Asianet Suvarna News Asianet Suvarna News

ನಾವು ಮದುವೆಯಾಗಲು ನಿರ್ಧರಿಸಿದ್ವಿ; ಪ್ರಿಯಾಂಕಾ ಪತಿಯ ಮೋಸ ಬಿಚ್ಚಿಟ್ಟ ಮಾಜಿ ಲವರ್

ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಮೋಸ ಮಾಡಿದ ಬಗ್ಗೆ ಮಾಜಿ ಲವರ್ ಒಲಿವಿಯಾ ಕಲ್ಪೋ ಮಾತನಾಡಿದ್ದಾರೆ.  

Nick Jonas ex-girlfriend Olivia Culpo reveals she wanted to marry him sgk
Author
First Published Nov 8, 2022, 5:14 PM IST

ಅಮೆರಿಕಾದ ಗಾಯಕ ನಿಕ್ ಜೋಸನ್ ಸದ್ಯ ಭಾರತದ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಇಬ್ಬರೂ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪ್ರಿಯಾಂಕಾ ಅವರನ್ನು ಮದುವೆಯಾಗುವ ಮೊದಲು ನಿಕ್ ಜೋಸನ್ ಹೆಸರು ಅನೇಕ ಯವತಿಯರ ಜೊತೆ ಕೇಳಿ ಬಂದಿತ್ತು. ಅದರಲ್ಲಿ ಒಲಿವಿಯಾ ಕಲ್ಪೋ ಕೂಡ ಒಬ್ಬರು. 2013 ಮತ್ತು 2015ರ ವೇಳೆಗೆ ನಿಕ್ ಜೋಸನ್ ಒಲಿವಿಯಾ ಕಲ್ಪೋ ಜೊತೆ ಸಂಬಂಧದಲ್ಲಿದ್ದರು. ಇಬ್ಬರ ಸಂಬಂಧ ಅಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇಬ್ಬರೂ ಬೇರೆ ಬೇರೆಯಾದ ಸುದ್ದಿ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. 

ಇದೀಗ ಒಲಿವಿಯಾ ಕಲ್ಪೋ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದಾರೆ. ನಿಕ್ ಜೋನಸ್ ಜೊತೆಗೆ ಡೇಟಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಹಾಜರಾಗಿದ್ದ ಒಲಿವಿಯಾ ಕಲ್ಪೋ ಡೇಟಿಂಗ್ ವಿಚಾರದ ಬಗ್ಗೆ ಮೌನ ಮುರಿದರು. ನಿಕ್ ಜೊತೆಗಿನ ಹಿಂದಿನ ಸಂಬಂಧದ ಬಗ್ಗೆ ಮಾತನಾಡಲು ಒಲಿವಿಯಾ ಕಲ್ಪೋ ಅವರಿಗೆ ಕೇಳಲಾಯಿತು. ಮೊದಲಿಗೆ ಹಿಂಜರಿದ ಕಲ್ಪೋ, 'ನಾನು ನಿಜವಾಗಿಯೂ ಅದರ ಬಗ್ಗೆ ಮಾತನಾಡಬೇಕೇ?' ಎಂದು ಹೇಳಿದರು. ಬಳಿಕ ಮಾತನಾಡಿದರು.

ಎಲ್ಲರ ಪ್ರೀತಿ ಬೆಂಬಲದಿಂದ ಹೋಗುತ್ತಿದ್ದೀನಿ; ಮುಂಬೈನಿಂದ ಹೊರಟ ಪ್ರಿಯಾಂಕಾ ಭಾವುಕ ಪೋಸ್ಟ್

'ನಾನು ನಿಕ್ ಜೊತೆ ಡೇಟ್ ಮಾಡಿದ್ದೇನೆ ಮತ್ತು ಅದು ನನಗೆ ಅದ್ಭುತ ಅನುಭವವಾಗಿದೆ. ಆಗ ನನ್ನ ಬಳಿ ಯಾವುದೇ ಬ್ರಾಂಡ್ ಇರಲಿಲ್ಲ, ಹಣವಿರಲಿಲ್ಲ ಆದರೆ ನಾನು ಪ್ರೀತಿಸುತ್ತಿದ್ದೆ. ಅದು ಅದ್ಭುತವಾಗಿತ್ತು. ಆದರೆ ಬ್ರೇಕಪ್ ಬಳಿಕ ನನಗೆ ಗುರುತೇ ಇಲ್ಲವಾಯಿತು' ಎಂದು ಹೇಳಿದರು. 

ನಾನು ಸಂಪೂರ್ಣವಾಗಿ ಅವರ ಜೊತೆ ಗುರುತಿಸಿಕೊಂಡಿದ್ದೆ. ನಾವು ಮದುವೆಯಾಗುತ್ತೇವೆ ಎಂದು ಭಾವಿಸಿದ್ದೆ. ಈ ಬಗ್ಗೆ ನಾನು ಎಲ್ಲಾ ಪ್ಲಾನ್ ಮಾಡಿದ್ದೆ. ಆದರೆ ಬ್ರೇಕಪ್ ಬಳಿಕ ನಾನು ರಾತ್ರಿಯಲ್ಲಾ ಯೋಚಿಸುತ್ತಿದ್ದೆ, ನನ್ನ ಬಾಲ್ಕನಿಯಲ್ಲಿ ಕುಳಿತು ನಾನು ಚಿಂತಿಸುತ್ತಿದ್ದೆ. ನನ್ನ ಅಪಾರ್ಟ್ನೆಂಟ್ ಬಾಡಿಗೆ ಕಟ್ಟಲು ಕಷ್ಟವಾಗಿತ್ತು. ರೇಷನ್ ತರಲು ಕಷ್ಟವಾಗಿತ್ತು' ಎಂದು ನಿಕ್ ಜೋಸನ್ ಬಿಟ್ಟು ಹೋದ ಬಳಿಕ ಅನುಭವಿಸಿದ ಕಷ್ಟವನ್ನು ವಿವರಿಸಿದರು. 

ಪ್ರಿಯಾಂಕಾ 'ಮಿಸ್ ವರ್ಲ್ಡ್' ಗೆದ್ದಿದ್ದು ಮೋಸದಿಂದ; 22 ವರ್ಷಗಳ ಬಳಿಕ ಸಹ ಸ್ಪರ್ಧಿಯ ಗಂಭೀರ ಆರೋಪ

ಸದ್ಯ ನಿಕ್ ಜೋನಸ್ ಪತ್ನಿಯಾಗಿ ಪ್ರಿಯಾಂಕಾ ಚೋಪ್ರಾ ಸಂಸಾರ ಮಾಡುತ್ತಿದ್ದಾರೆ. ಪ್ರಿಯಾಂಕಾ ಇತ್ತೀಚಿಗಷ್ಟೆ ಭಾರತಕ್ಕೆ ಮರಳಿದ್ದರು. ಮೂರು ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ತನ್ನ ತವರಿನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಪ್ರಿಯಾಂಕಾ ಮತ್ತು ನಿಕ್ ಜೋಸನ್ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಮಗುವಿಗೆ ಮಾಲ್ತಿ ಮೇರಿ ಎಂದು ಹೆಸರಿಟ್ಟಿದ್ದಾರೆ. ಪ್ರಿಯಾಂಕಾ ಮಗಳ ಆರೈಕೆ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ.   

Follow Us:
Download App:
  • android
  • ios