ಅಮೆರಿಕದ ಸಿನಿಮಾ ನೋಮಾಡ್ಲ್ಯಾಂಡ್ ಇತ್ತೀಚೆಗೆ ನಡೆದ ಬಾಫ್ಟಾ ಚಲನಚಿತ್ರ ಪ್ರಶಸ್ತಿಗಳಲ್ಲಿ ಭರ್ಜರಿ ಜಯಗಳಿಸಿದೆ. ಚೀನಾದ ನಿರ್ದೇಶಕ ಕ್ಲೋಯ್ ಝಾವೋ ಅವರ ಸಿನಿಮಾ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಿರ್ದೇಶಕ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಲಂಡನ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳಾ ನಿರ್ದೇಶಕರ ಸ್ಟ್ರಾಂಗ್ ಪ್ರದರ್ಶನವನ್ನು ಕಂಡಿದೆ. ಬ್ರಿಟಿಷ್ ಅಕಾಡೆಮಿ ವೈವಿಧ್ಯತೆಯನ್ನು ಸುಧಾರಿಸಲು ಪ್ರಯತ್ನಿಸಿದ್ದು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಾಲ್ಕು ಮಹಿಳೆಯರಲ್ಲಿ ಝಾವೋ ಒಬ್ಬರು.

ಇನ್ನೂ ಹೆಚ್ಚು ಮಕ್ಕಳ ಹೆರದಂತೆ ಅಮ್ಮಂಗೆ ಹೇಳಿ: ಬೀದಿಬದಿ ಮಕ್ಕಳಿಗೆ ರಾಖಿ ಮಾತು

ಬಫ್ಟಾ ಕಾರ್ಯಕ್ರಮದಲ್ಲಿ ಭಾರತೀಯ ಸಿನಿಮಾ ತಾರೆಯರಾದ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಅವರುಗಳಿಗೆ ಗೌರವ ಸಲ್ಲಿಸಲಾಗಿದೆ. ಪ್ರಿಯಾಂಕಾ ಚೋಪ್ರಾ ಅವರ 'ದಿ ವೈಟ್ ಟೈಗರ್' ಸಿನಿಮಾ ಬಫ್ಟಾದಲ್ಲಿ ಸ್ಪರ್ಧೆ ಕೊಟ್ಟಿತ್ತು. ಆದರೆ ಯಾವುದೇ ಪ್ರಶಸ್ತಿ ದೊರೆತಿಲ್ಲ.

ನಟ ಆದರ್ಶ್ ಗೌರವ್ ಅವರು ಅತ್ಯುತ್ತಮ ನಟ ವಿಭಾಗದ ಅಂತಿಮ ಸುತ್ತಿನ ತನಕ ಆಯ್ಕೆ ಆಗಿದ್ದರು. ಆದರೆ 'ದಿ ಫಾದರ್' ಸಿನಿಮಾದ ನಟ ಆಂಥೊನಿ ಹಾಪ್ಕಿನ್ಸ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.