ಜಿಮ್ ಟ್ರೈನರ್‌ಗೆ ಪ್ರಭಾಸ್ ನೀಡಿದ 89 ಲಕ್ಷ ರೂ. ಬೆಲೆಯ ರೇಂಜ್ ರೋವರ್ ಕಾರಿನ ವಿಶೇಷತೆ ಇಲ್ಲಿದೆ
ಕೊರೋನಾ ವೈರಸ್ ಕಾರಣ ಎಲ್ಲಾ ಜಿಮ್ ಸೆಂಟರ್‌ಗಳನ್ನು ಮುಚ್ಚಲಾಗಿದೆ. ಬಹುತೇಕ ಜಿಮ್ ಮಾಲೀಕರು, ಟ್ರೈನರ್‌ಗಳು ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಆದರೆ ಲಕ್ಷ್ಮಣ ರೆಡ್ಡಿ ಮುಖದ ಸಂತಸ ಹೇಳತೀರದು. ಕುಟುಂಬಕ್ಕೆ ತಮ್ಮ ಕನಸು ನನಸಾದ ಘಳಿಕೆಯಾಗಿತ್ತು. ಇದಕ್ಕೆ ಕಾರಣ ತೆಲುಗು ಸ್ಟಾರ್ ಪ್ರಭಾಸ್.
ಹೈದರಾಬಾದ್(ಸೆ.07): ಬಾಹುಬಲಿ ಎಂದೇ ಗುರುತಿಸಿಕೊಂಡಿರುವ ನಟ ಪ್ರಭಾಸ್ ಸಿನಿಮಾ ಸ್ಕ್ರೀನ್ ಬಿಟ್ಟು ಬೇರೆಡೆ ಹೆಚ್ಚಾಗಿ ಕಾಣಿಸಿಕೊಂಡವರಲ್ಲ. ಆದರೆ ಫ್ರಭಾಸ್ ಸೈಲೆಂಟ್ ಆಗಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳುತ್ತಾರೆ. ಇದೀಗ ತಮ್ಮ ಜಿಮ್ ಟ್ರೈನರ್ ಲಕ್ಷ್ಮಣ್ ರೆಡ್ಡಿಗೆ 89 ಲಕ್ಷ ರೂಪಾಯಿ ಮೌಲ್ಯದ ರೇಂಜ್ ರೋವರ್ ವೆಲರ್ ಕಾರು ಗಿಫ್ಟ್ ನೀಡಿದ್ದಾರೆ.
ಕೇವಲ 3,700 ಕಿ.ಮೀ ಪ್ರಯಾಣಸಿದ ಅಮಿತಾಬ್ ಬಚ್ಚನ್ ಪೊರ್ಶೆ ಕೆಮನ್ ಮಾರಾಟಕ್ಕೆ!
ಕೊರೋನಾ ವೈರಸ್ ಕಾರಣ ಜಿಮ್ ಸೆಂಟರ್‌ಗಳನ್ನು ಕಡ್ಡಾಯವಾಗಿ ಮುಚ್ಚಲಾಗಿದೆ. ಹಲವು ಬೇಡಿಕೆ ಇಟ್ಟರೂ ಸರ್ಕಾರ ಜಿಮ್ ತೆರೆಯಲು ಅವಕಾಶ ಕೊಟ್ಟಿರಲಿಲ್ಲ. ಈ ವೇಳೆ ಹಲವು ಜಿಮ್ ಮಾಲೀಕರು, ಟ್ರೈನರ್ ಹಾಗೂ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಪ್ರಭಾಸ್ ಜಿಮ್ ಟ್ರೈನರ್‌ಗೆ ಯಾವ ಕಷ್ಟವೂ ಬರದಂತೆ ಪ್ರಭಾಸ್ ನೋಡಿಕೊಂಡಿದ್ದರು.
ರಾಷ್ಟ್ರಪತಿಗೆ ಮೊದಲ BS6 ಅಲ್ಟುರಾಸ್ G4 ಕಾರು ವಿತರಿಸಿದ ಮಹೀಂದ್ರ!.
ಇಷ್ಟಕ್ಕೆ ಸುಮ್ಮನಾಗದ ಪ್ರಭಾಸ್ ಜಿಮ್ ಟ್ರೈನರ್ ಲಕ್ಷ್ಮಣ್ ರೆಡ್ಡಿಗೆ ರೇಂಜ್ ರೋವರ್ ವೆಲರ್ ಕಾರು ಗಿಫ್ಟ್ ನೀಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ನಟನೊಬ್ಬ, ತಮ್ಮ ಜಿಮ್ ಟ್ರೈನರ್, ಮೇಕಪ್ ಆರ್ಟಿಸ್ಟ್ ಅಥವಾ ಸಿಬ್ಬಂದಿಗಳಿಗೆ ನೀಡಿದ ಅತ್ಯಂತ ದುಬಾರಿ ಗಿಫ್ಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚಗೆ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡೀಸ್ ತಮ್ಮ ಮೇಕಪ್ ಆರ್ಟಿಸ್ಟ್‌ಗೆ ಜೀಪ್ ಕಂಪಾಸ್ ಕಾರು ಗಿಫ್ಟ್ ನೀಡಿದ್ದರು.
ರೇಂಜ್ ರೋವರ್ ವೆಲರ್ ಕಾರು ಆಡಿ Q7 ಹಾಗೂ ಮರ್ಸಿಡೀಸ್ ಬೆಂಝ್GLE ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಭಾರತದಲ್ಲಿ ರೇಂಜ್ ರೋವರ್ ವೆಲರ್ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ಲಭ್ಯವಿದೆ. 2 ಲೀಟರ್, 4 ಸಿಲಿಂಡರ್, ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 247 Bhp ಪವರ್ ಹಾಗೂ 365 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.