ಕಡಿಮೆ ಅವಧಿಯಲ್ಲಿ ಹೆಚ್ಚು ಪಾಪ್ಯುಲಾರಿಟಿ ಪಡೆದ ಗಾಯಕರಲ್ಲಿ ನೇಹಾ ಕಕ್ಕರ್ ಒಬ್ಬರು. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಾಲಿವುಡ್‌ನಲ್ಲಿ ಟಾಪ್ ಸಿಂಗರ್ ಸ್ಥಾನ ತಲುಪಿದ ನೇಹಾ ಜೀವನ ಸ್ಫೂರ್ಥಿದಾಯಕವೂ ಹೌದು. ಇದೀಗ ಕೆಜಿಎಫ್ ಗಾಯಕಿಯನ್ನು ಡ್ಯಾನ್ಸರ್ ನೋರಾ ಹೊಗಳಿದ್ದಾರೆ.

ನೇಹಾ ಕಕ್ಕರ್ ಬಾಲಿವುಡ್‌ನ ಕೆಲವು ಜನರೊಂದಿಗೆ ಸ್ಪೆಷಲ್ ಬಾಂಡಿಂಗ್ ಇಡ್ಕೊಂಡಿದ್ದಾರೆ. ಹಾಗೇ ನೋರಾ ಫತೇಹಿ ಮತ್ತು ನೇಹಾ ಕೂಡಾ ಒಳ್ಳೆಯ ಫ್ರೆಂಡ್ಸ್. ದಿಲ್‌ಬರ್, ಗರ್ಮೀ, ಓ ಸಾಕಿ ಸಾಕಿಯಂತಹ ಟಾಪ್ ಹಿಟ್ ಹಾಡುಗಳನ್ನು ಕೊಟ್ಟಿದೆ ಈ ಕಾಂಬಿನೇಷನ್.

ಕಳೆದ 2 ವರ್ಷದ ತನಕ ಕನ್ನಡ ಫಿಲ್ಮ್ ಇಂಡಸ್ಟ್ರಿಯನ್ನು ಯಾರೂ ಕೇರ್ ಮಾಡ್ತಿರ್ಲಿಲ್ಲ ಎಂದ ಖ್ಯಾತ ನಿರ್ದೇಶಕ

ನೇಹಾ ಕೆಲಸವನ್ನು ಹೊಗಳಿದ ನೋರಾ ಫತೇಹಿ ಈಗ ಸುದ್ದಿಯಾಗಿದ್ದಾರೆ. ನೇಹಾ ಇಲ್ಲದೆ ಮ್ಯೂಸಿಕ್ ಇಂಡಸ್ಟ್ರಿ ಏನೇನೂ ಅಲ್ಲ, ಆಕೆ ಹಾಡುವ ರೀತಿಯಲ್ಲಿಯೇ ಏನೋ ಜಾದೂ ಇದೆ ಎಂದು ನೋರಾ ನೇಹಾಳನ್ನು ಹೊಗಳಿದ್ದರು.

ನೇಹಾ ಕಕ್ಕರ್  ಯೂಟ್ಯೂಬ್‌ನಿಂದ ಡೈಮಂಡ್ ಅವಾರ್ಡ್ ಪಡೆದುಕೊಂಡಿದ್ದಾರೆ. ತಮ್ಮ ಚಾನೆಲ್‌ನಲ್ಲಿ 10 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಪಡೆದ ನಂತರ ನಟಿ ಯೂಟ್ಯೂಬ್ ನೀಡೋ ಈ ಅವಾರ್ಡ್ ಪಡೆದುಕೊಂಡಿದ್ದಾರೆ. ಈ ನಂತರ ಭಾರತದಲ್ಲಿ ಈ ಪ್ರೆಸ್ಟೀಜಿಯಸ್ ಅವಾರ್ಡ್ ಪಡೆದ ಏಕೈಕ ಗಾಯಕಿಯಾಗಿದ್ದಾರೆ ನೇಹಾ.