ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೇಟೆಡ್ ಜೋಡಿ. ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೊನಸ್ ಅವರ ಕೆಲಸದ ನೀತಿಯನ್ನು ಶ್ಲಾಘಿಸಿದ ನಂತರ ಅವರು ಬಿಬಿಎಂಎ 2021 ರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭ ನಿಕ್ ಪತ್ನಿ ಕುರಿತು ಪ್ರಶಂಸೆ ಜೊತೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ/

ಪ್ರಿಯಾಂಕಾ ಅವರೊಂದಿಗೆ ತೆರೆಮರೆಯ ಫೋಟೋವನ್ನು ಶೇರ್ ಮಾಡಿದ ನಿಕ್ ತನ್ನ ಹೆಂಡತಿಯ ಹಣೆಯ ಮೇಲೆ ಮುತ್ತಿಡುವುದನ್ನು ಕಾಣಬಹುದು. ಗಾಯಕ ತನ್ನ ಪಕ್ಕೆಲುಬಿನ ಗಾಯದ ಸಮಯದಲ್ಲಿ ತನ್ನ ಜೊತೆಯಲ್ಲೇ ಇದ್ದುದಕ್ಕಾಗಿ ಪತ್ನಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 

ಗಂಡನೊಂದಿಗೆ ಬಂದ ಪ್ರಿಯಾಂಕಾ ಚಿನ್ನದ ಹೊಳಪಿಗೆ ಹಾಲಿವುಡ್ ಪುಳಕ!

ನಾನು ಕಳೆದ ವಾರ ಆಕ್ಸಿಡೆಂಟ್ ಮೂಲಕ ನೋವನುಭವಿಸಿ ಈಗ ಪತ್ನಿಯೊಂದಿಗೆ bbmas ಅನ್ನು ಹೋಸ್ಟ್ ಮಾಡುತ್ತಿದ್ದೇನೆ. ಅವರು ನನ್ನ ಚೇತರಿಕೆಗೆ ಮತ್ತು ನೋವಿನ ಪ್ರತಿ ಹಂತದಲ್ಲೂ ಸಹಾಯ ಮಾಡಿದರು. ಲವ್ ಯು ಪ್ರಿಯಾಂಕಾಚೋಪ್ರಾ ಎಂದಿದ್ದಾರೆ ನಿಕ್.

 
 
 
 
 
 
 
 
 
 
 
 
 
 
 

A post shared by NICK JONɅS (@nickjonas)

ನಾನು ಚಿಕ್ಕವನಾಗಿದ್ದಾಗಿನಿಂದ ನಾನು ಈ ಶೋ ನೋಡಿದ್ದೇನೆ ಮತ್ತು ಆತಿಥ್ಯ ವಹಿಸಲು ಕೇಳಿಕೊಳ್ಳುವುದು ಒಂದು ಗೌರವವಾಗಿದೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಮುಂದಿನ ವರ್ಷ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ ನಟ.