Asianet Suvarna News Asianet Suvarna News

ದಿ ಕಾಶ್ಮೀರ್ ಫೈಲ್ಸ್ ಎಲ್ಲಿ, ಕಾಣಿಸ್ತಿಲ್ಲ; ವಿವೇಕ್ ಅಗ್ನಿಹೋತ್ರಿಗೆ RRR ಫ್ಯಾನ್ಸ್ ಟಾಂಗ್

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಆಸ್ಕರ್ ರೇಸ್‌ನಿಂದ ಹೊಸ ಬಿದ್ದ ಬೆನ್ನಲ್ಲೇ ನೆಟ್ಟಿಗರು ವಿವೇಕ್ ಅಗ್ನಿಹೋತ್ರಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಕಶ್ಮೀರ್ ಫೈಲ್ಸ್ ಎಲ್ಲಿ ಕೇಳುತ್ತಿದ್ದಾರೆ.

Netizens ask Vivek Agnihotri where is The Kashmir Files As Rajmouli's Film Bags Oscar Nomination sgk
Author
First Published Jan 25, 2023, 3:20 PM IST

95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅಂತಿಮ ನಾಮನಿರ್ದೇಶನಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಭಾರತದ RRR ಚಿತ್ರದ ನಾಟು-ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಈ ಹಾಡನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ. ಇತ್ತೀಚೆಗೆ, ನಾಟು-ನಾಟು ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಜೊತೆಗೆ RRR ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಮತ್ತು ನಾಟು-ನಾಟು ಅತ್ಯುತ್ತಮ ಗೀತೆಯನ್ನು ಕ್ರಿಟಿಕ್ಸ್‌ ಚಾಯ್ಸ್‌ ಪ್ರಶಸ್ತಿಗಳಲ್ಲಿ ಗೆದ್ದುಕೊಂಡಿತ್ತು. ಇದೀಗ ಆರ್ ಆರ್ ಆರ್ ಆಸ್ಕರ್‌ಗೆ ಮತ್ತಷ್ಟು ಹತ್ತಿರವಾಗಿರುವ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು.  

ಆರ್ ಆರ್ ಆರ್ ಸಿನಿಮಾ ನಾಮನಿರ್ದೇಶನಗೊಳ್ಳುತ್ತಿದ್ದಂತೆ ದಿ ಕಾಶ್ಮೀರ್ ಫೈಲ್ಸ್ ರೇಸ್ ನಿಂದ ಹೊರ ಬಿತ್ತು ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಆರ್ ಆರ್ ಆರ್ ಸಿನಿಮಾಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ರಾಜಮೌಳಿ ಮತ್ತು ಕೀರವಾಣಿ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಮಯಕ್ಕೆ ಅನೇಕರು ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಕಾಲೆಳೆಯುತ್ತಿದ್ದಾರೆ. 'ಕಾಶ್ಮೀರ್ ಫೈಲ್ಸ್ ಕೂಡ ಹೋಗುತ್ತೆ ಅಂತ ಕೇಳಿದ್ವಿ', 'ಕಾಶ್ಮೀರ್ ಫೈಲ್ಸ್ ಎಲ್ಲಿದೆ ಎಲ್ಲೂ ಕಾಣ್ತಿಲ್ವಲ್ಲಾ' ಎಂದು ಕೇಳುತ್ತಿದ್ದಾರೆ. 

ಇನ್ನು ಕೆಲವರು ಕಾಮೆಂಟ್ ಅಗ್ನಿಹೋತ್ರಿ ಇದೀಗ ಅಂತಾರಾಷ್ಟ್ರೀಯ ಪಿತೂರಿ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ನಿರ್ದೇಶಕ ವಿವೇಕ ಅಗ್ನಿಹೋತ್ರಿ ಭಾರತದಿಂದ ಅಧಿಕೃತ ಆಯ್ಕೆಯಾಗದ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಹಾಗಾಗಿ ನೆಟ್ಟಿಗರು ಈಗ ಟಾಂಗ್ ಕೊಟ್ಟು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಅಗ್ನಿಹೋತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ರಿಹಾನ್ನಾ, ಲೇಡಿ ಗಾಗಾ ಸೇರಿ 4 ಹಾಡುಗಳ ಜೊತೆ ನಾಟು..ನಾಟು..ಸ್ಪರ್ಧೆ; ಆಸ್ಕರ್ ರೇಸ್‌ನಲ್ಲಿವೆ 2 ಸಾಕ್ಷ್ಯಚಿತ್ರ

ಆಸ್ಕರ್ ರೇಸ್‌ನಲ್ಲಿ ಎರಡು ಸಾಕ್ಷ್ಯಚಿತ್ರ 

ಆರ್ ಆರ್ ಆರ್ ಜೊತೆಗೆ ಎರಡು ಭಾರತೀಯ ನಿರ್ಮಿತ ಸಾಕ್ಷ್ಯಚಿತ್ರಗಳು ಸಹ ಆಸ್ಕರ್‌ ನಲ್ಲಿರುವುದು ವಿಶೇಷ.  ಆಲ್ ದಟ್ ಬ್ರೀಥ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ ಫಿಲ್ಮ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದೆ. ಭಾರತದ ಅಧಿಕೃತ ಆಸ್ಕರ್ ಪ್ರವೇಶ ಆಗಿದ್ದ ಚೆಲೋ ಶೋ (ದಿ ಲಾಸ್ಟ್ ಫಿಲ್ಮ್ ಶೋ) ಅತ್ಯುತ್ತಮ ವಿದೇಶಿ ಚಲನಚಿತ್ರ ಕಿರುಪಟ್ಟಿಗೆ ಸೇರಿತ್ತು. ಆದರೆ, ಅಂತಿಮ ನಾಮನಿರ್ದೇಶನಕ್ಕೇರಲು ವಿಫಲವಾಯಿತು. 'ಅರ್ಜೆಂಟೀನಾ, 1985' ಚಿತ್ರದ ಎದುರು ಸೋಲು ಕಂಡಿತ್ತು. ಇದೇ ಚಿತ್ರ ಈ ತಿಂಗಳ ಆರಂಭದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ (ಇಂಗ್ಲಿಷ್ ಅಲ್ಲದ ಭಾಷೆ) ವಿಭಾಗದಲ್ಲಿ ಭಾರತದ ಆರ್‌ಆರ್‌ಆರ್‌ ಚಿತ್ರವನ್ನು ಸೋಲಿಸಿತ್ತು.

ಆಸ್ಕರ್ ತಂದಾಗ ದಯವಿಟ್ಟು ನನಗೂ ಸ್ವಲ್ಪ ಮುಟ್ಟಲು ಕೊಡಿ; RRR ಸ್ಟಾರ್ ರಾಮ್ ಚರಣ್‌ಗೆ ಶಾರುಖ್ ವಿಶೇಷ ಮನವಿ

ಮಾರ್ಚ್ 12ಕ್ಕೆ ಪ್ರಶಸ್ತಿ ಸಮಾರಂಭ

ಆಸ್ಕರ್‌ಗೆ ನಾಮನಿರ್ದೇಶನಗಳನ್ನು ನಟರಾದ ರಿಜ್ ಅಹ್ಮದ್ ಮತ್ತು ಅಲಿಸನ್ ವಿಲಿಯಮ್ಸ್ ಪ್ರಕಟಿಸಿದ್ದಾರೆ. 95 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ಚಾಟ್ ಶೋ ಹೋಸ್ಟ್ ಜಿಮ್ಮಿ ಕಿಮ್ಮೆಲ್ ಮೂರನೇ ಬಾರಿಗೆ ಹೋಸ್ಟ್ ಮಾಡಲಿದ್ದಾರೆ. 

Follow Us:
Download App:
  • android
  • ios