Asianet Suvarna News Asianet Suvarna News

ಅರ್ಬಾಜ್​ ಖಾನ್​ ಹೊಸ ಪತ್ನಿ ನೋಡಿ ಆಂಟಿ ಹೀಗೆ ಮಾಡೋದಾ? ವೈರಲ್​ ವಿಡಿಯೋಗೆ ಬಿದ್ದೂ ಬಿದ್ದೂ ನಗ್ತಿರೋ ನೆಟ್ಟಿಗರು!

ಅರ್ಬಾಜ್​ ಖಾನ್​ ತಮ್ಮ ಹೊಸ ಪತ್ನಿ ಶುರಾ ಖಾನ್​ ಜೊತೆಗೂಡಿ ಏರ್​ಪೋರ್ಟ್​ಗೆ ಹೋದಾಗ ಅಲ್ಲಿಯ  ಮಹಿಳೆಯೊಬ್ಬರ ರಿಯಾಕ್ಷನ್​ ವೈರಲ್​ ಆಗಿದ್ದು, ನೆಟ್ಟಿಗರು  ಬಿದ್ದೂ ಬಿದ್ದೂ ನಗ್ತಿದ್ದಾರೆ. 
 

Newly weds Arbaaz Khan and Shura Khan at the airport ready for romantic getaway suc
Author
First Published Dec 31, 2023, 12:30 PM IST

 ನಟ ಸಲ್ಮಾನ್​ ಖಾನ್​ ಸಹೋದರ, ನಟಿ ಮಲೈಕಾ ಶರಾವತ್​  ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್​ ಇನ್​ ಪಾರ್ಟನರ್​ ಅರ್ಬಾಜ್​ ಖಾನ್​ ಇತ್ತೀಚೆಗೆ  ಮದುವೆಯಾಗಿದ್ದು, ನವವಧುವಿನ ಜೊತೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.  ಸಹೋದರಿ ಅರ್ಪಿತಾ ಖಾನ್​ ಶರ್ಮಾ ಅವರ ಮನೆಯಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ 56 ವರ್ಷದ ಅರ್ಬಾಜ್​ ಖಾನ್​ ಅವರು ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್​ ಅವರ ಕೈಹಿಡಿದಿದ್ದಾರೆ.   ಪತ್ನಿಯ ಹೆಸರು  ಶುರಾ ಖಾನ್​. ಇವರು ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ.  ಶುರಾ ಖಾನ್ ಮತ್ತು  ಅರ್ಬಾಜ್​ ಖಾನ್​ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ  ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ.  ಶುರಾ ಖಾನ್​ ಅವರು,  ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. 

 
ಇವರ ವಯಸ್ಸಿನ ಅಂತರ ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್​ ಟ್ರೋಲ್​​ ಕೂಡ ಆಗುತ್ತಿದೆ. ಮದುವೆ ಮನೆಗೆ ಬರುವಾಗಿನಿಂದಲೂ ಹಲವು ವಿಡಿಯೋಗಳಲ್ಲಿ ಶುರಾ ಖಾನ್​ ಪಾಪರಾಜಿಗಳ ಕ್ಯಾಮೆರಾ ಎದುರು ನೇರವಾಗಿ ಮುಖಕೊಡದೇ ಮುಖ ಮುಚ್ಚಿಕೊಳ್ಳುವುದನ್ನು ನೋಡಬಹುದು. ಇದೀಗ ಹನಿಮೂನ್​ ಮೂಡ್​ನಲ್ಲಿರೋ ಜೋಡಿ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಜೋಡಿ ಸೆರೆಯಾಗಿದೆ. ತಮ್ಮ ಫೋಟೋ, ವಿಡಿಯೋ ಮಾಡುವುದನ್ನು ಮೊದಲೇ ಅರಿತಿರುವ ಶುರಾ ಖಾನ್​ ಅವರು ಕ್ಯಾಪ್​ ಧರಿಸಿ ಬಂದಿದ್ದಾರೆ. ಈ ಕ್ಯಾಪ್​ ಹಾಕಿಕೊಂಡು ತಮ್ಮ ಮುಖ ಮರೆಮಾಚುವುದು ಅವರ ಉದ್ದೇಶ. ಅದೇ ರೀತಿ ತಲೆಯನ್ನು ಬಗ್ಗಿಸಿಕೊಂಡು ಕ್ಯಾಪ್​ನಲ್ಲಿ ಮುಖ ಎಲ್ಲಿಯೂ ಕಾಣದಂತೆ ಮಾಡಿದ್ದಾರೆ. ಅರ್ಬಾಜ್​ ಖಾನ್​ ಹಸನ್ಮುಖರಾಗಿ ಕ್ಯಾಮೆರಾಕ್ಕೆ  ಪೋಸ್​ ನೀಡುತ್ತಿದ್ದರೆ, ಶುರಾ ಮಾತ್ರ ಅಪ್ಪಿತಪ್ಪಿಯೂ ಮುಖ ತೋರಿಸಲಿಲ್ಲ. ಇದರಿಂದ ಅವರು ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

ಅಪ್ಪನ ವಯಸ್ಸಿನವ ಜೊತೆ ಮದ್ವೆಯಾಗಿ ಈಗ್ಯಾಕೆ ಮುಖ ಮುಚ್ಕೊತ್ಯಾ? ಅರ್ಬಾಜ್​ ಪತ್ನಿ ಸಕತ್​ ಟ್ರೋಲ್​

ಇದರ ಮುಂದುವರೆದಿರುವ ಭಾಗವಾಗಿ ಇದೇ ಏರ್​ಪೋರ್ಟ್​ನಲ್ಲಿ ಈ ಜೋಡಿ ಹೋಗುತ್ತಿದ್ದಂತೆಯೇ ಇವರ ಮುಂದೆ ಇದ್ದ ಮಹಿಳೆಯೊಬ್ಬರು ಅರ್ಬಾಜ್​ ಖಾನ್​ ಹಾಗೂ ಅವರ ಪತ್ನಿಯನ್ನು ವಿಚಿತ್ರವಾಗಿ ನೋಡಿದ್ದಾರೆ. ಮೊದಲಿಗೆ ಅರ್ಬಾಜ್​ ಖಾನ್​ ಅವರನ್ನು ಮೇಲಿನಿಂದ  ಕೆಳಕ್ಕೆ ನೋಡಿದ ಮಹಿಳೆ ನಂತರ ಪತ್ನಿ ಶುರಾ ಅವರನ್ನು ವಿಚಿತ್ರವಾಗಿ ನೋಡಿದ್ದಾರೆ. ನಂತರ ಮತ್ತೊಮ್ಮೆ ಅರ್ಬಾಜ್​ ಮುಖ ನೋಡಿದ್ದಾರೆ. ಆಗಲೂ ಶುರಾ ಖಾನ್​ ತಲೆ ತಗ್ಗಿಸಿಕೊಂಡೇ ನಿಂತಿದ್ದಾರೆ. ಯಾರಾದರೂ ತಮ್ಮ ಫೋಟೋ ತೆಗೆಯುತ್ತಾರೆ, ವಿಡಿಯೋ ಮಾಡಿಬಿಡುತ್ತಾರೆ ಎನ್ನುವ ಕಾರಣದಿಂದ ಶುರಾ ಖಾನ್​ ಯಾರಿಗೂ ಮುಖ ತೋರಿಸಲಿಲ್ಲ. ಆದರೆ ಅಲ್ಲಿರುವ ಮಹಿಳೆ ಮಾತ್ರ ಬಗ್ಗಿ ಬಗ್ಗಿ ಶುರಾ ಅವರನ್ನು ನೋಡಲು ಪ್ರಯತ್ನಿಸಿದ್ದಾರೆ. ಅವರ ಮುಖ ನೋಡಿ ನಂತರ ಮತ್ತೆ ಅರ್ಬಾಜ್​ ಖಾನ್​ರನ್ನು ವಿಚಿತ್ರವಾಗಿ ನೋಡಿದ್ದು, ನಗುವಿನ ಹಿನ್ನೆಲೆಯಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ನೆಟ್ಟಿಗರು ಥಹರೇವಾರಿ ಕಮೆಂಟ್​ ಮಾಡುತ್ತಿದ್ದಾರೆ. 

ಅಪ್ಪ-ಮಗಳ ಥರ ಜೋಡಿ ಇದೆ ಎಂದು ನೂರಾರು ಮಂದಿ ಕಮೆಂಟ್​ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬೇಕಿತ್ತಾ ನಿಮಗೆ, ಬೇರೆ ಯಾರೂ ಸಿಗ್ತಾ ಇರಲಿಲ್ವಾ ಎಂದು ಶುರಾ ಅವರಿಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನು ಹಲವರು ಶುರಾ ಖಾನ್​ ಮುಖ ತೋರಿಸದ ಕಾರಣ, ಅಪ್ಪನ ವಯಸ್ಸಿನವನ ಜೊತೆ ಮದ್ವೆಯಾಗಿ ಇದೀಗ ಮುಖ ಮುಚ್ಚಿಕೊಂಡರೆ ಹೇಗೆ? ಅವನೇ ಬೇಕು ಅಂತ ಮದ್ವೆಯಾಗಿರುವಾಗ ಅರ್ಬಾಜ್​ನಂತೆ ಎಲ್ಲರನ್ನೂ ಫೇಸ್​  ಮಾಡು ಎನ್ನುತ್ತಿದ್ದಾರೆ. 

ಚಾನ್ಸ್‌ ಬೇಕೆಂದ್ರೆ ನಿರ್ದೇಶಕರ ಜೊತೆ ಮಲಗ್ಬೇಕು ಅಂದಿದ್ದ ಬಾಯ್‌ಫ್ರೆಂಡ್‌! ಬಿಗ್‌ಬಾಸ್‌ ಸ್ಪರ್ಧಿಯ ಶಾಕಿಂಗ್‌ ಹೇಳಿಕೆ!

Follow Us:
Download App:
  • android
  • ios