Asianet Suvarna News Asianet Suvarna News

ಲಿಪ್‌ಕಿಸ್ ಮಾಡಿ ಐಸ್‌ಕ್ರೀಂ ತಿಂದ ಪ್ರಿಯಾಂಕಾ ದಂಪತಿ; ರೋಮ್ ಬೀದಿಲಿ ನಿಕ್ ಜೋಡಿ ರೊಮ್ಯಾನ್ಸ್, ವಿಡಿಯೋ ವೈರಲ್

ಲಿಪ್‌ಕಿಸ್ ಮಾಡಿ ಐಸ್‌ಕ್ರೀಂ ತಿನ್ನುತ್ತಾ ರೋಮ್ ಬೀದಿ ಸುತ್ತಾಡುತ್ತಿರುವ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Nick Jonas and Priyanka Chopra share kisses and ice cream and they enjoying in Rome sgk
Author
First Published Apr 21, 2023, 1:04 PM IST | Last Updated Apr 21, 2023, 1:04 PM IST

​ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಸದ್ಯ ಸಿಟಾಡೆಲ್ ಸೀರಿಸ್‌ನ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇತ್ತೀಚಿಗಷ್ಟೆ ಪ್ರೀಮಿಯರ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಖುಷಿಯಲ್ಲಿದ್ದಾರೆ. ಈ ನಡುವೆ ಪ್ರಿಯಾಂಕಾ ಪತಿ ನಿಕ್ ಜೋನಸ್ ಜೊತೆ ಜೊತೆ ಹಾಯಾಗಿ ಸುತ್ತಾಡುತ್ತಿದ್ದಾರೆ. ಸಿನಿಮಾ ಕೆಲಸಗಳ ಬಿಡುವೆಯೂ ಈ ದಂಪತಿ ಪ್ರವಾಸಕ್ಕೆ ಹೋಗಿದ್ದು ಮಸ್ತ್ ಮಜಾ ಮಾಡುತ್ತಿದ್ದಾರೆ. ಸದ್ಯ ಇವರು ರೋಮ್​ ನಗರದಲ್ಲಿದ್ದಾರೆ. ಆ ಖುಷಿಯ ವಿಡಿಯೋವನ್ನು ನಿಕ್​ ಜೋನಸ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ರೋಮ್​ ನಗರಕ್ಕೆ ತೆರಳಿರುವ ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ದಂಪತಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಮೂಡ್​ನಲ್ಲಿದ್ದಾರೆ. ಇಬ್ಬರೂ ರೋಮ್ ಬೀದಿಯಲ್ಲಿ ಸುತ್ತಾಡುತ್ತಾ, ಐಸ್ ಕ್ರೀಂ ಸವಿಯುತ್ತಿದ್ದಾರೆ. ಪತ್ನಿ ಪ್ರಿಯಾಂಕಾ ಚೋಪ್ರಾ ತುಟಿಗೆ ಚುಂಬಿಸುತ್ತಿರುವ ವಿಡಿಯೋವನ್ನು ಶೇಕ್ ಮಾಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವೇ ಗಂಟೆಯಲ್ಲಿ ಈ ವಿಡಿಯೋಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿದೆ. 

Karan v/s Priyanka: ಹಾಗ್ಯಾಕೆ ಕಾಲು ತಿಕ್ಕುತ್ತಾ ನುಲಿತೀರಿ... ನೀವೇನು ಅವ್ರಾ? ಎಂದಿದ್ದ ವಿಡಿಯೋ ವೈರಲ್!

ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ನಿಕ್ ಜೊತೆ ಆಗಾಗ ಪ್ರವಾಸಕ್ಕೆ ತೆರಳುವ ಪ್ರಿಯಾಂಕಾ ರೊಮ್ಯಾಂಟಿಕ್ ಫೋಟೋಗಳನ್ನು ಹರಿಬಿಡುತ್ತಾರೆ. ಇದೀಗ ರೋಮ್ ನಲ್ಲಿ ಇಬ್ಬರೂ ಸುತ್ತಾಡುತ್ತಿದ್ದಾರೆ. ಇಬ್ಬರ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದ್ದರೂ ಪ್ರೀತಿಗೆ ಯಾವುದೇ ಅಂತರವಿಲ್ಲ. ಇಬ್ಬರೂ ಸಂತೋಷದ ಜೀವನ ನಡೆಯುತ್ತಿದ್ದಾರೆ. ಅಂದಹಾಗೆ ಈ ದಂಪತಿಗೆ ಮಾಲ್ತಿ ಮೇರಿ ಎನ್ನುವ ಮುದ್ದಾದ ಮಗಳು ಸಹ ಇದ್ದಾಳೆ.  ಇತ್ತೀಚೆಗಷ್ಟೆ ಪ್ರಿಯಾಂಕಾ ಭಾರತಕ್ಕೆ ಆಗಮಿಸಿದ್ದರು. ಆಗ ಮೊದಲ ಬಾರಿಗೆ ಮೊಗಳು ಮಾಲ್ತಿ ಮೇರಿಯನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದರು. ಮುಂಬೈ ವಿಮಾನ ವಿಲ್ದಾಣಕ್ಕೆ ಬಂದಿಳಿದಿದ್ದ ಪ್ರಿಯಾಂಕಾ ಮತ್ತು ನಿಕ್ ದಂಪತಿ ಮುದ್ದಾದ ಮಗಳು ಮಾಲ್ತಿ ಮೇರಿ ಜೊತೆ ಪಾಪರಾಜಿಗಳ ಮುಂದೆ ಪೋಸ್ ನೀಡಿದ್ದರು. ಸುಂದರ ಫೋಟೋಗಳು ಅಭಿಮಾನಿಗಳ ಹೃದಯ ಗೆದ್ದಿತ್ತು.

 
 
 
 
 
 
 
 
 
 
 
 
 
 
 

A post shared by Nick Jonas (@nickjonas)

ಮಗಳ ಜೊತೆ ಮೊದಲ ಬಾರಿಗೆ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಪ್ರಿಯಾಂಕಾ ಬಾಲಿವುಡ್ ಬಳಿಕ ಸದ್ಯ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಮತ್ತು ವೆಬ್ ಸೀರಿಸ್ ಅಂತ ನಿರತರಾಗಿದ್ದಾರೆ. ಸದ್ಯ ಸಿಟಾಡೆಲ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಇದರಲ್ಲಿ ರಿಚರ್ಡ್​ ಮ್ಯಾಡನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಏಪ್ರಿಲ್​ 28ರಿಂದ ಈ ಸೀರಿಸ್​ ರಿಲೀಸ್ ಆಗುತ್ತಿದೆ. ಇತ್ತೀಚೆಗೆ ಇದರ ಪ್ರೀಮಿಯರ್​ ಶೋ ಲಂಡನ್​ನಲ್ಲಿ ನಡೆಯಿತು. ಆ ವೇಳೆ ಕೂಡ ಪ್ರಿಯಾಂಕಾ ಚೋಪ್ರಾ ಜೊತೆ ಪತಿ ನಿಕ್​ ಜೋನಸ್​ಕೂಡ ಹಾಜರಾಗಿದ್ದರು. ಇಬ್ಬರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.   
  


 
 
 

Latest Videos
Follow Us:
Download App:
  • android
  • ios