Happy Birthday ಸಂಜಯ್ ದತ್ ಬಾಲಿವುಡ್ ನಟನ ಬುನಿರೀಕ್ಷಿತ ಕೆಜಿಎಫ್ ಪೋಸ್ಟರ್ ರಿಲೀಸ್

ಸೂಪರ್ ಸ್ಟಾರ್ ಸಂಜಯ್ ದತ್ ಅವರ ಜನ್ಮದಿನದ ಆಚರಣೆಗೆ ವಿಶೇಷ ಕಳೆ ಬಂದಿದೆ. ರಾಷ್ಟ್ರದಾದ್ಯಂತದ ಅಭಿಮಾನಿಗಳು ಸಂಜುಗೆ ವಿಶ್ ಮಾಡ್ತಿದ್ದರೆ, ಕೆಜಿಎಫ್ 2 ತಯಾರಕರು ತಮ್ಮ ಎಲ್ಲ ಅಭಿಮಾನಿಗಳಿಗೆ ವಿಶೇಷ ಸರ್ಪೈಸ್ ಕೊಟ್ಟಿದ್ದಾರೆ.

ವರ್ಷದ ಬಹು ನಿರೀಕ್ಷಿತ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ ಹೊಂಬಾಳೆ ಫಿಲ್ಮ್ಸ್ ನಟನ ವಿಶೇಷ ದಿನದಂದು ಅಧೀರ/ ಸಂಜಯ್ ದತ್ ಅವರ ಹೊಸ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ.

ಸಂಜಯ್ ದತ್ ಬರ್ತಡೇಗೆ ಕೆಜಿಎಫ್‌ನಿಂದ ಗಿಫ್ಟ್; ‘ಅಧೀರ’ ಫಸ್ಟ್‌ಲುಕ್ ರಿಲೀಸ್

ಡಾರ್ಕ್ ಕಲರ್‌ನ ಈ ಪೋಸ್ಟರ್‌ನಲ್ಲಿ ಸಂಜು ಕೆಜಿಎಫ್ ಲುಕ್ ರಿವೀಲ್ ಆಗಿದ್ದು, ಸಖತ್ ರೆಸಪಾನ್ಸ್ ಸಿಕ್ಕಿದೆ. ನಟನ ಹೊಸ ನೋಟಕ್ಕೆ ಎಲ್ಲೆಡೆಯಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Scroll to load tweet…

ಪ್ರಶಾಂತ್ ನೀಲ್ ನಿರ್ದೇಶಿಸಿದ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕೆಜಿಎಫ್ 2 ಬಗ್ಗೆ ದೇಶಾದ್ಯಂತ ಕುತೂಹಲ ಹೆಚ್ಚಾಗಿದ್ದು ಈ ಚಿತ್ರದಲ್ಲಿ ರವೀನಾ ಟಂಡನ್ ಜೊತೆಗೆ ಪ್ಯಾನ್-ಇಂಡಿಯನ್ ಸೂಪರ್ ಸ್ಟಾರ್ ಯಶ್ ಪ್ರಮುಖ ಪಾತ್ರದಲ್ಲಿದ್ದಾರೆ.