ರಣ್ವೀರ್ ಗುರುತು ಮರೆತ ಫಾರ್ಮುಲಾ ಒನ್ ರೇಸರ್.. ಡಿಪ್ಸ್ ಪತಿ ರಿಯಾಕ್ಷನ್ ಹೇಗಿದೆ ನೋಡಿ
ಹಾಗೆಯೇ ಬಾಲಿವುಡ್ ನಟ ರಣ್ವೀರ್ ಸಿಂಗ್ (Ranveer Singh)ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಸಾಮಾನ್ಯರಂತೆ ಫಾರ್ಮುಲಾ 1 ರೇಸರ್ (Formula 1 race) ಜೊತೆ ತಾನೊಬ್ಬ ಭಾರತೀಯ ಸೆಲೆಬ್ರಿಟಿ, ಸಿನಿಮಾ ನಟ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social Media) ವೈರಲ್ ಆಗಿದೆ.
ಎಲ್ಲರಿಗೂ ಎಲ್ಲರ ಪರಿಚಯ ಇರಲೇಬೇಕೆಂದೇನಿಲ್ಲ. ಕೆಲವೊಮ್ಮೆ ಸೆಲೆಬ್ರಿಟಿಗಳಾಗಿದ್ದರೂ ಕೆಲ ಜನ ಸಾಮಾನ್ಯರಿಗೆ ಅವರ ಪರಿಚಯವಿರುವುದಿಲ್ಲ. ಕೆಲವರಿಗೆ ಪರಿಚಯವಿದ್ದರೂ ಗಣ್ಯರ ಕಂಡು ಅವರು ಮುಗಿ ಬೀಳುವುದಿಲ್ಲ. ನಮ್ಮಂತೆ ಅವರೆಂದು ಸುಮ್ಮನಿದ್ದು ಬಿಡುತ್ತಾರೆ. ಹಾಗೆಯೇ ಎಲ್ಲಾ ಸೆಲೆಬ್ರಿಟಿಗಳಿಗೆ ಮತ್ತೊಬ್ಬ ಸೆಲೆಬ್ರಿಟಿಯ ಪರಿಚಯ ಇರಬೇಕೆಂಬ ನಿಯಮವೇನಿಲ್ಲ. ಅನೇಕರು ತಮ್ಮನ್ನು ಜನ ಗುರುತಿಸುವುದಕ್ಕಿಂತ ಗುರುತಿಸದೇ ಇರುವುದೇ ಉತ್ತಮ ಎಂದು ಬಯಸುತ್ತಾರೆ. ಬಹುತೇಕ ನಟರಿಗೆ ತಮ್ಮ ಈ ಜನಪ್ರಿಯತೆಯಿಂದಾಗಿ ಖಾಸಗಿ ಜೀವನವನ್ನು ಎಲ್ಲರಂತೆ ಎಂಜಾಯ್ ಮಾಡಲಾಗುವುದಿಲ್ಲ. ಇದೇ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ವಿದೇಶಕ್ಕೆ ತೆರಳಿ ಇಲ್ಲಿನ ಜನ ಸಾಮಾನ್ಯರಂತೆ ಅಲ್ಲಿನ ಗಲ್ಲಿ ಗಲ್ಲಿಗಳಲ್ಲಿ ತಿರುಗುತ್ತಾ ಎಂಜಾಯ್ ಮಾಡುತ್ತಿರುತ್ತಾರೆ.
ಹಾಗೆಯೇ ಬಾಲಿವುಡ್ ನಟ ರಣ್ವೀರ್ ಸಿಂಗ್ (Ranveer Singh)ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಸಾಮಾನ್ಯರಂತೆ ಫಾರ್ಮುಲಾ 1 ರೇಸರ್ (Formula 1 race) ಜೊತೆ ತಾನೊಬ್ಬ ಭಾರತೀಯ ಸೆಲೆಬ್ರಿಟಿ, ಸಿನಿಮಾ ನಟ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social Media) ವೈರಲ್ ಆಗಿದೆ. ಬಾಲಿವುಡ್ ನಟಿ ದೀಪಿಕಾ (Deepika Padukone) ಪತಿ, ರಣ್ವೀರ್ ಸಿಂಗ್ ಫಾರ್ಮುಲಾ ರೇಸಿಂಗ್ ಮಾಜಿ ಚಾಲಕ ಹಾಗೂ ವೀಕ್ಷಕ ವಿವರಣೆಗಾರ ಮರ್ಟಿನ್ ಬ್ರಂಡಲ್ (Martin Brundle) ಅವರನ್ನು ಅಬುದಾಬಿಯಲ್ಲಿ ನಡೆಯುತ್ತಿದ್ದ ಫಾರ್ಮುಲ 1 ರೇಸ್‌ನಲ್ಲಿ ಭೇಟಿಯಾಗಿದ್ದರು. ಆದರೆ ಭಾರತದಲ್ಲಿ ಸೆಲೆಬ್ರಿಟಿ ಆಗಿ ಸಾಕಷ್ಟು ಜನಪ್ರಿಯವಾಗಿರುವ ರಣ್ವೀರ್ ಬಗ್ಗೆ ಮರ್ಟಿನ್ ಬ್ರಂಡಲ್ ಅವರಿಗೆ ಮಾತ್ರ ಪರಿಚಯವಿರಲಿಲ್ಲ. ಹೀಗಾಗಿ ರಣ್‌ವೀರ್ ತನ್ನನ್ನು ತಾನು ಅವರಿಗೆ ಪರಿಚಯ ಮಾಡಿಕೊಟ್ಟರು...
ಗ್ರೀಡ್ ವಾಕ್ ವೇಳೆ ಬ್ರಂಡಲ್ ನಟ ರಣ್ವೀರ್ ಅವರನ್ನು ಸ್ವಾಗತಿಸಿದ್ದಾರೆ, ವಿಭಿನ್ನ ಫ್ಯಾಷನ್ ವಿಚಾರದಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುವ ರಣ್ವೀರ್ ಆ ಕ್ಷಣವನ್ನು ಬಣ್ಣಿಸಿದ್ದು ಹೀಗೆ, ನನಗೆ ಈ ಕ್ಷಣಕ್ಕೆ ನೀವು ಯಾರೆಂದು ನೆನಪಾಗುತ್ತಿಲ್ಲ. ದಯವಿಟ್ಟು ನೀವು ಯಾರೆಂದು ನನಗೆ ಹೇಳುವಿರಾ ಎಂದು ಅವರು ಹೇಳುತ್ತಿದ್ದಂತೆ ನಾನು ವಿಶ್ವದ ಅತೀ ಎತ್ತರದಲ್ಲಿದ್ದೇನೆ ಎಂದು ನನಗೆ ಭಾಸವಾಯ್ತು, ನನ್ನ ಎದೆ ಬಡಿತ ಹಾಗೂ ಉಸಿರಾಟದ ಏರಿಳಿತ ನನಗೇ ಕೇಳಿಸುತ್ತಿತ್ತು ಎಂದು ಆ ಕ್ಷಣವನ್ನು ರಣ್ವೀರ್ ಹೇಳಿಕೊಂಡಿದ್ದಾರೆ. ನಂತರ ಬ್ರಂಡಲ್ ಬಳಿ ತಾನು ಯಾರೆಂದು ರಣ್ವೀರ್ ಹೇಳಿಕೊಂಡಿದ್ದಾರೆ. ನಾನೊಬ್ಬ ಬಾಲಿವುಡ್ ನಟ (Bollywood actor), ಭಾರತದ ಮುಂಬೈನಿಂದ ಬಂದಿದ್ದೇನೆ. ನನ್ನೊಬ್ಬ ಮನೋರಂಜಕ ಎಂದು ಹೇಳಿದ್ದಾರೆ. ನಂತರ ರಣ್ವೀರ್ ಅವರ ವಿಚಿತ್ರ ಧಿರಿಸಿಗೆ ಬ್ರಂಡಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವೇಳೆ ಈ ಉಡುಗೆಯನ್ನು ಮರುದಿನ ಬೆಳಗ್ಗೆ ಹಿಂದಿರುಗಿಸಬೇಕು ಎಂದು ರಣ್ವೀರ್ ಹಾಸ್ಯ ಮಾಡಿದ್ದಾರೆ.
ಆ ಡರ್ಟಿ ಜಾಗಕ್ಕೆ ಕರೆದ್ರು, ಬಿ ಸೆಕ್ಸಿ ಎಂದರು; ಬಾಲಿವುಡ್ ಕರಾಳ ಮುಖ ಬಿಚ್ಚಿಟ್ಟ ನಟ ರಣ್ವೀರ್ ಸಿಂಗ್
ತಾನೊಬ್ಬ ಸೆಲೆಬ್ರಿಟಿ ನಟ ಎಂಬ ಅಹಂಕಾರ, ದೊಡ್ಡಸ್ತಿಕೆ ಇಲ್ಲದೇ ರಣ್ವೀರ್ ಬಹಳ ವಿನಮ್ರವಾಗಿ ಬ್ರಂಡಲ್ ಬಳಿ ತಮ್ಮ ಪರಿಚಯ ಹೇಳಿಕೊಂಡಿರುವುದಕ್ಕೆ ನೆಟ್ಟಿಗರು ಬಹಳ ಖುಷಿಯಾಗಿದ್ದು, ರಣ್ವೀರ್ ಗುಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಣ್ವೀರ್ ಆ ಸಂದರ್ಭವನ್ನು ನಿರ್ವಹಿಸಿದ ರೀತಿ ಬಹಳ ಶ್ಲಾಘನೀಯವಾಗಿತ್ತು. ಆತನ ಮುಖದಲ್ಲಿ ಸ್ವಲ್ಪವೂ ಇಗೋ ಅಹಂಕಾರ ಇರಲಿಲ್ಲ. ಆತನ ನಮ್ರತೆ ಇಷ್ಟವಾಯ್ತು ಹೀಗೆ ಅನೇಕರು ರಣ್ವೀರ್ ನಡತೆಯನ್ನು ಶ್ಲಾಘಿಸಿದ್ದಾರೆ.
ಆವಾರ್ಡ್ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡ ದೀಪಿಕಾ ರಣವೀರ್ !
ಹಿಂದೊಮ್ಮೆ ಟೆನಿಸ್ ತಾರೆ ಮರಿಯಾ ಶರಪೋವಾ (Maria Sharapova) ಕೂಡ ಭಾರತೀಯ ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಗುರುತಿಸದ ಪ್ರಸಂಗವನ್ನು ಇದೇ ವೇಳೆ ನೆಟ್ಟಿಗರು ನೆನೆಸಿಕೊಂಡಿದ್ದಾರೆ.