ಸಾಯಿ ಪಲ್ಲವಿ ನಂಬರ್ ಇದ್ರೂ ಕಾಲ್ ಮಾಡೋಕೆ ಭಯ: ನಟ ಗುಲ್ಶನ್ ದೇವಯ್ಯ
ಬಹಿರಂಗವಾಗಿ ನಟಿ ಸಾಯಿ ಪಲ್ಲವಿ ಮೇಲೆ ಕ್ರಶ್ ಇದೆ ಎಂದು ಒಪ್ಪಿಕೊಂಡ ನಟ ಗುಲ್ಶನ್ ದೇವಯ್ಯ... ಮದುವೆ ಪ್ರಪೋಸಲ್ ರೆಡಿನಾ ಎಂದ ನೆಟ್ಟಿಗರು...
ಬಾಲಿವುಡ್ ಅದ್ಭುತ ನಟ ಗುಲ್ಶನ್ ದೇವಯ್ಯ ಸದ್ಯ ಸಿನಿಮಾ ಕೆಲಸ ಹಾಗೂ ಸಿಂಗಲ್ ಲೈಫ್‌ನ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಡೇಟಿಂಗ್, ರಿಲೇಶನ್‌ಶಿಪ್ ಆಂಡ್ ಮ್ಯಾರೇಜ್‌ಗೆ ರೆಡಿಯಾಗಿರುವ ಗುಲ್ಶನ್ ಯಾವುದಕ್ಕೂ ಅರ್ಜೆಂಟ್ ಇಲ್ಲ ಲೈಫ್‌ನ ಕೂಲ್ ಆಗಿ ನಡೆಸಿಕೊಂಡು ಹೋಗುತ್ತೀನಿ ಎಂದಿದ್ದಾರೆ.
ಸಿಂಗಲ್ ಮ್ಯಾನ್ ಗುಲ್ಶನ್ ದೇವಯ್ಯಗೆ ಯಾರ ಮೇಲೆ ಕ್ರಶ್ ಇದೆ ಎಂದು ಪ್ರಶ್ನೆ ಮಾಡಿದಾಗ 'ನನಗೆ ನಟಿ ಸಾಯಿ ಪಲ್ಲವಿ ಮೇಲೆ ತುಂಬಾ ಕ್ರಶ್ ಆಗಿದೆ. ತುಂಬಾ ತಿಂಗಳುಗಳಿಂದ ಈ ಕ್ರಶ್ ಇದೆ. ಆಕೆ ನಂಬರ್ ಕೂಡ ನನ್ನ ಬಳಿ ಇದೆ. ಆದರೆ ಆಕೆಯನ್ನು ಸಂಪರ್ಕಿಸುವ ಧೈರ್ಯ ಮಾಡಿಲ್ಲ. ನನ್ನ ಪ್ರಕಾರ ಆಕೆ ಅದ್ಭುತ ನಟಿ ಹಾಗೂ ಡ್ಯಾನ್ಸರ್. ಇದಕ್ಕಿಂತ ಹೆಚ್ಚಿಗೆ ಏನೂ ಅಭಿಪ್ರಾಯವಿಲ್ಲ. ನನ್ನ ಪ್ರಕಾರು ಇದು ಕೇವಲ ಕ್ರಶ್ ಮಾತ್ರ. ಕೆಲವೊಮ್ಮೆ ಆಕೆ ಮೇಲೆ ತುಂಬಾ ಇಷ್ಟವಾಗುತ್ತದೆ. ಆಕೆ ಒಳ್ಳೆ ಕಲಾವಿದೆ ಆಗಿರುವ ಕಾರಣ ಒಮ್ಮೆಯಾದರೂ ಜೀವನದಲ್ಲಿ ಆಕೆ ಜೊತೆ ಕೆಲಸ ಮಾಡಬೇಕು. ನನ್ನ ಜೊತೆ ನಟಿಸುವುದಕ್ಕೆ ಅಕೆ ಕೂಡ ಖುಷಿಯಾಗಿರುತ್ತಾಳೆ ಎಂದು ಭಾವಿಸಿರುವೆ' ಎಂದು ಇ ಟೈಮ್ಸ್ ಸಂದರ್ಶನದಲ್ಲಿ ಗುಲ್ಶನ್ ದೇವಯ್ಯ ಮಾತನಾಡಿದ್ದಾರೆ.
ನಾನು ಮೇಕಪ್ ಹಾಕೋದು ಯಾರಿಗೂ ಗೊತ್ತಿಲ್ಲ, ಎಡಿಟ್ ಮಾಡುವಾಗ ಪಿಂಪಲ್ ಕಾಣಿಸುತ್ತದೆ: ಸಾಯಿ ಪಲ್ಲವಿ
'ಮುಂದೆ ನನ್ನ ಜೀವನ ಹೇಗೆ ಅನ್ನೋದು ನನಗೆ ಗೊತ್ತಿಲ್ಲ. ಸಂಗಾತಿ ಸಿಗಬೇಕು ಜೀವನ ನಡೆಯಬೇಕು ಅಂದರೆ ಸಮಯ ಹೇಗಿದ್ದರೂ ಸಿಗುತ್ತಾರೆ. ಒಳ್ಳೆ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಯಾರು ಬೇಡ ಎನ್ನುತ್ತಾರೆ? ಯಾ ಜೊತೆ ನಟಿಸಬೇಕು ಎಂದು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ' ಎಂದು ಗುಲ್ಶನ್ ಹೇಳಿದ್ದಾರೆ.
ಹಿಂದಿ ಸಿನಿಮಾಗಳಲ್ಲಿ ನಟಿಸುವ ಗುಲ್ಶನ್ ದೇವಯ್ಯ ತಮಿಳು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ ಎಂದು ಅನೇಕರಿಗೆ ಗೊತ್ತಿಲ್ಲ. 'ತಮಿಳು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತಾ ಒಪ್ಪಿಕೊಳ್ಳುವೆ. ಒಳ್ಳೆ ಕಥೆಗಳನ್ನು ಕೇಳಬೇಕು ಚರ್ಚೆ ಮಾಡಬೇಕು ಅದನ್ನು ಒಪ್ಪಿಕೊಳ್ಳಬೇಕು ಅನ್ನೋ ಆಸೆ ತುಂಬಾ ಇದೆ. ಅದರಲ್ಲೂ ಸಾಯಿ ಜೊತೆ ಅವಕಾಶ ಸಿಕ್ಕರೆ ಇನ್ನು ಖುಷಿ ಪಡುವೆ' ಎಂದಿದ್ದಾರೆ ಗುಲ್ಶನ್.
ಅಪ್ಪನೇ ಹೆಂಡ್ತಿನ ಸರಿ ನೋಡ್ಕೊಂಡಿಲ್ಲ ಅಂದ್ರೆ ಮಗ ಸರಿ ಇರ್ತಾನಾ?: ದೌರ್ಜನ್ಯದ ಬಗ್ಗೆ ಸಾಯಿ ಪಲ್ಲವಿ ಮಾತು
ಗುಲ್ಶನ್ ದೇವಯ್ಯ ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಪ್ರತಿಷ್ಠಿತ NIFT ಸಂಸ್ಥೆಯಲ್ಲಿ ಪದವಿ ಮುಗಿಸಿದ್ದಾರೆ. ಪದವಿ ನಂತರ ಸುಮಾರು 10 ವರ್ಷಗಳ ಕಾಲ ಫ್ಯಾಷನ್ ಲೋಕದಲ್ಲಿ ಕೆಲಸ ಮಾಡಿದ್ದಾರೆ. ಇಂಗ್ಲಿಷ್ ಥಿಯೇಟರ್ ಸೇರಿಕೊಂಡು ಸಣ್ಣ ಪುಟ್ಟ ಮಾಡುವ ಮೂಲಕ ನಟನೆ ಕಲಿತು ಮುಂಬೈಗೆ ಪ್ರಯಾಣ ಮಾಡಿ ಸಿನಿಮಾ ಅವಕಾಶ ಪಡೆಯುತ್ತಾರೆ. 2012ರಲ್ಲಿ ಗ್ರೀಸ್‌ನ ನಟಿ ಕಲ್ಲಿರೊಯ್ ಟಿಜಿಯಾಫೆಟಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಆದರೆ ಸಣ್ಣ ಪುಟ್ಟ ಕಾರಣಗಳಿಂದ 2020ರಲ್ಲಿ ವಿಚ್ಛೇದನ ಪಡೆಯುತ್ತಾರೆ. ಸುಮಾರು 20 ಹಿಂದಿ ಸಿನಿಮಾಗಳಲ್ಲಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ 6 ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. 'ಮರ್ದ್ ಕೋ ದರ್ದ್ ನಹಿ ಹೋತಾ' ಚಿತ್ರಕ್ಕೆ ಸಪೋರ್ಟಿ ರೂಲ್ ಸ್ಕ್ರೀನ್ ಅವಾರ್ಡ್ಸ್ ಪಡೆದುಕೊಂಡಿದ್ದಾರೆ.