Asianet Suvarna News Asianet Suvarna News

ವಿಶ್ವ ಸುಂದರಿ ಕಿರೀಟ ಮಿಸ್ ಮಾಡಿಕೊಂಡಿದ್ದ ಮಹೇಶ್ ಬಾಬು ಪತ್ನಿ ನಮ್ರತಾ; ಸ್ಟುಪಿಡ್ ಉತ್ತರವೇ ಕಾರಣ ಎಂದ ನೆಟ್ಟಿಗರು

ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ 1993ರಲ್ಲಿ ಮಿಸ್ ಯೂನಿವರ್ಸ್ ಮಿಸ್ ಮಾಡಿಕೊಂಡಿದ್ದು ಸ್ಟುಪಿಡ್ ಉತ್ತರದಿಂದ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.  

netizens reacts Namrata Shirodkar lost at Miss Universe 1993 because of her dumb answer sgk
Author
First Published Jan 19, 2023, 1:26 PM IST

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಆಗಾಗ ಸುದ್ದಿಯಲ್ಲಿರುತ್ತಾರೆ. ನಮ್ರತಾ ಸದ್ಯ ನಟನೆಯಿಂದ ದೂರ ಇದ್ದರೂ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಮಹೇಶ್ ಬಾಬು ಪತ್ನಿ ನಮ್ರತಾ ಖ್ಯಾತ ಮಾಡೆಲ್ ಕೂಡ ಹೌದು. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. 1993ರಲ್ಲಿ ನಮ್ರತಾ ವಿಶ್ವ ಸುಂದರಿ ಸ್ಪರ್ಧೆಯಲ್ಲಿದ್ದರು. ಆದರೆ ಮಿಸ್ ಯೂನಿವರ್ಸ್ ಕಿರೀಟ ಮಿಸ್ ಆಗಿತ್ತು. ಅಂದು ಮಿಸ್ ಆಗಿದ್ದ ಕಿರೀಟದ ಬಗ್ಗೆ ಇಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಯಾಕೆ ಮಿಸ್ ಆಯಿತು ಎಂದು ನೆಟ್ಟಿಗರು ಕಾರಣ ನೀಡುತ್ತಿದ್ದಾರೆ.   

ನಮ್ರಿತಾ ಮಿಸ್ ಯೂನಿವರ್ಸ್ 1993ರಲ್ಲಿ ಭಾಗಿಯಾಗಿದ್ದ ವಿಡಿಯೋ ಈಗ ವೈರಲ್ ಆಗಿದೆ. ಹಳೆಯ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಗೋಲ್ಡನ್ ಗೌನ್ ಮತ್ತು ಭಾರವಾದ ಕಿವಿಯೋಲೆ ಹಾಕಿ ಹೆಜ್ಜೆ ಹಾಕಿದ್ದ ನಮ್ರತಾ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಪ್ರಶ್ನೆಗಳ ಸುತ್ತಿನ ವಿಡಿಯೋ ಇದಾಗಿದೆ. ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗೆ ನಮ್ರತಾ ನೀಡಿದ ಉತ್ತರ ಈಗ ಚರ್ಚೆಯಾಗುತ್ತಿದೆ. ಅನೇಕರು ವಿವಿಧ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ತನ್ನ ಉತ್ತರದಿಂದನೇ ಆಕೆ ವಿಶ್ವ ಸುಂದರಿ ಕಿರೀಟ ಕಳೆದುಕೊಂಡರು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 

ಮಕ್ಕಳಿಂದ ನಮ್ಮಿಬ್ಬರ ನಡುವೆ ಜಗಳ; ಕೆಲಸ ಬಿಟ್ಟು ಮನೆಯಲ್ಲಿರಲು ಇದೇ ಕಾರಣವೆಂದ ನಮ್ರತಾ ಶಿರೋಡ್ಕರ್‌

 ಮಿಸ್ ಯೂನಿವರ್ಸ್ 1993ರಲ್ಲಿ ನಮ್ರತಾ ಅವರಿಗೆ ನೀವು ಶಾಶ್ವತವಾಗಿ ಬದುಕಲು ಬಯಸುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು 'ಯಾರೂ ಶಾಸ್ವತವಾಗಿ ಬದುಕಲು ಸಾಧ್ಯವಿಲ್ಲ' ಎಂದು ನಂಬಿದ್ದರಿಂದ ಶಾಶ್ವತವಾಗಿ ಬದುಕಲು ಬಯಸುವುದಿಲ್ಲ ಎಂದು ಉತ್ತರಿಸಿದ್ದರು. ಆದರೆ ತೀರ್ಪುಗಾರರಿಗೆ ನಮ್ರತಾ ಉತ್ತರ ಇಂಪ್ರೆಸ್ ಆಗಿಲ್ಲ. ಬಳಿಕ ನಮ್ರತಾ ಮಿಸ್ ಯೂನಿವರ್ಸ್ ನಲ್ಲಿ 6ನೇ ಸ್ಥಾನ ಪಡೆದರು. ಈ ವಿಚಾರ ಈಗ ಚರ್ಚೆಯಾಗುತ್ತಿದೆ. ನಮ್ರಾತ ಉತ್ತರ ಜನರಿಗೂ ಇಷ್ಟವಾಗಿಲ್ಲ. ಉತ್ತರದಿಂದನೇ ಸೋತರು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸ್ಟುಪಿಡ್ ಆಗಿ ಉತ್ತರ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. 

'ನನಗೆ ಅವರ ಉತ್ತರ ಇಷ್ಟವಾಗಲಿಲ್ಲ. ಇದು ಒಂದು ಕಾಲ್ಪನಿಕ ಪ್ರಶ್ನೆ, ಸಾಧ್ಯವಿಲ್ಲ ಎಂದು ಹೇಳಿದರು' ಒಬ್ಬ ನೆಟ್ಟಗ ಕಾಮೆಂಟ್ ಮಾಡಿದ್ದಾರೆ. ಮತ್ತೊಂದು ಕಾಮೆಂಟ್‌ನಲ್ಲಿ, 'ನನಗೆ ಅವj ಉತ್ತರ ಇಷ್ಟವಾಗಲಿಲ್ಲ, ಇದು ಕಾಲ್ಪನಿಕ ಪ್ರಶ್ನೆಯಾಗಿದೆ, ಅದಕ್ಕೆ ಹೌದು ಅಥವಾ ಇಲ್ಲ ಎಂದು ಉತ್ತರಿಸಬೇಕಾಗಿತ್ತು' ಎಂದು ಹೇಳಿದ್ದಾರೆ. 'ಸರಿಯಾದ ಉತ್ತರ ಆಗಿರಲಿಲ್ಲ, ಚಿಕ್ಕ ವಯಸ್ಸಾಗಿದ್ದರೂ ಆ ವಯಸ್ಸಿನವರೇ ಬೇರೆಯವರು ಸುಂದರವಾಗಿ ಉತ್ತರಿಸಿದ್ದನ್ನು ನೋಡಿದ್ದೇವೆ' ಎಂದು ಹೇಳುತ್ತಿದ್ದಾರೆ.

ಮಗ ಬದುಕಲ್ಲ ಎನ್ನುವ ಭಯವಿತ್ತು, ಮಗಳು ಅನ್‌ಪ್ಲ್ಯಾನ್ಡ್‌ ಬೇಬಿ; ಚಿತ್ರರಂಗ ಬಿಡಲು ಕಾರಣ ತಿಳಿಸಿದ ನಮ್ರತಾ

ನಟಿ, ಮಾಡೆಲ್ ನಮ್ರತಾ ಶಿರೋಡ್ಕರ್ 1998ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಹಿಂದಿ ಸಿನಿಮಾ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಕನ್ನಡದಲ್ಲಿ ನಮ್ರತಾ ಚೋರಾ ಚಿತ್ತ ಚೋರಾ ಸಿನಿಮಾದಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಬಳಿಕ ಮಲಯಾಳಂ, ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. 2005ರಲ್ಲಿ ಮಹೇಶ್ ಬಾಬು ಅವರನ್ನು ಮದುವೆಯಾದರು. ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.   

Follow Us:
Download App:
  • android
  • ios