ಟಾಲಿವುಡ್ ನಟ ನಿತಿನ್‌ನ ಈ ವರ್ಷ ಯುವ ನಿರ್ದೇಶಕ ವೆಂಕಿ ಕುಡುಮುಲ ನಿರ್ದೇಶನದ ಭೀಷ್ಮದಿಂದ ಆರಂಭವಾಗಿತ್ತು. ಇದು ಸಕ್ಸಸ್‌ಫುಲ್ ಸಿನಿಮಾ ಆಗಿತ್ತು. ಇತ್ತೀಚೆಗಷ್ಟೇ ಸೌತ್ ಸ್ಟಾರ್ ಪ್ರಭಾಸ್ ತಮ್ಮ ಜಿಮ್ ಟ್ರೈನರ್‌ಗೆ ಲಕ್ಷುರಿ ಕಾರ್ ಗಿಫ್ಟ್ ಮಾಡಿದ್ರು. ಈಗ ನಟ ನಿತಿನ್ ಕೂಡಾ ತಮ್ಮ ನಿರ್ದೇಶಕ ವೆಂಕಿಗೆ ಕಾರ್ ಗಿಫ್ಟ್ ಮಾಡಿದ್ದಾರೆ.

ಚಲೋ ಸಿನಿಮಾ ಮೂಲಕ ನಿರ್ದೇಶಕನಾಗಿ ಕಾಣಿಸಿಕೊಂಡ ವೆಂಕಿ ಭೀಷ್ಮ ಮೂಲಕ ಸಖತ್ ಸೌಂಡ್ ಮಾಡಿದ್ರು. ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ಸೆ.08ರಂದು ಬರ್ತ್‌ಡೇ ಆಚರಿಸಿದ ವೆಂಕಿಗೆ ಅನಿರೀಕ್ಷಿತ ಲಕ್ಷುರಿ ಗಿಫ್ಟ್ ಸಿಕ್ಕಿದೆ. ನಟ ನಿತಿನ್ ವೆಂಕಿಗೆ ಲಕ್ಷುರಿ ರೇಂಜ್ ರೋವರ್ ಗಿಫ್ಟ್ ಮಾಡಿದ್ದಾರೆ.

ಜಿಮ್ ಟ್ರೈನರ್‌ಗೆ ಪ್ರಭಾಸ್ ನೀಡಿದ 89 ಲಕ್ಷ ರೂ. ಬೆಲೆಯ ರೇಂಜ್ ರೋವರ್ ಕಾರಿನ ವಿಶೇಷತೆ ಇಲ್ಲಿದೆ

ಖುಷಿಯನ್ನು ಹಂಚಿಕೊಂಡ ನಿರ್ದೇಶಕ ವೆಂಕಿ, ಥ್ಯಾಂಕ್ಸ್ ಹೇಳಿದ್ದಾರೆ. ಬೆಸ್ಟ್ ಪರ್ಸನ್ ಜೊತೆ ಬೆಸ್ಟ್ ಸಿನಿಮಾ ಮಾಡಿದಾಗ, ಬೆಸ್ಟ್ ಘಟನೆಗಳೇ ನಡೆಯುತ್ತೆ. ಈ ಬರ್ತ್‌ಡೇ ಗಿಫ್ಟ್‌ಗೆ ಧನ್ಯವಾದಗಳು ನಿತಿನ್ ಅಣ್ಣ ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ವೆಂಕಿ ಸಿನಿಮಾ ನಿರ್ದೇಶನದ ರೀತಿಯನ್ನು ನಿತಿನ್ ಸಂದರ್ಶನವೊಂದರಲ್ಲಿ ಹೊಗಳಿದ್ದರು. ಭೀಷ್ಮ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ನಟ ನಿತಿನ್‌ನ ಚಾರ್ಮ್ ಮರಳಿ ತಂದ ಸಿನಿಮಾ ಎಂದೂ ಬಹಳಷ್ಟು ಜನ ಕಮೆಂಟ್ ಮಾಡಿದ್ದರು.