ಕಳೆದ 2 ವರ್ಷದ ತನಕ ಕನ್ನಡ ಫಿಲ್ಮ್ ಇಂಡಸ್ಟ್ರಿಯನ್ನು ಯಾರೂ ಕೇರ್ ಮಾಡ್ತಿರ್ಲಿಲ್ಲ ಎಂದ ಖ್ಯಾತ ನಿರ್ದೇಶಕ

ಕಳೆದ ಎರಡು ವರ್ಷದ ತನಕ ಬಾಲಿವುಡ್ ಮಾತ್ರವಲ್ಲ, ಸೌತ್ ಸಿನಿಮಾ ಇಂಡಸ್ಟ್ರಿಯೇ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಸೀರಿಯಸ್ ಆಗಿ ಪರಿಗಣಿಸಿರಲಿಲ್ಲ ಎಂದ ಖ್ಯಾತ ನಿರ್ದೇಶಕ

Until two years ago no one took Kannada film industry seriously says Ram Gopal Varma dpl

ಕಳೆದ ಎರಡು ವರ್ಷಗಳ ವರೆಗೂ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ ಎಂದು ಖ್ಯಾತ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಬಗ್ಗೆ ನಿರ್ದೇಶಕ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದ ರಾಮ್ ಗೋಪಾಲ್ ವರ್ಮಾ ಹೇಗೆ ಕಳೆದ ಎರಡು ವರ್ಷದ ಮುನ್ನ ಕನ್ನಡ ಸಿನಿಮಾ ಇಂಡಸ್ಟ್ರಿ ಸೀರಿಯಸ್ ಆಗಿ ಯಾರೂ ಪರಿಗಣಿಸಿರಲಿಲ್ಲ ಮತ್ತು ನಂತರ ಈ ಚಿತ್ರಣ ಹೇಗೆ ಬದಲಾಯ್ತು ಎಂಬುದನ್ನು ತಿಳಿಸಿದ್ದಾರೆ.

ಪ್ರಭಾಸ್ ಜತೆ ಯಶ್.. ನೀಲ್ ಸಹ ಇದ್ದಾರೆ? ಏನ್ ಹೊಸ ಪ್ರಾಜೆಕ್ಟು?

ಕಳೆದ ಎರಡು ವರ್ಷಗಳ ತನಕ ಬಾಲಿವುಡ್ ಮಾತ್ರವಲ್ಲ, ಸೌತ್ ಇಂಡಸ್ಟ್ರಿಯೇ ಕನ್ನಡ ಚಿತ್ರರಂಗವನ್ನು ಗಣನೆಗೇ ತೆಗೆದುಕೊಂಡಿರಲಿಲ್ಲ. ಅದನ್ನು ವರ್ಲ್ಡ್ ಮ್ಯಾಪ್‌ನಲ್ಲಿ ತಂದಿದ್ದೀರಿ ಎಂದು ಕುಡೋಸ್ ಎಂದು ಹೊಗಳಿ ಪ್ರಶಾಂತ್ ನೀಲ್ & ಯಶ್‌ಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಬಹಳಷ್ಟು ಯಶ್ ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡಿದ್ದಾರೆ.

ಇನ್ನೂ ಬಳಷ್ಟು ಜನರು ಈ ಹೊಗಳುವಿಕೆ ಜನರಲ್ ಆಗಿರಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 1970 ಮತ್ತು 80 ರ ದಶಕದ ಸುವರ್ಣ ಯುಗ, ಕನ್ನಡ ಚಲನಚಿತ್ರಗಳು ದೇಶ ಮತ್ತು ಪ್ರಪಂಚದ ಎಲ್ಲೆಡೆ ಇದಕ್ಕೆ ಬಹಳಷ್ಟು ಖ್ಯಾತಿ ಇತ್ತು ಎಂದೂ ಕಮೆಂಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios