Asianet Suvarna News Asianet Suvarna News

ಸಾಯುವ ಮುನ್ನ ಪತ್ರ ಬರೆದಿದ್ರಾ ತುನಿಷಾ ಶರ್ಮಾ..? ಸೆಟ್‌ನಲ್ಲಿ ಸಿಕ್ಕ ಕಾಗದದಲ್ಲಿ ಬರೆದಿದ್ದು ಹೀಗೆ..!

ತುನಿಶಾ ಮತ್ತು ಶೀಜಾನ್‌ ಇಬ್ಬರೂ ಈ ಟಿವಿ ಶೋನಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಈ ಮಧ್ಯೆ, ತುನಿಶಾ ಮೃತಪಟ್ಟ ದಿನ, ಮೇಕಪ್ ರೂಮ್‌ನಲ್ಲಿ ಇಬ್ಬರೂ 15 ನಿಮಿಷಗಳ ಸಂಭಾಷಣೆ ನಡೆಸಿದ್ದರು. ನಂತರ, ಇಬ್ಬರೂ ಉದ್ರೇಕಗೊಂಡಿದ್ದರು ಎಂದೂ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ.

note recovered from set where tv actor tunisha sharma died sheezan mohammed khan ash
Author
First Published Dec 29, 2022, 2:51 PM IST

ನಟಿ (Actress) ತುನಿಶಾ ಶರ್ಮಾ (Tunisha Sharma) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಸೆಟ್‌ನಲ್ಲಿ (Set) ತುನಿಶಾ ಶರ್ಮಾ ಬರೆದಿದ್ದಾರೆ ಎನ್ನಲಾದ ಪತ್ರ ಸಿಕ್ಕಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಮಹಾರಾಷ್ಟ್ರದ (Maharashtra) ಟಿವಿ ಕಾರ್ಯಕ್ರಮವೊಂದರ ಸೆಟ್‌ನಲ್ಲಿ ನಟಿ ಕಳೆದ ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಟಿವಿ ಶೋ 'ಆಲಿ ಬಾಬಾ: ದಸ್ತಾನ್-ಇ-ಕಾಬೂಲ್'  (Ali Baba: Dastaan - e - Kabul) ಸೆಟ್‌ನಲ್ಲಿ ಮೇಕಪ್ ರೂಮ್‌ನಿಂದ (Makeup Room) "ನನ್ನನ್ನು ಸಹ-ನಟನಾಗಿ ಹೊಂದಲು ಅವನು ಆಶೀರ್ವದಿಸಲ್ಪಟ್ಟಿದ್ದಾನೆ’’ ಎಂದು ಪತ್ರವೊಂದರಲ್ಲಿ ನೋಟ್‌ ದೊರೆತಿರುವುದಾಗಿ ವಸಾಯ್ ನ್ಯಾಯಾಲಯಕ್ಕೆ ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.  

ಅಲ್ಲದೆ, ತುನಿಶಾ ಶರ್ಮಾ ಮತ್ತು ಆಕೆಯ ಮಾಜಿ ಬಾಯ್‌ಫ್ರೆಂಡ್‌ ಶೀಜಾನ್ ಮೊಹಮ್ಮದ್ ಖಾನ್ (Sheezan Mohammed Khan) ಅವರ ಹೆಸರನ್ನು ಸಹ ಆ ಕಾಗದದ ಮೇಲೆ ಬರೆಯಲಾಗಿದೆ. ತುನಿಶಾ ಮತ್ತು ಶೀಜಾನ್‌ ಇಬ್ಬರೂ ಈ ಟಿವಿ ಶೋನಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಈ ಮಧ್ಯೆ, ತುನಿಶಾ ಮೃತಪಟ್ಟ ದಿನ, ಮೇಕಪ್ ರೂಮ್‌ನಲ್ಲಿ ಇಬ್ಬರೂ 15 ನಿಮಿಷಗಳ ಸಂಭಾಷಣೆ ನಡೆಸಿದ್ದರು. ನಂತರ, ಇಬ್ಬರೂ ಉದ್ರೇಕಗೊಂಡಿದ್ದರು ಎಂದೂ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ.

ಇದನ್ನು ಓದಿ: Tunisha Sharma Suicide: ಆತ್ಮಹತ್ಯೆ ಮಾಡಿಕೊಳ್ಬೇಕು ಅಂತ ಅನಿಸೋದ್ಯಾಕೆ ?

ಇನ್ನು, ಶೀಜಾನ್‌ ಫೋನ್‌ನಿಂದ ತುನಿಶಾ ಹಾಗೂ ಮಾಜಿ ಬಾಯ್‌ಫ್ರೆಂಡ್‌ ನಡುವಿನ ವಾಟ್ಸಾಪ್‌ ಚಾಟ್‌ಗಳ ಸುಮಾರು 250 ಪುಟಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದನ್ನು ಮತ್ತಷ್ಟು ವಿಶ್ಲೇಷಿಸಲಾಗುವುದು ಎಂದೂ ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ. ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಳ್ಳುವ 15 ದಿನಗಳ ಮುನ್ನ ಅವರಿಬ್ಬರೂ ಬ್ರೇಕಪ್‌ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. 

ಈ ನಡುವೆ ಸೀಕ್ರೆಟ್‌ ಗರ್ಲ್‌ಫ್ರೆಂಡ್‌ ಜತೆಗೆ  ಶೀಜಾನ್‌ನ ಫೋನ್‌ನಿಂದ ಅಳಿಸಲಾದ ವಾಟ್ಸಾಪ್ ಸಂಭಾಷಣೆಯನ್ನು ಸಹ ರಿಕವರ್‌ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಸಮಗ್ರ ತನಿಖೆಯ ಅಗತ್ಯವಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಆದರೆ, ಶೀಜನ್ ತನಿಖಾಧಿಕಾರಿಗಳಿಗೆ ಸಹಕರಿಸುತ್ತಿಲ್ಲ ಎಂದೂ ಪೊಲೀಸ್‌ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ: 15 ದಿನಗಳ ಹಿಂದೆ ಬ್ರೇಕಪ್; ಕಿರುತೆರೆ ನಟಿ ತುನಿಷಾ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್‌

20 ವರ್ಷದ ನಟಿ ತುನಿಶಾ ಶರ್ಮಾ ಶೂಟಿಂಗ್ ವೇಳೆ ಟೀ ವಿರಾಮದ ನಂತರ ಸೆಟ್‌ನಲ್ಲಿರುವ ಟಾಯ್ಲೆಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶೂಟಿಂಗ್ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಆಸ್ಪತ್ರೆಗೆ ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಬಳಿಕ, ತುನಿಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಶೀಜಾನ್ ಖಾನ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ಆತ ಡ್ರಗ್ಸ್‌ ಸೇವಿಸುತ್ತಿದ್ದ ಮತ್ತು ಹಲವಾರು ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದ ಎಂದೂ ಮೃತ ನಟಿ ತುನಿಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಆರೋಪಿಸಿದ್ದಾರೆ.

ಇನ್ನೊಂದೆಡೆ, ನಟ ಹಾಗೂ ಆರೋಪಿ ಶೀಜಾನ್‌ ಖಾನ್‌ ಅವರ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದ್ದು,. ನಟನ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿ ಮಹಾರಾಷ್ಟ್ರ ಪೊಲೀಸರು ವಸಾಯ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Tunisha Sharma 20 ವರ್ಷಕ್ಕೆ ಬದುಕು ಅಂತ್ಯಗೊಳಿಸಿದ ನಟಿ, ಕಾರಣ ನಿಗೂಢ!

Follow Us:
Download App:
  • android
  • ios