸರಿನಲ್ಲಿ ಡಾಕ್ಯುಮೆಂಟರಿ ರೂಪದಲ್ಲಿ ಪ್ರಸಾರ ಆಗ್ತಾ ಇದೆ. ಇದ್ರಲ್ಲಿ ನಯನತಾರಾ ತಮ್ಮ ಸಿನಿಮಾ ಮತ್ತು ವೈಯಕ್ತಿಕ ಬದುಕಿನ ಬಗ್ಗೆ, ಹಿಂದೆ ಆದ ನಂಬಿಕೆ ದ್ರೋಹಗಳ ಬಗ್ಗೆ, ವಿಘ್ನೇಶ್ ಜೊತೆಗೆ ಪ್ರೀತಿ ಹುಟ್ಟಿದ್ದರ ಬಗ್ಗೆ ಕೂಡ ಮಾತನಾಡಿರೋದನ್ನ ನೋಡಬಹುದು.

ಹಾಟ್‌ಸ್ಟಾರ್‌ನಲ್ಲಿದೆ ಹಂಸಿಕಾ ಲವ್ ಶಾದಿ ಡ್ರಾಮಾ!

ಹೌದು ನಟಿ ಹಂಸಿಕಾ ಮದುವೆ ವಿಡಿಯೋ ಕೂಡ ಹಾಟ್‌ಸ್ಟಾರ್‌ನಲ್ಲಿ ನಿಮಗೆ ನೋಡಲಿಕ್ಕೆ ಸಿಕ್ಕುತ್ತೆ. 2022ರ ಡಿಸೆಂಬರ್‌ನಲ್ಲಿ ಉದ್ಯಮಿ ಸೊಹೈಲ್ ಜೊತೆಗೆ ಹಂಸಿಕಾ ಅದ್ಧೂರಿಯಾಗಿ ವಿವಾಹವಾಗಿದ್ರು. ಈ ಮದುವೆಯ ವಿಡಿಯೋ ಜೊತೆಗೆ ಹಂಸಿಕಾ ಪ್ರೇಮಪಯಣದ ಕಥೆ ಇರೋ ಡಾಕ್ಯುಮೆಂಟರಿ ಹಂಸಿಕಾಸ್ ಲವ್ ಶಾದಿ ಡ್ರಾಮಾ ಹೆಸರಲ್ಲಿ ಓಟಿಟಿಯಲ್ಲಿ ನೋಡಲಿಕ್ಕೆ ಲಭ್ಯವಿದೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮದುವೆ ಫೋಟೋಗಳನ್ನ ಪ್ರಕಟಿಸೋದಕ್ಕೆ ದೊಡ್ಡ ಮೊತ್ತಕ್ಕೆ ಅಂತರಾಷ್ಟ್ರೀಯ ಮ್ಯಾಗ್​ಜಿನ್‌ವೊಂದಕ್ಕೆ ಸೇಲ್ ಮಾಡಿದ್ರು. ಕಳೆದ ವರ್ಷ ಮದುವೆಯಾದ ನಾಗಚೈತನ್ಯ-ಶೋಭಿತಾ ಮದುವೆ ವಿಡಿಯೋವನ್ನ ನೆಟ್‌ಫ್ಲಿಕ್ಸ್ 50 ಕೋಟಿ ಕೊಟ್ಟು ಖರೀದಿ ಮಾಡಲಿಕ್ಕೆ ಆಫರ್ ಕೊಟ್ಟಿತ್ತು.

ಆದ್ರೆ ನಾಗಚೈತನ್ಯ - ಶೋಭಿತಾ ಈ ಓಟಿಟಿ ಆಫರ್‌ನ ತಿರಸ್ಕಾರ ಮಾಡಿದ್ರು. ಯಾಕಂದ್ರೆ ಓಟಿಟಿಯವರು ಬರೀ ಮದುವೆ ವಿಡಿಯೋ ಶೂಟ್ ಮಾಡಿಕೊಳ್ಳೋದಕ್ಕೆ ಇಷ್ಟು ದೊಡ್ಡ ಹಣ ಕೊಡಲ್ಲ. ಬದಲಾಗಿ ಆ ಸೆಲೆಬ್ರಿಟಿಗಳ ಹಳೇ ಅಫೇರುಗಳು, ಕಿತ್ತೋದ ಪ್ರೇಮಪ್ರಕರಣಗಳು ಎಲ್ಲವನ್ನೂ ಕೆದಕ್ತಾರೆ. ಆ ಬಳಿಕ ಈ ಲವ್ ಹೇಗಾಯ್ತು. ಮದುವೆ ಹೇಗ್ ನಡೀತು ಅಂತ ತೋರಿಸ್ತಾರೆ. ಸೋ ಒಂದು ರೀತಿ ಖಾಸಗಿ ಬದುಕನ್ನ ಕ್ಯಾಮೆರಾ ಮುಂದೆ ತೆರೆದಿಡೋದಕ್ಕೆ ಓಟಿಟಿಯವರು ಇಷ್ಟು ಹಣ ಕೊಡ್ತಾರೆ ಅಂದ್ರೆ ತಪ್ಪಾಗಲ್ಲ!

100 ಕೋಟಿ ಆಫರ್ ತಿರಸ್ಕರಿಸಿದ ರಶ್ಮಿಕಾ-ವಿಜಯ್?

ಹೌದು ಸದ್ಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕೂಡ ತಮಗೆ ಓಟಿಟಿ ವೇದಿಕೆಯಿಂದ ಬಂದ 100 ಕೋಟಿ ಆಫರ್ ತಿರಸ್ಕಾರ ಮಾಡಿದ್ದಾರಂತೆ. ತಮ್ಮ ಲೈಫ್​ನ ಕ್ಯಾಮೆರಾ ಖುಲ್ಲಂ ಖುಲ್ಲಾ ತೆರೆದಿಡೋದಕ್ಕೆ ಈ ಜೋಡಿ ನೋ ಅಂದಿದೆ. ತಮ್ಮ ಕುಟುಂಬಸ್ಥರು ಮತ್ತು ಆಪ್ತರ ಎದುರು ಮದುವೆ ಆಗ್ತಾ ಇದ್ದು, ಮದುವೆಯನ್ನ ಖಾಸಗಿಯಾಗಿ ಮಾಡಿಕೊಳ್ಳೋದಕ್ಕೆ ನಿರ್ಧಾರ ಮಾಡಿದ್ದಾರೆ.

ಎನಿ ವೇ ಸೆಲೆಬ್ರಿಟಿಗಳ ಮದುವೆಗೆ ಓಟಿಟಿನವರು ಕೋಟಿಗಟ್ಟಳೇ ದುಡ್ಡು ಕೊಡ್ತಾರೆ ಅನ್ನೋದೇನೋ ನಿಜ. ಆದ್ರೆ ಅವರು ಕೊಡುವ ಕೋಟಿಗೆ ಪ್ರೀತಿ, ಪ್ರೇಮ, ಮದುವೆ, ಸಂಬಂಧ ಅನ್ನೋ ಸೂಕ್ಷ್ಮ ಸಂಗತಿಗಳನ್ನೆಲ್ಲಾ ಕ್ಯಾಮೆರಾ ಎದುರು ತೆರೆದಿಟ್ಟು ಬೆತ್ತಲಾಗಬೇಕಾಗುತ್ತೆ. ಅಂತೆಯೇ ಸದ್ಯ ವಿಜಯ್ ದೇವರಕೊಂಡ-ರಶ್ಮಿಕಾ ಈ ಓಟಿಟಿ ಮದುವೆ ಬ್ಯಾಡವೇ ಬ್ಯಾಡ ಅಂದಿದ್ದಾರಂತೆ..!

ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್.