Asianet Suvarna News Asianet Suvarna News

ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮುಂಬೈನ ಐಷಾರಾಮಿ ಮನೆ ಮಾರಿದ ನಟಿ ಸೋನಂ ಕಪೂರ್

ಬಾಲಿವುಡ್ ನಟಿ ಸೋನಮ್ ಕಪೂರ್ ಮುಂಬೈನ ಐಷಾರಾಮಿ ಬಂಗಲೆ ಮಾರಾಟ ಮಾಡಿದ್ದಾರೆ.  

New mommy Sonam Kapoor sells off her Mumbai house for a whopping Rs 32 crore sgk
Author
First Published Jan 4, 2023, 12:59 PM IST

ಬಾಲಿವುಡ್ ನಟಿ ಸೋನಮ್ ಕಪೂರ್ ಸದ್ಯ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸೋನಮ್ ಕಪೂರ್ ಸದ್ಯ ಮುಂಬೈನಲ್ಲಿದ್ದಾರೆ. ಮದುವೆಯಾದ ಬಳಿಕ ನಟಿ ಸೋನಮ್ ಕಪೂರ್ ವಿದೇಶದಲ್ಲಿ ನೆಲೆಸಿದ್ದರು. ಮಗುವಿಗೆ ಜನ್ಮ ನೀಡಿದ ಬಳಿಕ ಭಾರತದಲ್ಲೇ ಇರುವ ಸೋನಮ್ ಸದ್ಯ ತಂದೆಯ ಮನೆಯಲ್ಲಿದ್ದಾರೆ. ಇದೀಗ ಸೋನಮ್  ಕಪೂರ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಸೋನಮ್ ಕಪೂರ್ ಅವರ ಮುಂಬೈ ಮನೆಯನ್ನು ಮಾರಾಟ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಮುಂಬೈನ ಐಷಾರಾಮಿ ಬಂಗಲೆಯನ್ನು ನಟಿ ಸೋನಮ್ ಕಪೂರ್ ಮಾರಾಟ ಮಾಡಿದ್ದಾರೆ. ಮೂಲಗಳ ಪ್ರಕಾರ ಸೋನಮ್ ತನ್ನ ಮನೆಯನ್ನು 32.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 2015ರಲ್ಲಿ ಮುಂಬೈನಲ್ಲಿ ಮನೆಯನ್ನು ಖರೀದಿಸಿದ್ದರು. ಸೋನಮ್. ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ ಬಳಿ ಸೋನಮ್ ಐಷಾರಾಮಿ ಮನೆ ಇತ್ತು. ಸೋನಮ್ ಸದ್ಯ ಸೇಲ್ ಮಾಡಿರುವ ಮನೆಯಲ್ಲಿ ನಾಲ್ಕು ಕಾರ್ ಪಾರ್ಕಿಂಗ್ ಸ್ಲಾಟ್ ಹೊಂದಿತ್ತು. ಸುಮಾರು 5,533 ಚದರ ಅಡಿ ಇತ್ತು ಎನ್ನಲಾಗಿದೆ. 

ಅಂದಹಾಗೆ ಮೂಲಗಳ ಪ್ರಕಾರ ನಟಿಸೋನಮ್ ಕಪೂರ್ ಕಳೆದ ವಾರವೇ ಮನೆಯನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಭಾರಿ ಬೇಡಿಕೆ ಇರುವ ಪ್ರದೇಶದಲ್ಲೇ ಸೋನಮ್ ಮನೆ ಇತ್ತು. ಆದರೆ ಈಗ ಮಾರಾಟ ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಆವರ ಆಪ್ತ ಮೂಲಗಳು ಮಾಹಿತಿ ನೀಡಿದ್ದು, 'ಸೋನಮ್ ಮನೆಯನ್ನು ಮಾರಾಟ ಮಾಡಿದ ಕಟ್ಟಡವು BKCಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿದೆ, ಇದು ಬೇಡಿಕೆಯ ಸ್ಥಳವಾಗಿದೆ' ಎಂದು ಹೇಳಿದ್ದಾರೆ. 

ಅಂದಹಾಗೆ 32.5 ಕೋಟಿ ರೂಪಾಯಿ ಮನೆ ಮಾರಲು ಸುಮಾರು ಸ್ಟ್ಯಾಂಪ್‌ಗೆ 1.95 ಕೋಟಿ ರೂಪಾಯಿ ಪಾವತಿಸಲಾಗಿದೆ ಎನ್ನಲಾಗಿದೆ. ಅಂದಹಾಗೆ ಈ ಮನೆಯನ್ನು SMF ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಖರೀದಿ ಮಾಡಿದೆ ಎಂದು ಬಾಲಿವುಡ್ ನಲ್ಲಿ ಗುಲ್ಲಾಗಿದೆ. 

Breast Feeding ಸಖತ್ ಈಸಿ ಅಂತಿದ್ದಾರೆ ಸೋನಂ, ಅವರ ದೇಹದಲ್ಲಿ ಸ್ಟ್ರೆಚ್ ಮಾರ್ಕ್ ಗಳೇ ಇಲ್ವಂತೆ!

ಸೋನಮ್ ಕಪೂರ್ 2018ರಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಇಬ್ಬರ ವಿವಾಹ ಸಂಭ್ರಮ ಅದ್ದೂರಿಯಾಗಿ ನೆರವೇರಿತ್ತು. ಬಹುತೇಕ ಬಾಲಿವುಡ್ ಕಲಾವಿದರು, ರಾಜಕೀಯ ಮತ್ತು ಉದ್ಯಮಿಗಳು ಭಾಗಿಯಾಗಿದ್ದರು. ಬಳಿಕ ಸೋನಮ್ ಕಪೂರ್ ಪತಿ ಜೊತೆ ವಿದೇಶಕ್ಕೆ ಹಾರಿದ್ದರು. ಕಳೆದ ವರ್ಷ 2022ರಲ್ಲಿ ಮೊದಲ ಮಗುವನ್ನು ಸ್ವಾಗತಿಸಿದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.  

ಮಗನಿಗೆ ಎದೆ ಹಾಲುಣಿಸುತ್ತ ಕರ್ವ ಚೌತ್‌ಗೆ ಮೇಕಪ್ ಮಾಡಿಕೊಂಡ ನಟಿ ಸೋನಮ್: ಫೋಟೋ ವೈರಲ್

ಅಂದಹಾಗೆ ಸೋನಮ್ ಕಪೂರ್ ಮದುವೆ, ಮಗು ಬಳಿಕ ಮತ್ತೆ ಬಣ್ಣ ಹಚ್ಚಲು ಸಜ್ಜಾಗುತ್ತಿದ್ದಾರೆ. ಮೂಲಗಳ ಪ್ರಕಾರ ಸೋನಮ್ ಬ್ಲೈಂಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಶೂಟಿಂಗ್ ಪ್ರಾರಂಭ ಮಾಡುವ ತಯಾರಿ ನಡೆಯುತ್ತಿದ್ದು ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಅಂದಹಾಗೆ ಈ ಸಿನಿಮಾಗೆ ಶೋಮ್ ಮಖಿಜಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸಿರುವ ಸೋನಮ್ ಈಗಾಗಲೇ ಸಿಕ್ಕಾಪಟ್ಟೆ ತೆಳ್ಳಗೆ ಆಗಿದ್ದು ಮತ್ತಷ್ಟು ಫಿಟ್ ಅಂಡ್ ಫೈನ್ ಆಗಲು ಪ್ರಯತ್ನಿಸುತ್ತಿದ್ದಾರೆ. 


 

Follow Us:
Download App:
  • android
  • ios